ಕರ್ನಾಟಕ

karnataka

ETV Bharat / bharat

ರಾಮ ಮಂದಿರ ನಿರ್ಮಾಣಕ್ಕೆ ಪ್ರತಿ ಕುಟುಂಬ ಒಂದೊಂದು ಇಟ್ಟಿಗೆ ಕೊಡಬೇಕು: ಯೋಗಿ - ರಾಮಮಂದಿರ ಸುದ್ದಿ

ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ನಿರ್ಮಾಣಕ್ಕೆ ಜಾರ್ಖಂಡ್​ನ ಪ್ರತಿ ಕುಟುಂಬವೂ ಒಂದೊಂದು ಇಟ್ಟಿಗೆ ಹಾಗೂ 11 ರೂಪಾಯಿಗಳನ್ನು ಕೊಡಬೇಕು. ರಾಮರಾಜ್ಯವು ಸಮಾಜದ ಕೊಡುಗೆಯಿಂದ ಮುನ್ನಡೆಯುತ್ತದೆ ಎಂದು ಜಾರ್ಖಂಡ್​ ಚುನಾವಣಾ ರ‍್ಯಾಲಿಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನವಿ ಮಾಡಿದ್ದಾರೆ.

yogi adityanath, ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

By

Published : Dec 14, 2019, 12:17 PM IST

ರಾಂಚಿ(ಜಾರ್ಖಂಡ್​):ರಾಮ ಮಂದಿರ ನಿರ್ಮಾಣಕ್ಕೆ ಜಾರ್ಖಂಡ್​ನ ಪ್ರತಿ ಕುಟುಂಬವೂ ಒಂದೊಂದು ಇಟ್ಟಿಗೆ ಕೊಡಬೇಕು ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಜಾರ್ಖಂಡ್​ನ ಗಿರಿದಿಹ್​ನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಜಾರ್ಖಂಡ್​ನ ಪ್ರತಿ ಕುಟುಂಬವೂ ಒಂದೊಂದು ಇಟ್ಟಿಗೆ ಹಾಗೂ 11 ರೂಪಾಯಿಗಳನ್ನು ಕೊಡಬೇಕು. ರಾಮರಾಜ್ಯವು ಸಮಾಜದ ಕೊಡುಗೆಯಿಂದ ಮುನ್ನಡೆಯುತ್ತದೆ ಎಂದು ಹೇಳಿದರು.

ಇದೇ ಡಿಸೆಂಬರ್​ 12ರಂದು ನವೆಂಬರ್​ 9ರ ಅಯೋಧ್ಯೆ ಐತಿಹಾಸಿಕ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್​ ತಿರಸ್ಕರಿಸಿತ್ತು.

ABOUT THE AUTHOR

...view details