ಕನ್ಯಾಕುಮಾರಿ: ಪಾಕಿಸ್ತಾನದಿಂದ ಬಂಧಮುಕ್ತಗೊಳ್ಳುತ್ತಿರುವ ವಿಂಗ್ ಕಮಾಂಡರ್ ಅಭಿನಂದನ್ ಭಾರತ ದೇಶದ ಹೆಮ್ಮೆ ಎಂದು ಕನ್ಯಾಕುಮಾರಿಯಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ಅಭಿನಂದನ್ ನಮ್ಮ ದೇಶದ ಹೆಮ್ಮೆ: ಪ್ರಧಾನಿ ಮೋದಿ - ವಿಂಗ್ ಕಮಾಂಡರ್ ಅಭಿನಂದನ್
ಭಯೋತ್ಪಾದನೆಯನ್ನು ನಿರ್ಮೂಲನೆ ವಿಚಾರದಲ್ಲಿ ಎಲ್ಲ ರಾಷ್ಟ್ರಗಳು ಭಾರತದೊಂದಿಗೆ ನಿಂತಿದೆ. ಭಯೋತ್ಪಾದನೆಯ ವಿಚಾರದಲ್ಲಿ ನಾವು ಎಂದಿಗೂ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಮೋದಿ ಗುಡುಗಿದ್ದಾರೆ.
ಪ್ರಧಾನಿ ಮೋದಿ
ಭಾರತದ ಮೊದಲ ಮಹಿಳಾ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಮಿಳುನಾಡು ಮೂಲದವರು ಎನ್ನುವುದು ಹೆಮ್ಮೆಯ ವಿಚಾರ ಎಂದು ಇದೇ ವೇಳೆ ಮೋದಿ ನುಡಿದಿದ್ದಾರೆ.
ಹಿಂದಿನ ಯುಪಿಎ ಸರ್ಕಾರ ಸರ್ಜಿಕಲ್ ಸ್ಟ್ರೈಕ್ಗೆ ಅನುಮತಿ ನೀಡಿರಲಿಲ್ಲ, ಮುಂಬೈ ದಾಳಿ ವೇಳೆಯೇ ಸೇನೆ ಸರ್ಕಾರಕ್ಕೆ ಒತ್ತಾಯ ಮಾಡಿತ್ತು. ಆದರೆ ಆಗಿನ ಸರ್ಕಾರ ಇಂತಹ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಈ ಸಂಬಂಧ ಮೋದಿ ಹಿಂದಿನ ಸರ್ಕಾರವನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.