ಹೊಸದಿಲ್ಲಿ: ಹೈಡ್ರಾಕ್ಸಿಕ್ಲೊರೋಕ್ವಿನ್ ಔಷಧಿಯ ದಾಸ್ತಾನು ಸಾಕಷ್ಟಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಹೈಡ್ರಾಕ್ಸಿಕ್ಲೊರೋಕ್ವಿನ್ ಕೊರತೆಯಾಗದಂತೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ.
ದೇಶದಲ್ಲಿ ಹೈಡ್ರಾಕ್ಸಿಕ್ಲೊರೋಕ್ವಿನ್ ದಾಸ್ತಾನು ಸಾಕಷ್ಟಿದೆ: ಕೇಂದ್ರ ಸರ್ಕಾರ - ಐಪಿಸಿಎ, ಝೈಡಸ್ ಕ್ಯಾಡಿಲಾ
ಸ್ಥಳೀಯ ಮಾರುಕಟ್ಟೆಯಲ್ಲಿ ಹೈಡ್ರಾಕ್ಸಿಕ್ಲೊರೋಕ್ವಿನ್ ಕೊರತೆಯಾಗದಂತೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಹೈಡ್ರಾಕ್ಸಿಕ್ಲೊರೋಕ್ವಿನ್ ಬೇಡಿಕೆ ಹಾಗೂ ಪೂರೈಕೆಯ ಕುರಿತು ದಿನಂಪ್ರತಿ ನಿಗಾ ವಹಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
"ನಮ್ಮ ಬಳಿ ಸಾಕಷ್ಟು ಹೈಡ್ರಾಕ್ಸಿಕ್ಲೊರೋಕ್ವಿನ್ ದಾಸ್ತಾನಿದೆ. ಹೈಡ್ರಾಕ್ಸಿಕ್ಲೊರೋಕ್ವಿನ್ ಬೇಡಿಕೆ ಹಾಗೂ ಪೂರೈಕೆಯ ಕುರಿತು ದಿನಂಪ್ರತಿ ನಿಗಾ ವಹಿಸಲಾಗುತ್ತಿದೆ. ದೇಶಕ್ಕೆ ಅಗತ್ಯವಿರುವಷ್ಟು ಹೈಡ್ರಾಕ್ಸಿಕ್ಲೊರೋಕ್ವಿನ್ ಪೂರೈಕೆ ನಮ್ಮ ಮೊದಲ ಗುರಿಯಾಗಿದೆ. ನಂತರವಷ್ಟೇ ಔಷಧಿಯನ್ನು ರಫ್ತು ಮಾಡಲಾಗುವುದು" ಎಂದು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಶುಭ್ರಾ ಸಿಂಗ್ ತಿಳಿಸಿದ್ದಾರೆ.
ಸಂಧಿವಾತ, ಮಲೇರಿಯಾ ಚಿಕಿತ್ಸೆಗಾಗಿ ಬಳಸಲ್ಪಡುವ ಹೈಡ್ರಾಕ್ಸಿಕ್ಲೊರೋಕ್ವಿನ್ ಔಷಧಿ ಉತ್ಪಾದಿಸುವಲ್ಲಿ ಭಾರತ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ. ಜಗತ್ತಿನಲ್ಲಿ ತಯಾರಾಗುವ ಒಟ್ಟು ಹೈಡ್ರಾಕ್ಸಿಕ್ಲೊರೋಕ್ವಿನ್ ಪೈಕಿ ಶೇ.70 ರಷ್ಟು ಭಾರತದಲ್ಲೇ ತಯಾರಾಗುತ್ತದೆ. ಐಪಿಸಿಎ, ಝೈಡಸ್ ಕ್ಯಾಡಿಲಾ ಮುಂತಾದ ಕಂಪನಿಗಳು ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಹೈಡ್ರಾಕ್ಸಿಕ್ಲೊರೋಕ್ವಿನ್ ತಯಾರಿಸುತ್ತಿವೆ.