ಕರ್ನಾಟಕ

karnataka

ETV Bharat / bharat

ಸೋಮವಾರದ ರಾಶಿ ಭವಿಷ್ಯ: ಇಂದು ಯಾರಿಗೆ ಲಾಭ, ಯಾರಿಗೆ ನಷ್ಟ? - ಸೋಮವಾರದ ರಾಶಿ ಭವಿಷ್ಯ

​​​​​​​ಇಂದು ಯಾವ ರಾಶಿಯವರ ಭವಿಷ್ಯ ಹೇಗಿದೆ ಅಂತಾ ನೋಡಿ ಈಟಿವಿ ಭಾರತ್​​ನಲ್ಲಿ.

etv bharat astrology
ಸೋಮವಾರದ ರಾಶಿ ಭವಿಷ್ಯ

By

Published : Dec 9, 2019, 4:01 AM IST

ಮೇಷ :ಇಂದು, ನೀವು ನಿಮ್ಮ ಸ್ಮರಣೆಗಳಲ್ಲಿ ಮುಳುಗಿ ಹೋಗುತ್ತೀರಿ. ನಿಮ್ಮ ಮಧುರವಾದ ಭಾಗ ಎಲ್ಲ ಕಡೆ ಹರಡಿದ್ದು ಕೆಲಸದಲ್ಲಿ ಅದು ಎಲ್ಲರಿಗೂ ಕಾಣುತ್ತದೆ. ನಿಮ್ಮ ವೆಚ್ಚಗಳ ಕುರಿತು ನೀವು ಕೊಂಚ ಎಚ್ಚರಿಕೆ ವಹಿಸಬೇಕು ಮತ್ತು ಭವಿಷ್ಯಕ್ಕೆ ಉಳಿತಾಯ ಮಾಡಲು ಹೆಚ್ಚು ಗಮನ ನೀಡಬೇಕು.

ವೃಷಭ : ಈ ದಿನ ನೀವು ನಿಮ್ಮ ಅದೃಷ್ಟಕ್ಕೆ ಬಿಟ್ಟುಬಿಡುವ ಅನಿವಾರ್ಯತೆ ಹೊಂದುತ್ತೀರಿ. ನಿಮ್ಮನ್ನು ನೀವು ವಿಧಿಯ ಆಟಕ್ಕೆ ಶರಣಾಗಿಬಿಟ್ಟರೂ, ಅದರಿಂದ ಒಳ್ಳೆಯದಾಗುತ್ತದೆ ಎಂದು ನಿರೀಕ್ಷೆ ಮಾಡಬೇಡಿ. ನೀವು ತಪ್ಪು ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಭಯ ಬಿಡಿ. ಯಾವುದೇ ಒಂದು ದಿನದಂತೆ ಈ ದಿನವೂ ಮುಂದಕ್ಕೆ ಸಾಗುತ್ತದೆ.

ಮಿಥುನ : ನೀವು ತರ್ಕ ಮತ್ತು ಭಾವನೆಗಳ ನಡುವೆ ಸಮತೋಲನ ಸಾಧಿಸಲು ಬಹಳ ಕಷ್ಟಪಡುತ್ತೀರಿ. ಜಗತ್ತಿನ ಮುಂದೆ ಅದರಲ್ಲಿ ನೀವು ಯಶಸ್ವಿಯಾದರೂ, ನೀವು ನಿಮ್ಮ ಮಿತ್ರರೊಂದಿಗೆ ವಿವೇಚನಾಯುಕ್ತರಾಗಿರುವುದಿಲ್ಲ. ನಿಮ್ಮ ಪ್ರಿಯತಮೆಯೊಂದಿಗೆ ನಿಮಗೆ ಅದ್ಭುತ ಸಮಯ ಕಳೆಯುತ್ತೀರಿ, ಆದರೆ ನಿಮ್ಮ ದೈಹಿಕ ಹೊರನೋಟ ನಿಮಗೆ ಕಾಳಜಿ ಉಂಟು ಮಾಡುತ್ತದೆ.

