ಕರ್ನಾಟಕ

karnataka

ETV Bharat / bharat

ಈಟಿವಿ ಭಾರತ ಇಂಪ್ಯಾಕ್ಟ್: ಲಾಕ್​​ಡೌನ್​​ನಿಂದಾಗಿ ತಿರುಮಲದಲ್ಲಿ ಸಿಲುಕಿದ್ದ ರಷ್ಯಾ ಮಹಿಳೆಗೆ ನೆರವು

ರಷ್ಯಾದಿಂದ ಭಾರತಕ್ಕೆ ಬಂದು ಕೊರೊನಾ ಲಾಕ್​​ಡೌನ್​​ನಿಂದಾಗಿ ಆಂಧ್ರಪ್ರದೇಶದ ತಿರುಮಲದಲ್ಲಿ ಸಿಲುಕಿದ್ದ ಮಹಿಳೆಗೆ ಆರ್ಥಿಕ ನೆರವು ದೊರೆತಿದೆ. ಇದಕ್ಕೆ ಸಹಕರಿಸಿದ 'ಈಟಿವಿ ಭಾರತ'ದೊಂದಿಗೆ ರಷ್ಯಾ ಪ್ರಜೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ETV Bharat impact
ತಿರುಮಲದಲ್ಲಿ ಸಿಲುಕಿದ್ದ ರಷ್ಯಾ ಮಹಿಳೆಗೆ ನೆರವು

By

Published : Jul 28, 2020, 6:04 PM IST

ತಿರುಮಲ:ಕೋವಿಡ್​ ಲಾಕ್​​ಡೌನ್​​ನಿಂದಾಗಿ ಆಂಧ್ರಪ್ರದೇಶದ ತಿರುಮಲದಲ್ಲಿ ಸಿಲುಕಿದ್ದ ರಷ್ಯಾ ಮೂಲದ ಮಹಿಳೆಯ ರಕ್ಷಣೆಗೆ 'ಈಟಿವಿ ಭಾರತ'ದಲ್ಲಿ ವರದಿ ಬಿತ್ತರವಾದ ಬಳಿಕ ಸ್ಥಳೀಯರು ಅವರಿಗೆ ಆರ್ಥಿಕ ನೆರವು ನೀಡಿದ್ದಾರೆ.

ಈ ಕುರಿತು 'ಈಟಿವಿ ಭಾರತ' ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ರಷ್ಯಾ ಮಹಿಳೆ ಎಸ್ಟರ್​ ಬಗ್ರತೂನಿ, ತಾನು ಹಾಗೂ ತನ್ನ ತಾಯಿ ಒಲಿವಿಯಾ ಬೇರ್ಪಟ್ಟು ಆರ್ಥಿಕ ಸಂಕಷ್ಟಕ್ಕೊಳಗಾಗಿ ಅನುಭವಿಸಿದ ನೋವನ್ನು ಹೊರಹಾಕಿದ್ದಾರೆ.

ಈಟಿವಿ ಭಾರತದ ಜೊತೆಗಿನ ಸಂದರ್ಶನದಲ್ಲಿ ರಷ್ಯಾ ಮಹಿಳೆ

ಫೆಬ್ರವರಿ 6 ರಂದು ಭಾರತಕ್ಕೆ ಬಂದಿದ್ದ ತಾಯಿ-ಮಗಳು ದೇಶಾದ್ಯಂತ ಇರುವ ವಿವಿಧ ಇಸ್ಕಾನ್ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಲಾಕ್​ಡೌನ್​ನಿಂದಾಗಿ ಪಶ್ಚಿಮ ಬಂಗಾಳದಲ್ಲಿ ಸಿಲುಕಿದ್ದರು. ಬಳಿಕ ಅನ್‌ಲಾಕ್ ಸಂದರ್ಭದಲ್ಲಿ ತಮ್ಮ ಬಳಿಯಿದ್ದ ಸಣ್ಣ ಮೊತ್ತದ ಹಣದಲ್ಲಿ ಆಂಧ್ರ ಪ್ರದೇಶದ ತಿರುಮಲಕ್ಕೆ ಬಂದರು. ಆದರೆ ಅನ್‌ಲಾಕ್ ಮಾರ್ಗಸೂಚಿಗಳ ಪ್ರಕಾರ ವಿದೇಶಿಯರಿಗೆ ದರ್ಶನಕ್ಕೆ ಅವಕಾಶವಿರಲಿಲ್ಲ.

