ಕರ್ನಾಟಕ

karnataka

ETV Bharat / bharat

ಸಿಯಾಚಿನ್‌ನಲ್ಲಿರೋ ಪ್ರತಿ ಸೈನಿಕನ ಕೈ ಸೇರಿತು ಇಷ್ಟೊಂದು ಮೌಲ್ಯದ ಸುರಕ್ಷಾ ಕಿಟ್​ - ಒಂದು ಲಕ್ಷ ರೂ.ಗಳ ಮೌಲ್ಯದ ವೈಯಕ್ತಿಕ ಕಿಟ್

ಸಿಯಾಚಿನ್ ಹಿಮನದಿಯಲ್ಲಿ ನಿಯೋಜಿಸಲಾಗಿರುವ ಭಾರತೀಯ ಸೈನಿಕರಿಗೆ, ಶೀತ ಗಾಳಿ ಮತ್ತು ಚಳಿಯಿಂದ ರಕ್ಷಣೆ ನೀಡುವ ಸಲುವಾಗಿ ಒಂದು ಲಕ್ಷ ರೂ.ಗಳ ಮೌಲ್ಯದ ವೈಯಕ್ತಿಕ ಕಿಟ್ ನೀಡಲಾಗ್ತಿದೆ.

soldier deployed in Siachen
ಸೈನಿಕನಿಗೆ ಒಂದು ಲಕ್ಷ ರೂ.ಗಳ ವೈಯಕ್ತಿಕ ಕಿಟ್ ವಿತರಣೆ

By

Published : Jan 22, 2020, 5:44 PM IST

ನವದೆಹಲಿ: ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ ನಲ್ಲಿ ನಿಯೋಜಿಸಲಾಗಿರುವ ಭಾರತೀಯ ಸೈನಿಕರು, ಅಲ್ಲಿನ ತೀವ್ರ ಶೀತ ಗಾಳಿಯಿಂದ ರಕ್ಷಣೆ ಪಡೆಯುವ ಸಲುವಾಗಿ ಒಂದು ಲಕ್ಷ ರೂ.ಗಳ ಮೌಲ್ಯದ ವೈಯಕ್ತಿಕ ಕಿಟ್ ಅನ್ನು ಭಾರತೀಯ ಸೇನೆ ನೀಡಿದೆ.

ಸೈನ್ಯದ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾನೆ ಅವರು ಜನವರಿ ಎರಡನೇ ವಾರದಲ್ಲಿ ಸಿಯಾಚಿನ್ ಪ್ರವಾಸದಲ್ಲಿದ್ದರು. ಈ ವೇಳೆ ಸೈನಿಕರಿಗೆ ನೀಡಬೇಕಾಗಿರುವ ಸೈನ್ಯದ ಉಪಕರಣಗಳು ಮತ್ತು ವೈಯಕ್ತಿಕ ಕಿಟ್​​ನನ್ನು ಪರಿಶೀಲನೆ ನಡೆಸಿದ್ದರು.

ಚಳಿಗಾಲದಿಂದ ರಕ್ಷಣೆ ಪಡೆಯಲು ಮತ್ತು ತೀವ್ರ ಶೀತ ಪರಿಸ್ಥಿತಿ ಬಂದಾಗ ಸೈನಿಕರು ಬದುಕುಳಿಯಲು ಅವರಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಬೇಕಾದ ಅಗತ್ಯದ ಬಗ್ಗೆ ಭೂ ಸೇನಾಧಿಕಾರಿ ಮಾಹಿತಿ ಪಡೆದುಕೊಂಡಿದ್ದರು. ಖುದ್ದು ಭೇಟಿ ನೀಡಿ ಪರಿಸ್ಥಿತಿ ಅರಿತುಕೊಂಡಿದ್ದ ಸೇನಾ ವರಿಷ್ಠ ನರವಾನೆ, ಇಲ್ಲಿನ ಸೈನಿಕರಿಗೆ ಅಗತ್ಯ ಪರಿಕರ ಹಾಗೂ ಅತ್ಯಾಧುನಿಕ ಉಪಕರಣಗಳ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದರು.

ಸೈನಿಕರಿಗೆ ನೀಡುವ ವೈಯಕ್ತಿಕ ಕಿಟ್‌ನ ಅತ್ಯಂತ ದುಬಾರಿ ಭಾಗವೆಂದರೆ ಬಹುಪದರದ ಚಳಿಗಾಲದ ಉಡುಪುಗಳು, ಇವುಗಳ ಬೆಲೆ ಪ್ರತಿ ಸೆಟ್‌ಗೆ ಸುಮಾರು 28,000 ರೂ. ಮತ್ತು ವಿಶೇಷ ಸ್ಲೀಪಿಂಗ್ ಬ್ಯಾಗ್​ಗೆ 13,000 ರೂ. ಡೌನ್ ಜಾಕೆಟ್ ಮತ್ತು ಗ್ಲೌಜ್​​ಗೆ 14,000 ರೂ. ಮತ್ತು ಶೂಗಳ ಬೆಲೆ ಸುಮಾರು 12,500 ರೂ. ಇದೆ. ಇನ್ನು ಸೈನಿಕರಿಗೆ ಒದಗಿಸಲಾಗುತ್ತಿರುವ ಸಲಕರಣೆಗಳಲ್ಲಿ, ಆಕ್ಸಿಜನ್ ಸಿಲಿಂಡರ್ ಪ್ರತಿ ಒಂದಕ್ಕೆ 50,000 ರೂ. ವೆಚ್ಚವಾಗುತ್ತದೆ. ಆಕ್ಸಿಜನ್ ತುಂಬಾ ಕಡಿಮೆ ಇರುವಂತಹ ಎತ್ತರ ಪ್ರದೇಶದಲ್ಲಿ ಇದು ಬಹಳ ಮುಖ್ಯವಾಗಿದೆ.

ಪಾಕಿಸ್ತಾನ ಸೇನೆಯಿಂದ ವಶಪಡಿಸಿಕೊಳ್ಳಲು ಯತ್ನಿಸಲಾಗಿದ್ದ, ಸಿಯಾಚಿನ್ ಹಿಮನದಿಯ ಬಳಿ ಭಾರತವು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ 17,000 ಅಡಿಗಳಿಂದ 22,000 ಅಡಿಗಳವರೆಗಿನ ಎತ್ತರದಲ್ಲಿ ಪಡೆಗಳನ್ನು ನಿಯೋಜಿಸುತ್ತಿದೆ.

ABOUT THE AUTHOR

...view details