ಕರ್ಕಾಟಕ : ಈ ದಿನ ನಿಮಗೆ ಅದರಲ್ಲಿಯೂ ನಿಮ್ಮ ಬದಲಾಗುತ್ತಿರುವ ಮನಸ್ಥಿತಿಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ತೀವ್ರತೆಗಳ ದಿನವಾಗಿದೆ. ಆದಾಗ್ಯೂ, ನೀವು ನಿಮ್ಮನ್ನು ಅತಿಯಾದ ಭಾವನಾತ್ಮಕತೆ ಅಥವಾ ಅಪ್ರಾಯೋಗಿಕತೆಗೆ ತೊಡಗಿಕೊಳ್ಳಬಾರದು ಎಂದು ನಿಮ್ಮನ್ನು ನೀವು ನೆನಪಿಸಿಕೊಳ್ಳುತ್ತಿರಬೇಕು. ಇಲ್ಲದಿದ್ದಲ್ಲಿ, ನೀವು ಸಂಕೀರ್ಣ ಸನ್ನಿವೇಶಗಳಿಗೆ ಸಿಲುಕಿಕೊಳ್ಳಬಹುದು. ನೀವು ನಿಮ್ಮ ಆರೋಗ್ಯ ಮತ್ತು ತಿನ್ನುವ ಅಭ್ಯಾಸಗಳಿಗೆ ಗಮನ ನೀಡಬೇಕಾದ ಪ್ರಮುಖ ಸಮಯವಾಗಿದೆ. ಜಾಗರೂಕತೆಯಿಂದ ಬದಲಾವಣೆಯನ್ನು ಬೆಳೆಸಿಕೊಳ್ಳಿ. ಅತಿಯಾಗಿ ತಿನ್ನುವ ಸಾಧ್ಯತೆ ಹೆಚ್ಚಾಗಿದೆ!

ಸಿಂಹ : ನೀವು ಇಂದು ಅತ್ಯಂತ ಭಾವನಾತ್ಮಕ ಮತ್ತು ಉದ್ವೇಗಕ್ಕೆ ಒಳಗಾಗುತ್ತೀರಿ. ನಿಮ್ಮ ಅಹಂ ಸರಿಯಾದ ಸಮಯದಲ್ಲಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸದಂತೆ ತಡೆಯುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಂವಹನದ ಪ್ರಯತ್ನ ನಡೆಸುವಾಗ ನೀವು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದು ಪ್ರಣಯಕ್ಕೆ ಮತ್ತು ಪ್ರೀತಿಯ ನಿರೀಕ್ಷೆ ಮಾಡುವವರಿಗೆ ಒಳ್ಳೆಯ ದಿನವಾಗಿದೆ.

ಕನ್ಯಾ :ನೀವು ಹಿಂದೆ ಮಾಡಿದ ಎಲ್ಲ ಒಳ್ಳೆಯ ಕೆಲಸಗಳಿಗೆ ನಿಮಗೆ ಇಂದು ಪುರಸ್ಕಾರ ಲಭಿಸುತ್ತದೆ. ನೀವು ಇತರರಿಂದ ಆದೇಶಗಳನ್ನು ಪಡೆಯುವ ಬದಲಿಗೆ ನಿಮ್ಮದೇ ರೀತಿಯಲ್ಲಿ ಕೆಲಸಗಳನ್ನು ನಿಭಾಯಿಸುತ್ತೀರಿ. ಆದಾಗ್ಯೂ, ಅತಿಯಾದ ಅಧಿಕಾರ ಚಲಾಯಿಸುವುದು ಒಳ್ಳೆಯದಲ್ಲ, ಶಾಂತ ಮತ್ತು ಸಮಚಿತ್ತತೆಯಿಂದ ಇರುವುದು ಉತ್ತಮ.

ತುಲಾ : ನೀವು ನಿಮ್ಮ ಸೌಂದರ್ಯ ಮತ್ತು ಹೊರನೋಟದ ಬಗ್ಗೆ ಹೆಚ್ಚು ಜಾಗೃತರಾಗಿರುತ್ತೀರಿ ಹಾಗೂ ಬ್ಯೂಟಿ ಪಾರ್ಲರ್ ಗೆ ಭೇಟಿ ಅಥವಾ ದುಬಾರಿ ಸೌಂದರ್ಯವರ್ಧಕಗಳನ್ನು ಕೊಳ್ಳುವುದರಿಂದ ಅದನ್ನು ಹೆಚ್ಚಿಸಲು ಪ್ರಯತ್ನಿಸುತ್ತೀರಿ. ನಿಮ್ಮ ಹೊರನೋಟ ಹಾಗೂ ವ್ಯಕ್ತಿತ್ವ ಉತ್ತಮಪಡಿಸಲು, ಬಟ್ಟೆಗಳನ್ನು ಕೊಳ್ಳಲು ಶಾಪಿಂಗ್ ಮಾಡುವ ಸಾಧ್ಯತೆಯೂ ಇದೆ.

ವೃಶ್ಚಿಕ : ಎಲ್ಲ ಸಾಧ್ಯತೆಗಳಲ್ಲೂ, ನಿಮ್ಮ ಮನಸ್ಥಿತಿ ಅತ್ಯಂತ ದಾಳಿಕಾರಕವಾಗಿರುತ್ತದೆ. ನಿಮ್ಮ ದಾಳಿಕೋರತನ ಪ್ರಸ್ತುತಕ್ಕೆ ಅದೃಷ್ಟದೇವತೆಯನ್ನು ಮುಂದಕ್ಕೆ ಕಳುಹಿಸಲೂಬಹುದು. ಯಾವುದೇ ಬಗೆಯ ಹೊಡೆದಾಟಗಳು ಅಥವಾ ತೊಂದರೆಗಳಿಂದ ದೂರ ಉಳಿಯುವುದು ಉತ್ತಮ. ಆದರೆ ಸಂಜೆಯ ವೇಳೆಗೆ, ನಿರಾಳವಾಗುವ ಸಾಧ್ಯತೆ ಇದೆ.