ನಂತರ ಮಗಳು ಎಸ್ಟರ್​ಳನ್ನು ತಿರುಮಲದಲ್ಲೇ ಬಿಟ್ಟು ತಾಯಿ ಒಲಿವಿಯಾ ಉತ್ತರ ಪ್ರದೇಶದ ವೃಂದಾವನ್​ಗೆ ಹೋಗಿದ್ದಾರೆ. ಆ ಬಳಿಕ ಅಪರಿಚಿತ ದೇಶದಲ್ಲಿ ತಾಯಿ-ಮಗಳು ಸಂಪೂರ್ಣವಾಗಿ ಬೇರ್ಪಟ್ಟಿದ್ದಾರೆ. ಹಣವಿಲ್ಲದೆ ಪರದಾಡುತ್ತಿದ್ದ ಎಸ್ಟರ್​ಳನ್ನು ಗಮನಿಸಿದ ಹಾಸ್ಟೆಲ್ ಮ್ಯಾನೇಜರ್ ಒಬ್ಬರು ಕಪಿಲಾ ತೀರ್ಥಂನಲ್ಲಿ ಆಕೆಗೆ ಆಶ್ರಯ ನೀಡಿದ್ದಾರೆ.

ದೇವಾಲಯದ ಪುನಶ್ಚೇತನಕ್ಕೆ ಬೇಕಾಗುವ ಫಿಸಿಯೋಥೆರಫಿ, ಮೇಕಪ್​ ಮತ್ತು ಚಿತ್ರಕಲೆಯಲ್ಲಿ ಪರಿಣತೆ ಹೊಂದಿದ್ದ ಎಸ್ಟರ್ ಹಣ ಸಂಪಾದಿಸಲು ಸೂಕ್ತ ಕೆಲಸ ಹುಡುಕಲಾರಂಭಿಸಿದರು. ಆದರೆ ಕೋವಿಡ್​ ಭೀತಿ ಮತ್ತು ಭಾಷೆಯ ಅಡ್ಡಿಗಳಿಂದಾಗಿ ಯಾವುದೇ ಕೆಲಸ ಸಿಗಲಿಲ್ಲ. ಬಳಿಕ ಇವರ ರಕ್ಷಣೆಗೆ ಈಟಿವಿ ಭಾರತ ಬಂದಿದೆ. ನಂತರ ಡಾಟ್ ಟ್ರಾವೆಲ್ಸ್ ಎಂಬ ಟ್ರಾವೆಲ್ ಏಜೆನ್ಸಿ ಇವರು ರಷ್ಯಾಗೆ ಮರಳಲು ವಿಮಾನಯಾನದ ವ್ಯವಸ್ಥೆ ಮಾಡಿದೆ. ಮಾರಮ್ ಇನ್ಫ್ರಾ ಪ್ರಾಜೆಕ್ಟ್ಸ್ ಪ್ರೈ. ಲಿಮಿಟೆಡ್ ಕಂಪನಿಯು 25 ಸಾವಿರ, ಸ್ಥಳೀಯ ಶಾಸಕರೊಬ್ಬರು 10 ಸಾವಿರ ಹಾಗೂ ಸರ್ಕಾರಿ ಅಧಿಕಾರಿಯೊಬ್ಬರು 10 ಸಾವಿರ ರೂ.ನೀಡಿದ್ದಾರೆ. ತಿರುಪತಿ ನಗರಾಭಿವೃದ್ಧಿ ಪ್ರಾಧಿಕಾರವು ಅಗತ್ಯ ವಸ್ತುಗಳನ್ನು ಒದಗಿಸಿದೆ.

ABOUT THE AUTHOR

...view details