ಕರ್ನಾಟಕ

karnataka

ETV Bharat / bharat

ಇಂಗ್ಲೆಂಡ್​​ ಮತಗಳು ಬೋರಿಸ್​​​​​​ ಜಾನ್ಸನ್​​ರ ಬ್ರೆಕ್ಸಿಟ್​​​​​​​​​​ ಪರ... ಆದರೆ ಸ್ಕಾಟ್​​​​​​​​​ ಜನರ ಕಣ್ಣು 2ನೇ ಜನಾಭಿಪ್ರಾಯದ ಕಡೆಗೆ - london latest election news

ಬ್ರೆಕ್ಸಿಟ್ ಈಗ ವಾಸ್ತವ ಎನಿಸಿಕೊಂಡಿದ್ದು ಅದರ ಪರಿಣಾಮಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಬೋರಿಸ್ ಜಾನ್ಸನ್ 'ಗೆಟ್ ಬ್ರೆಕ್ಸಿಟ್ ಡನ್' ( ಬ್ರೆಕ್ಸಿಟ್ ಕಾರ್ಯರೂಪಕ್ಕೆ ಬರಲಿ ) ಎಂಬ ಉನ್ಮಾದದ ಘೋಷಣೆ ಮೂಲಕ ಚುನಾವಣೆಯಲ್ಲಿ ನಿರೀಕ್ಷಿತ ಜಯ ಗಳಿಸಿದರು.

England
ಬ್ರೆಕ್ಸಿಟ್

By

Published : Dec 18, 2019, 7:48 AM IST

ಬ್ರೆಕ್ಸಿಟ್ ಈಗ ವಾಸ್ತವ ಎನಿಸಿಕೊಂಡಿದ್ದು ಅದರ ಪರಿಣಾಮಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಬೋರಿಸ್ ಜಾನ್ಸನ್ 'ಗೆಟ್ ಬ್ರೆಕ್ಸಿಟ್ ಡನ್' ( ಬ್ರೆಕ್ಸಿಟ್ ಕಾರ್ಯರೂಪಕ್ಕೆ ಬರಲಿ ) ಎಂಬ ಉನ್ಮಾದದ ಘೋಷಣೆ ಮೂಲಕ ಚುನಾವಣೆಯಲ್ಲಿ ನಿರೀಕ್ಷಿತ ಜಯ ಗಳಿಸಿದರು.

ಜುಲೈನಲ್ಲಿ ತಮ್ಮದೇ ಪಕ್ಷದ ಥೆರೆಸಾ ಮೇ ರಾಜೀನಾಮೆ ನೀಡಿದ ಬಳಿಕ ಬೋರಿಸ್ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ನೇಮಕ ಮಾಡಲಾಯಿತು. ಶುಕ್ರವಾರ ಅವರು ಕನ್ಸರ್ವೇಟಿವ್ ಪಕ್ಷದ ಮತಗಳನ್ನು ಇನ್ನಿಲ್ಲದಂತೆ ತಮ್ಮ ಕಡೆಗೆ ಸೆಳೆದರು. 1987ರಲ್ಲಿ ಮಾರ್ಗರೆಟ್ ಥ್ಯಾಚರ್ ಅವರು ಪ್ರಧಾನಿಯಾಗಿ ಮೂರನೇ ಚುನಾವಣಾ ಗೆಲುವು ಸಾಧಿಸಿದ ನಂತರದ ಅತಿದೊಡ್ಡ ಜಯ ಜಾನ್ಸನ್ ಅವರ ಹೆಸರಿನಲ್ಲಿದೆ. ಬ್ರೆಕ್ಸಿಟ್ ಕುರಿತಂತೆ 2016 ರಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡಲಾಗಿತ್ತು. ಆಗಿನಿಂದ ಮೂರು ವರ್ಷಗಳ ಕಾಲ ನಡೆದ ಜಗ್ಗಾಟ ಮತ್ತು ವಿಳಂಬ ಧೋರಣೆಯಿಂದಾಗಿ ಮತದಾರರು ಬೇಸತ್ತಿದ್ದರು. ಬರುವ ಜನವರಿ ಅಂತ್ಯದ ಹೊತ್ತಿಗೆ ಐರೋಪ್ಯ ಒಕ್ಕೂಟ ತೊರೆಯುವುದಾಗಿ ಭರವಸೆ ನೀಡಿದ ಜಾನ್ಸನ್ ಅವರಿಗೆ ಮತದಾರರು ಒಲಿದಿದ್ದಾರೆ. 14 ಹೊಸ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳು, 20,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ, 50,000 ಹೆಚ್ಚು ದಾದಿಯರ ನೇಮಕಾತಿ, ‘ಅನಾರೋಗ್ಯ ಪೀಡಿತ’ ರಾಷ್ಟ್ರೀಯ ಆರೋಗ್ಯ ಸೇವೆಗೆ ( ಎನ್ ಎಚ್ ಎಸ್ ) ಹೆಚ್ಚಿನ ಅನುದಾನ ಮುಂತಾದ ಹಲವಾರು ಭರವಸೆಗಳನ್ನು ಜಾನ್ಸನ್ ಅವರು ನೀಡಿದ್ದಾರೆ. ಇಂತಹ ಭರವಸೆಗಳ ಹೊರತಾಗಿಯೂ ಅವರ 'ಗೆಟ್ ಬ್ರೆಕ್ಸಿಟ್ ಡನ್' ಈ ಬಾರಿ ಚುನಾವಣೆಯ ಧ್ಯೇಯಮಂತ್ರವಾಗಿದ್ದು ಮತದಾರರ ನಡುವೆ ಹೆಚ್ಚು ಮಾರ್ದನಿಸಿತು. ಒಟ್ಟು 650 ಮಂದಿ ಸದಸ್ಯರನ್ನು ಹೊಂದಿರುವ ಬ್ರಿಟನ್ನಿನಲ್ಲಿ ಕನ್ಸರ್ವೇಟೀವ್ ಪಕ್ಷ 78 ಸೀಟುಗಳಷ್ಟು ಅಧಿಕ ಬಹುಮತ ಗಳಿಸುವ ಮೂಲಕ ನಿರಾಯಾಸವಾಗಿ ಗದ್ದುಗೆಯನ್ನು ಭದ್ರಪಡಿಸಿಕೊಂಡಿದೆ ( ಕನ್ಸರ್ವೇಟಿವ್ ಪಕ್ಷದ ಈಗಿನ ಬಲಾಬಲ 365 ).