ಧನಸ್ಸು : ಕಾರ್ಯಗಳು ಮಾತುಗಳಿಗಿಂತ ಹೆಚ್ಚು ದೊಡ್ಡದಾಗಿ ಮಾತನಾಡುತ್ತವೆ ಎಂದು ನೆನಪಿನಲ್ಲಿರಿಸಿಕೊಳ್ಳಿ. ಬಹಳ ದೀರ್ಘಕಾಲದಿಂದ ನಿಮ್ಮ ಗಮನ ಬೇಡುತ್ತಿರುವ ನಿಮ್ಮ ಕೆಲಸವನ್ನು ಪೂರೈಸುವ ಎಲ್ಲ ಸಾಧ್ಯತೆಗಳೂ ಇವೆ. ಈಗ ಯಶಸ್ವಿಯಾಗಿ ಮುಂದುವರೆಯುತ್ತಿರುವ ಸಂಘರ್ಷಗಳನ್ನು ಮಂಡಿಸಿದರೂ ಅವುಗಳನ್ನು ತಾರ್ಕಿಕವಾಗಿ ಪರಿಹರಿಸುತ್ತೀರಿ.

ಮಕರ : ಮೊದಲ ಪ್ರಯತ್ನದಲ್ಲಿ ನೀವು ಯಶಸ್ವಿಯಾಗದೇ ಇದ್ದರೆ, ಮತ್ತೆ ಪ್ರಯತ್ನಿಸಿರಿ. ಹಲವು ಮಂದಿ ಅವಿರತ ಪ್ರಯತ್ನ ಮತ್ತು ತಾಳ್ಮೆಯ ಶಕ್ತಿಯನ್ನು ಕಡಿಮೆ ಅಂದಾಜು ಮಾಡುತ್ತಾರೆ. ಆದರೆ ಈ ಎರಡೂ ಗುಣಗಳು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ. ಕೋಪ ಮತ್ತು ಆತಂಕದಿಂದ ಸಿಡಿಯುವ ಬದಲಿಗೆ, ನಿಮ್ಮ ಯೋಜನೆಗಳ ಮೇಲೆ ಅದರಲ್ಲೂ ನಿಮ್ಮ ಯೋಜನೆಯಂತೆ ಫಲಿತಾಂಶಗಳು ಬಾರದೇ ಇರುವಾಗ ದೃಢವಾದ ನಂಬಿಕೆ ಇರಿಸಿ.

ಕುಂಭ :ನೀವು ಅತ್ಯಂತ ಸಂಕೀರ್ಣ ಸಮಸ್ಯೆಗಳನ್ನು ಅನಂತ ಸುಲಭವಾಗಿ ಪರಿಹರಿಸುತ್ತೀರಿ! ಆದಾಗ್ಯೂ ಜನರು ನಿಮ್ಮ ಮೇಲೆ ಹೊಣೆಗಾರಿಕೆಯನ್ನು ಎತ್ತಿ ಹಾಕುತ್ತಿದ್ದಾರೆ. ಇತರರ ತಪ್ಪುಗಳಿಗೆ ಹೊಣೆಯಾಗುವ ಇದು ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ. ಆದರೂ ದೌರ್ಬಲ್ಯವನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳುವ ಅವಕಾಶವಿದೆ.

ಮೀನ : ನೀವು ವಿಶ್ವಾಸದ ಕೊರತೆ ಮತ್ತು ಗೊಂದಲದ ಭಾವನೆ ಹೊಂದಿದ್ದು ಅದು ನಿಮ್ಮ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪ್ರತಿಫಲಿಸುತ್ತದೆ. ಇದು ಸುಲಭ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ನಿಮಗ ತೊಂದರೆಯನ್ನೂ ಉಂಟು ಮಾಡಬಹುದು. ನಿಮ್ಮ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ಮುನ್ನಡೆಯಿರಿ. ಯಾವುದೇ ಬಗೆಯ ವಿವಾದದಲ್ಲಿ ಸಿಲುಕಿಕೊಳ್ಳುವುದು ಅಥವಾ ದೊಡ್ಡ ಯೋಜನೆಗಳನ್ನು ರೂಪಿಸುವುದನ್ನು ತಪ್ಪಿಸಿರಿ.

ABOUT THE AUTHOR

...view details