ಕೋಲ್ಕತ್ತ: ಪೂರ್ವ ಲಡಾಖ್‌ನಲ್ಲಿ ನಡೆದ ಭಾರತ-ಚೀನಾ ಘರ್ಷಣೆಯಲ್ಲಿ ಹುತಾತ್ಮರಾದ 20 ಯೋಧರ ಪೈಕಿ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಬೆಳಗಾರಿಯಾ ಗ್ರಾಮದ ಯೋಧ ರಾಜೇಶ್ ಆರಂಗ್ ಕೂಡ ಪ್ರಾಣ ಕಳೆದುಕೊಂಡಿದ್ದು, ಕುಟುಂಬದವರ ಅಕ್ರಂದನ ಮುಗಿಲು ಮುಟ್ಟುವಂತಿದೆ.
ಗಡಿ ಸಂಘರ್ಷದಲ್ಲಿ ಬಂಗಾಳ ಯೋಧ ಹುತಾತ್ಮ; ಸೇಡು ತೀರಿಸಿಕೊಳ್ಳುವಂತೆ ಸಹೋದರಿ ಪಟ್ಟು - ಬಂಗಾಳದ ಯೋಧ ಹುತಾತ್ಮ
ಭಾರತ-ಚೀನಾ ನಡುವೆ ಲಡಾಖ್‌ನಲ್ಲಿ ನಡೆದಿರುವ ಘರ್ಷಣೆಯಲ್ಲಿ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಬೆಳಗಾರಿಯಾ ಗ್ರಾಮದ ಯೋಧ ರಾಜೇಶ್ ಆರಂಗ್ ಹುತಾತ್ಮರಾಗಿದ್ದಾರೆ. ಯೋಧನ ಕುಟುಂಬದಲ್ಲಿ ನೀರವ ಮೌನ ಆವರಿಸಿದ್ದು, ಚೀನಾ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂದು ಯೋಧನ ಕಿರಿಯ ಸಹೋದರಿ ಆಗ್ರಹಿಸಿದ್ದಾಳೆ.
ಗಡಿ ಸಂಘರ್ಷದಲ್ಲಿ ಬಂಗಾಳ ಯೋಧ ಹುತಾತ್ಮ; ಸೇಡು ತೀರಿಸಿಕೊಳ್ಳುವಂತೆ ಸೋಹದರಿ ಪಟ್ಟು
26 ವರ್ಷದ ರಾಜೇಶ್ ಆರಂಗ್ ಭಾರತೀಯ ಸೇನೆಯ ಬಿಹಾರ್ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜೇಶ್ ಸುಭಾಷ್ ಆರಂಗ್‌ಗೆ ರಾಜೇಶ್ ಏಕೈಕ ಪುತ್ರನಾಗಿದ್ದಾನೆ. ಮೃತ ಯೋಧನ ಇಬ್ಬರು ಸಹೋದರಿಯರು ಕೂಡ 2015ರಿಂದ ಸೇನೆಯಲ್ಲಿದ್ದಾರೆ.
ನಿನ್ನೆಯಷ್ಟೇ ಸಹೋದರ ಮೃತಪಟ್ಟಿರುವ ಮಾಹಿತಿ ಬಂತು. ಇದು ನಮಗ ಆಘಾತ ತಂದಿದ್ದು, ಚೀನಾ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎನ್ನುತ್ತಾರೆ ಯೋಧ ರಾಜೇಶ್ ಅವರ ಕಿರಿಯ ಸಹೋದರಿ ಒತ್ತಾಯಿಸಿದ್ದಾಳೆ.
Last Updated : Jun 17, 2020, 5:00 PM IST