ಹೈದರಾಬಾದ್:ಸೆ.13 ರಂದು ರಾಮೋಜಿ ರಾವ್ ಒಡೆತನದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ 'ಈಟಿವಿ ಭಾರತ' ಪಡೆದಿದ್ದ 2019ನೇ ಸಾಲಿನ ಐಬಿಸಿ ಇನ್ನೋವೇಷನ್ ಪ್ರಶಸ್ತಿಯನ್ನ ರಾಮೋಜಿ ಗ್ರೂಪ್‌ನ ಅಧ್ಯಕ್ಷ ರಾಮೋಜಿ ರಾವ್ ಅವರಿಗೆ ಪ್ರದಾನ ಮಾಡಲಾಗಿದೆ.
ರಾಮೋಜಿ ರಾವ್ ಅವರಿಗೆ ಐಬಿಸಿ ಇನ್ನೋವೇಷನ್ ಅವಾರ್ಡ್ ಪ್ರದಾನ ಆ್ಯಮ್ಸ್ಟರ್ಡ್ಯಾಮ್ನಲ್ಲಿ ನಡೆದ ಸಮಾರಂಭದಲ್ಲಿ ಈಟಿವಿ ಇಂಡಿಯಾದ ತಾಂತ್ರಿಕ ಪಾಲುದಾರ ಪೊವೆಲ್ ಅವರು ಪ್ರಶಸ್ತಿ ಸ್ವೀಕರಿಸಿದ್ದರು. ಇದೀಗ ರಾಮೋಜಿ ಫಿಲ್ಮ್ ಕಾರ್ಪೊರೇಷನ್‌ನಲ್ಲಿ ರಾಮೋಜಿ ಗ್ರೂಪ್‌ನ ಅಧ್ಯಕ್ಷ ರಾಮೋಜಿ ರಾವ್ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಕ್ಷಿಪ್ರ ಅವಧಿಯಲ್ಲಿ ಡಿಜಿಟಲ್ ಸುದ್ದಿ ಕ್ಷೇತ್ರದಲ್ಲಿ ಈಟಿವಿ ಭಾರತದ ಗಣನೀಯ ಪ್ರಗತಿಯನ್ನು ಪರಿಗಣಿಸಿ 'ಕಂಟೆಂಟ್ ಎವಿರಿವ್ಯಾರ್' ಎನ್ನುವ ವಿಭಾಗದಲ್ಲಿ ಈವಿಟಿ ಭಾರತ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಈಟಿವಿ ಭಾರತ ದೇಶದ ಪ್ರಮುಖ 13 ಭಾಷೆಗಳಲ್ಲಿ ಸುದ್ದಿಯನ್ನು ದಿನದ 24 ಗಂಟೆ ನೀಡುತ್ತದೆ. ಹಿಂದಿ, ಕನ್ನಡ, ತಮಿಳು, ತೆಲುಗು, ಉರ್ದು, ಮಲಯಾಳಂ, ಗುಜರಾತಿ, ಮರಾಠಿ, ಬೆಂಗಾಲಿ, ಒಡಿಯಾ, ಅಸ್ಸಾಮಿ, ಪಂಜಾಬಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಈಟಿವಿ ಭಾರತದ ಸುದ್ದಿಗಳು ಲಭ್ಯವಿದೆ.
ಗ್ರಾಮೀಣ ಸುದ್ದಿಯಿಂದ ಅಂತಾರಾಷ್ಟ್ರೀಯ ಸುದ್ದಿಗಳನ್ನು ಮೊಬೈಲ್ ಆ್ಯಪ್ ಮೂಲಕ ಈಟಿವಿ ಭಾರತ ನೀಡುತ್ತಿದ್ದು, ಈ ವರ್ಷದ ಮಾರ್ಚ್ 21ರಂದು ಲಾಂಚ್ ಆಗಿದ್ದ ಈಟಿವಿ ಭಾರತ ಮೊಬೈಲ್ ಆ್ಯಪ್ ವಸ್ತುನಿಷ್ಠ ಹಾಗೂ ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ. ಜೊತೆಗೆ ಮೊಬೈಲ್ ಆ್ಯಪ್ ಮೂಲಕ ಸುದ್ದಿಯ ಜೊತೆಗೆ ನ್ಯೂಸ್ ಬುಲೆಟಿನ್ ನೀಡುವ ದೇಶದ ಮೊದಲ ಪ್ರಯತ್ನ ಇದಾಗಿದೆ.