ಇತ್ತ ಮುಖ್ಯ ವಿರೋಧ ಪಕ್ಷ ಲೇಬರ್ ಪಾರ್ಟಿ ಭಾರಿ ನಷ್ಟ ಅನುಭವಿಸಿದೆ. ಬಹುಶಃ ಕಳೆದ ಅರ್ಧ ಶತಮಾನದ ಅವಧಿಯಲ್ಲಿಯೇ ಜೆರೆಮಿ ಕಾರ್ಬಿನ್ ಪಕ್ಷದ ಅತ್ಯಂತ ಅಪ್ರಿಯ ನೇತಾರ ಎನಿಸಿಕೊಂಡಿದ್ದಾರೆ. ಆತ ಪಕ್ಷದ ಉನ್ನತ ಸ್ಥಾನಗಳನ್ನು ಸಿದ್ಧಾಂತದ ಆಧಾರದ ಮೇಲೆ ವಿಭಜಿಸಿದರು ಮತ್ತು ಕಠಿಣ ಎಡಪಂಥೀಯ ನಿಲುವುಗಳ ಮೂಲಕ ಪಕ್ಷದೊಳಗೆ ಬೆಂಬಲ ಗಳಿಸುವುದರತ್ತ ಅವರ ದೃಷ್ಟಿ ಹರಿದಿತ್ತು. ಇಪ್ಪತ್ತೊಂದನೇ ಶತಮಾನದಲ್ಲಿ, ಕಾರ್ಬಿನ್ ಅವರು ಮುಕ್ತ ಮಾರುಕಟ್ಟೆ ಮೇಲೆ ನಡೆಸಿದ ‘ಆಕ್ರಮಣ’, ಸಾರ್ವಜನಿಕ ಮತ್ತು ಖಾಸಗಿ ಕೈಗಾರಿಕೆ ಹಾಗೂ ಸೇವೆಗಳನ್ನು ವ್ಯಾಪಕ ನೆಲೆಯಲ್ಲಿ ಮರು ರಾಷ್ಟ್ರೀಕರಣಗೊಳಿಸುವ ಉದ್ದೇಶದಿಂದ ನೀಡಲಾದ ಭರವಸೆ, ಸುಪ್ತವಾಗಿ ಅವರೊಳಗೆ ಇರುವ ಯಹೂದಿ ವಿರೋಧಿ ಧೋರಣೆ, ಅಮೇರಿಕನ್ನರಿಗೆ ವಿರುದ್ಧವಾದ ಮತ್ತು ರಷ್ಯಾ ಪರ ಒಲವಿರುವ ವಿದೇಶಾಂಗ ನೀತಿ, ಇತ್ಯಾದಿ ಅಂಶಗಳಿಗೆ ತುತ್ತಾದವರು ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ. ಒಂದೇ ಪದದಲ್ಲಿ ಹೇಳುವುದಾದರೆ, ಜಗತ್ತು ಮುಂದುವರಿದಿದ್ದರೂ ಕೂಡ ಕಾರ್ಬಿನ್ ಅವರು ಇನ್ನೂ ಶೀತಲ ಸಮರದ ಯುಗಕ್ಕೆ ಸೇರಿದವರು ಎನಿಸಿಕೊಂಡಿದ್ದಾರೆ. ಕೇವಲ 203 ಕ್ಷೇತ್ರಗಳನ್ನು ಗೆಲ್ಲುವುದರೊಂದಿಗೆ ಕಾರ್ಬಿನ್ಸ್ ಅವರ ಲೇಬರ್ ಪಕ್ಷ 59 ಸ್ಥಾನಗಳನ್ನು ಕಳೆದುಕೊಂಡಿದೆ. ಬ್ರೆಕ್ಸಿಟ್ ಬಗ್ಗೆ ಕಾರ್ಬಿನ್ನರ ಗೊಂದಲಕಾರಿ ನಿಲುವಿನಿಂದಾಗಿ ದೀರ್ಘಕಾಲದ ಲೇಬರ್ ಕೋಟೆಗಳು ಟೋರಿಯನ್ನರ ( ಸ್ಥೂಲವಾಗಿ ಕನ್ಸರ್ವೇಟಿವ್ ಪಕ್ಷದ ಒಂದು ಟಿಸಿಲನಂತಿದೆ ಟೋರಿವಾದ. ಇದು ಸಾಮ್ರಾಜ್ಯಶಾಹಿತ್ವವನ್ನು ಹೆಚ್ಚು ಬೆಂಬಲಿಸುತ್ತದೆ. ) ಪಾಳೆಯಗಳಾಗಿ ಬದಲಾದವು.

