ನವದೆಹಲಿ: ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಆರ್ಟಿಕಲ್ 370 ಮೇಲಿನ ಚರ್ಚೆ ವೇಳೆ ವಿದ್ಯಾರ್ಥಿಗಳ ನಡುವೆ ಗದ್ದಲ ಉಂಟಾಗಿದ್ದು, ಈ ವೇಳೆ ವರದಿ ಮಾಡಲು ತೆರಳಿದ್ದ ಈಟಿವಿ ಭಾರತ ಪ್ರತಿನಿಧಿ ಮೇಲೆ ಒಂದು ಗುಂಪಿನ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ.
ಜೆಎನ್ಯುನಲ್ಲಿ ವಿದ್ಯಾರ್ಥಿಗಳ ಗೂಂಡಾ ವರ್ತನೆ: ಈಟಿವಿ ಭಾರತ ಪ್ರತಿನಿಧಿ ಮೇಲೆ ಹಲ್ಲೆ!
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಸೆಮಿನಾರ್ ಕುರಿತು ವರದಿ ಮಾಡಲು ತೆರಳಿದ್ದ ಈಟಿವಿ ಭಾರತ ಪ್ರತಿನಿಧಿ ಮೇಲೆ ವಿದ್ಯಾರ್ಥಿಗಳ ಗುಂಪು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಈಟಿವಿ ಭಾರತ ಪ್ರತಿನಿಧಿ ಮೇಲೆ ಹಲ್ಲೆ
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಆರ್ಟಿಕಲ್ 370 ಕೇಂದ್ರ ಸರ್ಕಾರದಿಂದ ಈಗಾಗಲೇ ಹಿಂಪಡೆದುಕೊಳ್ಳಲಾಗಿದ್ದು, ಇದೇ ವಿಷಯದ ಮೇಲೆ ವಿಶ್ವವಿದ್ಯಾಲಯದಲ್ಲಿ ಸೆಮಿನಾರ್ ಆಯೋಜನೆ ಮಾಡಲಾಗಿತ್ತು. ವಿಷಯದ ಮೇಲೆ ಕೇಂದ್ರ ಸಚಿವ ಜಿತೇಂದ್ರ ತೋಮರ್ ಮಾತನಾಡುತ್ತಿದ್ದರು. ಇದೇ ವೇಳೆ ಎಬಿವಿಪಿ ಹಾಗೂ ಎಐಎಸ್ಎ ವಿದ್ಯಾರ್ಥಿ ಸಂಘಟನೆ ನಡುವೆ ವಾಗ್ವಾದ ಉಂಟಾಗಿ, ಹೊಡೆದಾಟ ಸಹ ನಡೆದಿದೆ. ಘಟನೆಯ ಬಗ್ಗೆ ವರದಿ ಮಾಡಲು ಮುಂದಾದಾಗ ಈಟಿವಿ ಭಾರತ ಪ್ರತಿನಿಧಿ ಮೇಲೆ ಹಲ್ಲೆ ನಡೆಸಲಾಗಿದ್ದು, ಅದು ಕ್ಯಾಮರಾದಲ್ಲಿ ಸೆರೆಯಾಗಿದೆ.