ಕರ್ನಾಟಕ

karnataka

ETV Bharat / bharat

ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ: ಭೂಸೇನಾ ಮುಖ್ಯಸ್ಥ - ಭಾರತ - ಚೀನಾ ಗಡಿ

ಭಾರತ - ಚೀನಾ ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನೇಪಾಳದೊಂದಿಗೆ ನಮ್ಮ ಸಂಬಂಧ ಬಲವಾಗಿದೆ ಎಂದು ಸೇನಾ ಮುಖ್ಯಸ್ಥ ಎಂ.ಎಂ.ನರವನೆ ಹೇಳಿದ್ದಾರೆ.

Army Chief Gen
ಸೇನಾ ಮುಖ್ಯಸ್ಥ ಎಂ ಎಂ ನರವನೆ

By

Published : Jun 13, 2020, 11:08 AM IST

ಡೆಹ್ರಾಡೂನ್:ಉಭಯ ದೇಶದ ಕಮಾಂಡರ್​ಗಳ ಜೊತೆ ಉನ್ನತ ಹಾಗೂ ಸ್ಥಳೀಯ ಮಟ್ಟದಲ್ಲಿ ಸಭೆಗಳು ನಡೆದಿದ್ದು, ಭಾರತ - ಚೀನಾ ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಿರಂತರ ಮಾತುಕತೆಗಳ ಮೂಲಕ ನಮ್ಮ ಮಧ್ಯೆ ಇರುವ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಭೂಸೇನಾ ಮುಖ್ಯಸ್ಥ ಎಂ.ಎಂ.ನರವನೆ ತಿಳಿಸಿದ್ದಾರೆ.

ಉತ್ತರಾಖಂಡ್​ನ ಡೆಹ್ರಾಡೂನ್‌ನಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿ (ಐಎಂಎ) ತಮ್ಮ 2020 ರ ಬ್ಯಾಚ್‌ಗಾಗಿ ಇಂದು ಪಾಸಿಂಗ್ ಔಟ್​ ಪರೇಡ್ ಕಾರ್ಯಕ್ರಮ ನಡೆಸಿತು. ಈ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ನರವನೆ, ಭಾರತ-ಚೀನಾ ಹಾಗೂ ಇಂಡೋ-ನೇಪಾಳ ಗಡಿ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದರು.

ನೇಪಾಳದೊಂದಿಗೆ ನಮಗೆ ಭೌಗೋಳಿಕ, ಸಾಂಸ್ಕೃತಿಕ, ಐತಿಹಾಸಿಕ, ಧಾರ್ಮಿಕವಾಗಿ ಪ್ರಬಲವಾದ ಸಂಬಂಧವಿದೆ. ಎರಡು ದೇಶಗಳ ನಡುವಿನ ಜನ ಸಂಪರ್ಕ ಕೂಡ ಗಟ್ಟಿಯಾಗಿದೆ. ಈ ಸಂಬಂಧ ಯಾವಾಗಲೂ ಹೀಗೇ ಇರುತ್ತದೆ, ಭವಿಷ್ಯದಲ್ಲಿ ಸದೃಢವಾಗಿರುತ್ತದೆ ಎಂದು ನರವನೆ ಭರವಸೆ ನೀಡಿದರು.

ABOUT THE AUTHOR

...view details