ಕಾರ್ಬಿನ್ ತಮ್ಮನ್ನು ತಟಸ್ಥರು ಎಂದು ಹೇಳಿಕೊಂಡರೂ, ತಾನು ಅಧಿಕಾರಕ್ಕೆ ಬಂದರೆ ಬ್ರೆಕ್ಸಿಟ್ ಕುರಿತಂತೆ ಮತ್ತೊಂದು ಜನಾಭಿಪ್ರಾಯ ಸಂಗ್ರಹ ಮಾಡುತ್ತೇನೆ ಎಂದು ಭರವಸೆ ನೀಡಿದರು. ಆದರೆ ಲೇಬರ್ ಪಕ್ಷದ ಕಟ್ಟರ್ ಬೆಂಬಲಿಗರು ಕೂಡ ಬ್ರೆಕ್ಸಿಟ್ ಅಭಿಯಾನದ ಮುಂಚೂಣಿಯಲ್ಲಿ ಇದ್ದಾರೆ ಎಂಬುದನ್ನು ಅರಿಯದೇ ಹೋದರು. ಶ್ವೇತವರ್ಣೀಯ ಬ್ರಿಟಿಷ್ ಪುರುಷ ಕಾರ್ಮಿಕ ವರ್ಗದಲ್ಲಿ ಆರ್ಥಿಕ ಸಂಘರ್ಷದ ಭಾವನೆಗಳು ಮೊಳೆತಿದ್ದವು. ಹಿಂದಿನ ಸೋವಿಯತ್ ದೇಶಗಳಿಂದ ಅಗ್ಗದ ದರದಲ್ಲಿ ಕಾರ್ಮಿಕರನ್ನು ದೇಶದ ಒಳಗೆ ಕರೆತರಬಹುದು ಎಂಬ ಅಂಶ ಆ ಕಾರ್ಮಿಕರನ್ನು ತೀವ್ರ ಅಸಮಾಧಾನಕ್ಕೆ ಈಡುಮಾಡಿತ್ತು. ಬ್ರೆಕ್ಸಿಟ್ ಅಸ್ತಿತ್ವಕ್ಕೆ ಬರಲು ಇಂತಹ ಅಂಶಗಳೇ ಕಾರಣ ಆಗಿದ್ದರೂ ಕಾರ್ಬಿನ್ಸ್ ಅವರ ಲೇಬರ್ ಪಕ್ಷ ದ್ವಂದ್ವ ನಿಲುವಿನಲ್ಲೇ ಮುಳುಗಿತು. ಸಣ್ಣ ಆಶ್ಚರ್ಯ ಏನೆಂದರೆ ಲೇಬರ್ ಪಕ್ಷ ಗೆಲುವು ಸಾಧಿಸುತ್ತಿದ್ದ ಭದ್ರಕೋಟೆಯನ್ನು ಟೋರಿವಾದಿಗಳು ಭೇದಿಸುತ್ತ ಬಂದಿರುವುದು ಕಳೆದ ಅರ್ಧ ಶತಮಾನದಿಂದ ಈಚೆಗೆ. ಮತ್ತೊಂದೆಡೆ, ಲೇಬರ್ ಪಕ್ಷದ ಪ್ರತಿಗಾಮಿ ನೀತಿಯಿಂದಾಗಿ ಲಂಡನ್‌ನಲ್ಲಿದ್ದ ಉಳಿದ ಬಲಿಷ್ಠ ಕ್ಷೇತ್ರಗಳು ಕೂಡ ಪಕ್ಷವನ್ನು ದೂರ ಇಟ್ಟವು. ಆದ್ದರಿಂದ, ಇದು ಜಾನ್ಸನ್‌ ಅವರಿಗೆ ಗೆಲುವಿನ ಮೇಲೆ ಗೆಲುವು ನೀಡಬಲ್ಲ ಸನ್ನಿವೇಶ ಸೃಷ್ಟಿಸಿತು. ಅನೇಕ ವರ್ಷಗಳಿಂದ ಸೋಲಿನ ಸುಳಿಯಲ್ಲಿ ಇದ್ದರೂ ಸಹ ಅದರ ಹೊಣೆ ಹೊತ್ತು ಕಾರ್ಬಿನ್ ಅವರು ತಕ್ಷಣ ರಾಜೀನಾಮೆ ನೀಡುವುದಿಲ್ಲ. ಆ ಕುರಿತಂತೆ ಮುಂದಿನ ವರ್ಷವಷ್ಟೇ ಪಕ್ಷ ಪ್ರಕ್ರಿಯೆ ಪೂರ್ಣಗೊಳಿಸಬಹುದು ಎಂದು ಹೇಳಲಾಗುತ್ತಿದೆ. ಇದೇ ವೇಳೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಲಿಬರಲ್-ಡೆಮೋಕ್ರಾಟ್ ಪಕ್ಷದ ನಾಯಕಿ ಜೋ ಸ್ವಿನ್ಸನ್, ತಮ್ಮ ಸ್ಥಾನ ಉಳಿಸಿಕೊಳ್ಳಲು ವಿಫಲರಾಗಿ ಆ ಕೂಡಲೇ ಪಕ್ಷಕ್ಕೂ ರಾಜೀನಾಮೆ ಸಲ್ಲಿಸಿದರು. (ಲಿಬರಲ್-ಡೆಮೋಕ್ರಾಟ್ ಪಕ್ಷದ ನಿಯಮದಂತೆ ಸಂಸದರಾಗಲು ವಿಫಲ ಆದವರು ಆ ಪಕ್ಷದಲ್ಲಿ ಮುಂದುವರಿಯುವಂತಿಲ್ಲ).

