ಕರ್ನಾಟಕ

karnataka

ETV Bharat / bharat

ಇಪಿಎಫ್ಓ ಸಂಸ್ಥೆಯಿಂದ ಗರೀಬ್ ಕಲ್ಯಾಣ್ ಯೋಜನೆಯಡಿ ಸಾಲ ಸೌಲಭ್ಯ - ಇಪಿಎಫ್ಓ ಸಂಸ್ಥೆ

ಇಪಿಎಫ್ಓ ಸಂಸ್ಥೆ ಪಿಎಂ ಗರೀಬ್ ಕಲ್ಯಾಣ್ ಯೋಜನೆಯಡಿ ಸಾಲ ನೀಡಲು ಮುಂದಾಗಿದೆ. ಯೋಜನೆಯಿಂದ 79 ಲಕ್ಷ ಜನರಿಗೆ ಮತ್ತು 3.8 ಲಕ್ಷ ಸಂಸ್ಥೆಗಳಿಗೆ ಲಾಭವಾಗಲಿದ್ದು, ಒಟ್ಟು 4,800 ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಲಿದೆ.

epfo-puts-in-place-mechanism-to-credit-govts-contribution-towards-epf-eps-under-pmgky
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ

By

Published : Apr 12, 2020, 9:21 AM IST

ನವದೆಹಲಿ :ಲಾಕ್ ಡೌನ್ ಮಧ್ಯೆ ಸಂಕಷ್ದಲ್ಲಿರುವವರಿಗೆ ನೆರವಾಗಲು ಇಪಿಎಫ್ಓ ಸಂಸ್ಥೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಾಲ ನೀಡಲು ಮುಂದಾಗಿದೆ.

ಈ ಯೋಜನೆಯಿಂದ ಸುಮಾರು 79 ಲಕ್ಷ ಜನರಿಗೆ ಮತ್ತು 3.8 ಲಕ್ಷ ಸಂಸ್ಥೆಗಳಿಗೆ ಲಾಭವಾಗಲಿದ್ದು, ಒಟ್ಟು 4,800 ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಲಿದೆ. "ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್ (ಇಪಿಎಫ್ಒ) ಇಪಿಎಫ್ ಮತ್ತು ಇಪಿಎಸ್ ಖಾತೆಗಳ ಮೂಲಕ ಜನರ ಮತ್ತು ಸಂಸ್ಥೆಗಳ ಖಾತೆಗೆ ಹಣ ಜಮಾ ಮಾಡಲು ಎಲೆಕ್ಟ್ರಾನಿಕ್ ಯಾಂತ್ರಿಕ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಅದರಂತೆ, ಸರ್ಕಾರವು ಘೋಷಿಸಿದ ಪರಿಹಾರವನ್ನು ಎಲೆಕ್ಟ್ರಾನಿಕ್ ಚಲನ್-ಕಮ್-ರಿಟರ್ನ್ (ಇಸಿಆರ್) ಸಲ್ಲಿಸುವ ಮೂಲಕ ಅರ್ಹ ವ್ಯಕ್ತಿಗಳು ಮತ್ತು ಸಂಸ್ಥೆಗಳು ಹಣ ಪಡೆಯಬಹುದು. ಬಡ ಜನರಿಗೆ ಕೋವಿಡ್ ವಿರುದ್ಧ ಹೋರಾಡಲು ನೆರವಾಗುವಂತೆ ಗರೀಬ್ ಕಲ್ಯಾಣ್ ಯೋಜನೆಯಡಿ ಸಹಾಯ ಮಾಡುವುದಾಗಿ 20 ಮಾರ್ಚ್​ 2020ರಂದು ಕೇಂದ್ರ ಕಾರ್ಮಿಕ ಸಚಿವಾಲಯ ಘೋಷಿಸಿತ್ತು.

ಹದಿನೈದು ಸಾವಿರಕ್ಕಿಂತ ಕಡಿಮೆ ವೇತನ ಗಳಿಸುವ ಉದ್ಯೋಗಿಗಳು ಮತ್ತು ಇಪಿಎಫ್ ವ್ಯಾಪ್ತಿಯ ಸಂಸ್ಥೆಗಳ ಇಪಿಎಫ್ ಮತ್ತು ಇಪಿಎಸ್ ( 24 ಶೇ. ವೇತನ) ಖಾತೆಯಲ್ಲಿ ಮೂರು ತಿಂಗಳ ಕಾಲ ಯುಎಎನ್‌ಗಳಲ್ಲಿ (ಸಾರ್ವತ್ರಿಕ ಖಾತೆ ಸಂಖ್ಯೆ) ಸರ್ಕಾರ ಹಣವನ್ನು ಜಮಾ ಮಾಡಲಿದೆ.

ABOUT THE AUTHOR

...view details