ನವದೆಹಲಿ: ನಿವೃತ್ತಿಯ ನಿಧಿ ಸಂಸ್ಥೆ ಇಪಿಎಫ್‌ಒ ತನ್ನ ಆರು ಕೋಟಿ ಸದಸ್ಯರಿಗೆ 2019-20ನೇ ಸಾಲಿನ ನೌಕರರ ಭವಿಷ್ಯ ನಿಧಿ (ಇಪಿಎಫ್) ಮೇಲೆ ಶೇ .8.5 ರಷ್ಟು ಬಡ್ಡಿದರವನ್ನು ಪಾವತಿಸುವ ಪ್ರಕ್ರಿಯೆ ಪ್ರಾರಂಭಿಸಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ಹೆಚ್ಚಿನ ಸದಸ್ಯರು ತಮ್ಮ ನವೀಕರಿಸಿದ ಇಪಿಎಫ್ ಖಾತೆಗಳನ್ನು 2019-20ನೇ ಸಾಲಿನ ಶೇ 8.5 ರಷ್ಟು ಬಡ್ಡಿಯೊಂದಿಗೆ ನೋಡಲು ಸಾಧ್ಯವಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2019-20ನೇ ಸಾಲಿನ ಇಪಿಎಫ್‌ಗೆ ಶೇ .8.5 ರಷ್ಟು ಬಡ್ಡಿಯನ್ನು ಇಪಿಎಫ್‌ಒಗೆ ಜಮಾ ಮಾಡಲು ಕಾರ್ಮಿಕ ಸಚಿವಾಲಯ ಈಗಾಗಲೇ ನಿರ್ದೇಶನ ನೀಡಿದೆ. ಕಳೆದ ಹಣಕಾಸು ವರ್ಷದಿಂದಲೇ ಸಂಸ್ಥೆಯು ಸದಸ್ಯರ ಖಾತೆಗೆ ಬಡ್ಡಿ ಸೇರಿಸಲು ಪ್ರಾರಂಭಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:IRCTC ಪರಿಷ್ಕೃತ ವೆಬ್ಸೈಟ್: ನಿಮಿಷದಲ್ಲಿ 10 ಸಾವಿರ ಟಿಕೆಟ್ ಬುಕ್ ಮಾಡಬಹುದು !
2019-20ನೇ ಸಾಲಿನ ಇಪಿಎಫ್‌ಗೆ ಶೇ.8.5 ರಷ್ಟು ಬಡ್ಡಿದರವನ್ನು ನೀಡುವುದು ನಮ್ಮ ಪ್ರಯತ್ನ ಎಂದು ನಾವು ಹೇಳಿದ್ದೆವು. 2019-20ನೇ ಸಾಲಿನ ಇಪಿಎಫ್‌ಗೆ ಶೇ 8.5 ರಷ್ಟು ಬಡ್ಡಿದರವನ್ನು ನೀಡಲು ನಾವು ಅಧಿಸೂಚನೆ ಹೊರಡಿಸಿದ್ದೇವೆ. ನಾವು ಹೇಳಿದ ಬಡ್ಡಿದರವನ್ನು ಚಂದಾದಾರರ ಖಾತೆಗೆ ಜಮಾ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ, ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ದಾರೆ.
ಡಿಸೆಂಬರ್ 31 ರಂದು ನಿವೃತ್ತಿ ಹೊಂದುತ್ತಿರುವ ಎಲ್ಲ ಸದಸ್ಯರಿಗೂ 2019-20ನೇ ಸಾಲಿನ ಶೇ 8.5 ರಷ್ಟು ಬಡ್ಡಿದರ ದೊರೆಯುವಂತೆ ನೋಡಿಕೊಳ್ಳುವಂತೆ ಕೇಳಿಕೊಂಡಿದ್ದೇನೆ ಎಂದು ಸಚಿವರು ಹೇಳಿದರು.
2019-20ರಲ್ಲಿ ಶೇ 0.35 ರಷ್ಟು ಬಡ್ಡಿ ಪಾವತಿಸುವ ಬಂಡವಾಳ ಲಾಭದ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ ಎಂದರು.