ಕರ್ನಾಟಕ

karnataka

ETV Bharat / bharat

ಚಿಕಿತ್ಸೆಗೆಂದು ಬಂದ ಯುವತಿಗೆ ಲೈಂಗಿಕ ಕಿರುಕುಳ ಆರೋಪ: ವೈದ್ಯನ ಬಂಧನ - ಕೇರಳದಲ್ಲಿ ವೈದ್ಯನ ಬಂಧನ

ಚಿಕಿತ್ಸೆ ಪಡೆದುಕೊಳ್ಳಲು ಬಂದ ಯುವತಿಯೋರ್ವಳಿಗೆ ವೈದ್ಯ ಲೈಂಗಿಕ ಕಿರುಕುಳ ನೀಡಿದ್ದಾನೆಂಬ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ.

ENT doctor held for sexually harassing
ENT doctor held for sexually harassing

By

Published : Jul 4, 2020, 6:16 PM IST

ಕಣ್ಣೂರು(ಕೇರಳ): ಕಿವಿ ನೋವಿನ ಸಂಬಂಧ ಚಿಕಿತ್ಸೆ ಪಡೆದುಕೊಳ್ಳಲು ಖಾಸಗಿ ಕ್ಲಿನಿಕ್​ಗೆ ಬಂದ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವೈದ್ಯನೊಬ್ಬನನ್ನು ಬಂಧಿಸುವಲ್ಲಿ ಕೇರಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಡಾ. ಪ್ರಶಾಂತ್​ ನಾಯ್ಕ್​ ಬಂಧಿತ ವೈದ್ಯ. ಮೂಲತಃ ಬೆಂಗಳೂರಿನ ವೈದ್ಯನಾಗಿದ್ದ ಈತ, ಕಣ್ಣೂರಿನಲ್ಲಿ ಖಾಸಗಿ ಕ್ಲಿನಿಕ್​ ನಡೆಸುತ್ತಿದ್ದಾನೆ. ಈತನ ಮೇಲೆ ಈಗಾಗಲೇ ನಾಲ್ಕು ಪ್ರಕರಣಗಳಿವೆ ಎನ್ನಲಾಗಿದೆ.

ಕಿವಿ ನೋವಿನ ಕಾರಣ ಚಿಕಿತ್ಸೆ ಪಡೆದುಕೊಳ್ಳಲು ಯುವತಿ ಎಂಎಂಸಿ ಕ್ಲಿನಿಕ್​ಗೆ ನಿನ್ನೆ ಹೋಗಿದ್ದಳು. ಈ ವೇಳೆ ಕಿವಿಗೆ ಹಾಕುವ ಔಷಧಿ ನೀಡಿ ಕೆಲ ಹೊತ್ತು ಕುಳಿತುಕೊಳ್ಳುವಂತೆ ತಿಳಿಸಿದ್ದಾನೆ. ಕ್ಲಿನಿಕ್​​ನಲ್ಲಿದ್ದ ಎಲ್ಲಾ ರೋಗಿಗಳಿಗೆ ಚಿಕಿತ್ಸೆ ನೀಡಿದ ಬಳಿಕ ವೈದ್ಯ ಆಕೆಯನ್ನ ಒಳ ಕರೆದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಡಾ. ಪ್ರಶಾಂತ್​ ನಾಯ್ಕ್, ತಮ್ಮ ಮೇಲಿನ ಆರೋಪ ತಳ್ಳಿ ಹಾಕಿದ್ದಾರೆ. ಚಿಕಿತ್ಸೆ ಪಡೆದುಕೊಳ್ಳಲು ಕ್ಲಿನಿಕ್​ಗೆ ಬಂದ ಮಹಿಳೆ ಹಾಗೂ ಆಕೆಯ ಗಂಡ ಗಲಾಟೆ ಮಾಡಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ದೂರು ನೀಡುವುದಾಗಿ ಅವರಿಗೆ ತಿಳಿಸಿದ್ದೇನೆ ಎಂದಿದ್ದಾನೆ.

ಈ ಹಿಂದೆ ಬೆಂಗಳೂರಿನಲ್ಲಿದ್ದ ವೈದ್ಯ ಇದೀಗ ಕಣ್ಣೂರಿನಲ್ಲಿ ವಾಸವಾಗಿದ್ದು, ಅಲ್ಲೇ ಕ್ಲಿನಿಕ್​ ಓಪನ್​ ಮಾಡಿದ್ದಾನೆ. ಈಗಾಗಲೇ ಈತನ ಮೇಲೆ ನಾಲ್ಕು ಪೊಲೀಸ್ ಪ್ರಕರಣಗಳಿವೆ ಎನ್ನಲಾಗಿದೆ.

ABOUT THE AUTHOR

...view details