ನವದೆಹಲಿ:ಯುರೋಪಿಯನ್ ಯೂನಿಯನ್‌ನ ಭಾರತದ ಹೊಸ ರಾಯಭಾರಿ ಕಾಶ್ಮೀರದಲ್ಲಿ ಸಂವಹನ ಸಂಪರ್ಕ ಮತ್ತು ಹಕ್ಕುಗಳ ಪುನರ್ ಸ್ಥಾಪನೆ ಪ್ರತಿಪಾದಿಸಿದರು. ನವದೆಹಲಿಯಲ್ಲಿ ಉಗೊ ಅಸ್ತೂಟೊ ರಾಯಭಾರಿಯಾಗಿ ಇಂದು ಅಧಿಕಾರ ವಹಿಸಿಕೊಂಡ ನಂತರ ಅವರ ಮೊದಲ ಮಾಧ್ಯಮ ಸಂವಾದದಲ್ಲಿ, 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಮತ್ತು ಈ ವರ್ಷದ ಅಗಸ್ಟ್‌ನಲ್ಲಿ ಜಮ್ಮು-ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಮರುಸಂಘಟಿಸಿದ ನಂತರ ಯುರೋಪಿಯನ್ ಒಕ್ಕೂಟದ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಒತ್ತಿ ಹೇಳಿದ್ದಾರೆ.
“ನಾವು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಕಾಳಜಿ ವಹಿಸುತ್ತೇವೆ. ಕಾಶ್ಮೀರದಲ್ಲಿ ಮುಕ್ತವಾಗಿ ಓಡಾಡುವ ಸ್ವಾತಂತ್ರ್ಯ ಮತ್ತು ಸಹಜ ಸ್ಥಿತಿಯನ್ನು ಪುನಃ ಸ್ಥಾಪಿಸುವುದು ಬಹಳ ಮುಖ್ಯ, ”ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,“ಭಾರತದ ಸುರಕ್ಷತೆಯ ಕಾಳಜಿ ಬಗ್ಗೆ ಇಯು ಅರ್ಥಮಾಡಿಕೊಂಡಿದೆ" ಎಂದು ಹೇಳಿದರು.
ಅಕ್ಟೋಬರ್ ಅಂತ್ಯದಲ್ಲಿ ಕೆಲವು ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯರ(ಎಂಇಪಿ) ವಿವಾದಾತ್ಮಕ ಕಾಶ್ಮೀರ ಭೇಟಿ ಅಧಿಕೃತವಲ್ಲ ಎಂದು ರಾಯಭಾರಿ ಸ್ಪಷ್ಟಪಡಿಸಿದರು. ಆದರೂ ಅವರ ವೈಯಕ್ತಿಕ ಸಾಮರ್ಥ್ಯದಿಂದ ಕೈಗೊಳ್ಳಲಾಗಿದ್ದ ಈ ಭೇಟಿಯು ‘ನ್ಯಾಯಸಮ್ಮತವಾಗಿದೆ’ ಹಾಗೂ "ಈ ಭೇಟಿಯು ಅದರ ಸಂಸತ್ತಿನ ನೀತಿ ನಿರ್ಧಾರಗಳ ಅಭಿವ್ಯಕ್ತಿಯಾಗಿರಲಿಲ್ಲ" ಎಂದು ಅಸ್ತೂಟೊ ಸ್ಪಷ್ಟಪಡಿಸಿದರು.
ಕಾಶ್ಮೀರದಲ್ಲಿನ ಸಾಂವಿಧಾನಿಕ ಬದಲಾವಣೆಗಳ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವುದರ ನಡುವೆ ರಾಯಭಾರಿ ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವಿನ ದ್ವಿಪಕ್ಷೀಯ ಮಾತುಕತೆ ಪರ ಬ್ಯಾಟಿಂಗ್ ಮಾಡಿದರು. ಯಾವಾಗಲೂ 'ಮಾತುಕತೆ‘ 'ಪ್ರಾದೇಶಿಕ ಹಿತಾಸಕ್ತಿಗೆ ಮುಂದಿನ ದಾರಿ’ ಎಂದು ಅವರು ಅಭಿಪ್ರಾಯಪಟ್ಟರು. “ನಾವು (ಇಯು) ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆಗೆ ಒತ್ತು ನೀಡಿದ್ದೇವೆ.