ಕರ್ನಾಟಕ

karnataka

ETV Bharat / bharat

'ಒಬ್ಬರು ನಿಯಮ ಉಲ್ಲಂಘಿಸಿದ್ರೆ ಕುಟುಂಬದ ಎಲ್ಲರಿಗೂ ಕ್ವಾರಂಟೈನ್​' - himachal pradesh latest news

ಕ್ವಾರಂಟೈನ್​ನಲ್ಲಿರಬೇಕಾದ ಯಾವುದೇ ವ್ಯಕ್ತಿ ಕ್ವಾರಂಟೈನ್​ ನಿಯಮ ಉಲ್ಲಂಘಿಸಿ ಮನೆಯಿಂದ ಹೊರ ಬಂದ್ರೆ ಆ ವ್ಯಕ್ತಿಯ ಕುಟುಂಬದ ಎಲ್ಲರನ್ನೂ ಕ್ವಾರಂಟೈನ್​ ಮಾಡಲಾಗುತ್ತದೆ ಎಂದು ಹಿಮಾಚಲ ಪ್ರದೇಶದ ಕಾಂಗ್ರಾ ಜಲ್ಲೆಯಲ್ಲಿ ಕಟ್ಟುನಿಟ್ಟಿನ ಸೂಚನೆ ಹೊರಡಿಸಲಾಗಿದೆ.

quarantine
ಕ್ವಾರಂಟೈನ್

By

Published : May 9, 2020, 1:40 PM IST

ಧರ್ಮಶಾಲಾ (ಹಿಮಾಚಲ ಪ್ರದೇಶ): ಹೋಂ ಕ್ವಾರಂಟೈನ್​ನಲ್ಲಿರಬೇಕಾದ ಯಾವುದೇ ವ್ಯಕ್ತಿಗಳು ಕ್ವಾರಂಟೈನ್​ ನಿಯಮ ಉಲ್ಲಂಘಿಸಿರುವುದು ಕಂಡುಬಂದರೆ, ಅವರ ಕುಟುಂಬದ ಎಲ್ಲ ಸದಸ್ಯರನ್ನು ಕ್ವಾರಂಟೈನ್​ ಮಾಡಲಾಗುತ್ತದೆ ಎಂದು ಕಾಂಗ್ರಾ ಪೊಲೀಸರು ಎಚ್ಚರಿಸಿದ್ದಾರೆ.

ಈ ಬಗೆಗಿನ ಹೊಸ ನಿಬಂಧನೆಗಳನ್ನು ಶುಕ್ರವಾರ ಮಾಡಲಾಗಿದೆ ಎಂದು ಕಾಂಗ್ರೆಸ್​​​​ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಮುಕ್ತ್ ರಂಜನ್ ತಿಳಿಸಿದ್ದಾರೆ.

ಈ ಹೊಸ ಆದೇಶದ ಪ್ರಕಾರ, ಹಿಮಾಚಲ ಪ್ರದೇಶದ ಇತರ ಜಿಲ್ಲೆಗಳು ಅಥವಾ ಭಾರತದ ಇತರ ರಾಜ್ಯಗಳಿಂದ ಜಿಲ್ಲೆಗೆ ಪ್ರವೇಶಿಸಿದ ದಿನಾಂಕದಿಂದ 28 ದಿನಗಳವರೆಗೆ ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗುತ್ತದೆ. ಇವರು ಕಟ್ಟುನಿಟ್ಟಾಗಿ ಕ್ವಾರಂಟೈನ್ ನಿಯಮಗಳನ್ನು ಪಾಲಿಸಬೇಕು. ಒಂದು ವೇಳೆ ನಿರ್ಬಂಧ ವಿಧಿಸಿರುವ ವ್ಯಕ್ತಿ ನಿಯಮ ಉಲ್ಲಂಘಿಸುತ್ತಿರುವುದು ಕಂಡುಬಂದರೆ, ಅವನ ಇಡೀ ಕುಟುಂಬ ಸದಸ್ಯರನ್ನು ಅವನೊಂದಿಗೆ ಗೃಹಬಂಧನದಲ್ಲಿರಿಸಲಾಗುವುದು ಎಂದು ರಂಜನ್ ಖಡಕ್​ ಸೂಚನೆ ನೀಡಿದ್ದಾರೆ.

ರಾಜ್ಯಕ್ಕೆ ಕಳೆದ ಒಂದು ವಾರದಲ್ಲಿ ರಾಜ್ಯ ಸರ್ಕಾರ ನೀಡಿದ ಪಾಸ್​ಗಳ ಆಧಾರದ ಮೇಲೆ 90,000 ಜನರು ಇತರ ರಾಜ್ಯಗಳಿಂದ ತಮ್ಮ ತಮ್ಮ ಮನೆಗೆ ಬಂದಿದ್ದಾರೆ. ಇನ್ನು ಸುಮಾರು 20,000 ಜನರು ರಾಜ್ಯವನ್ನು ಪ್ರವೇಶಿಸಲು ಕಾಯುತ್ತಿದ್ದಾರೆ.

ಇಲ್ಲಿಯವರೆಗೆ ರಾಜ್ಯದಲ್ಲಿ 50 ಕೊರೊನಾ ಪ್ರಕ್ರಣಗಳು ವರದಿಯಾಗಿದ್ದು, ಈ ಎಲ್ಲ ಸೋಂಕಿತರು ಬೇರೆ ರಾಜ್ಯಗಳಿಂದ ಸೋಂಕನ್ನು ರಾಜ್ಯಕ್ಕೆ ತಂದಿದ್ದಾರೆ. ಹೀಗಾಗಿ ಈ ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ABOUT THE AUTHOR

...view details