ಇಷ್ಟಾದರೂ ದೇಶದೆಲ್ಲೆಡೆ ಹಬ್ಬಿರುವ ಬ್ರೆಕ್ಸಿಟ್ ವಿದ್ಯಮಾನಕ್ಕೆ ಸವಾಲು ಎಸೆಯುತ್ತಿರುವುದು ಸ್ಕಾಟ್ಲೆಂಡ್. ಅಲ್ಲಿ ನಿಕೋಲಾ ಸ್ಟರ್ಜನ್ ನೇತೃತ್ವದ ಸ್ಕಾಟಿಷ್ ನ್ಯಾಷನಲ್ ಪಕ್ಷ 48 ಸ್ಥಾನಗಳನ್ನು ಗೆದ್ದಿದೆ. ಕಳೆದ ಬಾರಿಗಿಂತಲೂ ಹೆಚ್ಚುವರಿಯಾಗಿ 13 ಕ್ಷೇತ್ರಗಳನ್ನು ಪಕ್ಷ ತನ್ನದಾಗಿಸಿಕೊಂಡಿದೆ. ಬ್ರಿಟನ್ ಜೊತೆ ಮುಂದುವರಿಯಬೇಕೆ ಅಥವಾ ಸ್ವತಂತ್ರ ದೇಶವಾಗಬೇಕೆ ಎಂಬುದನ್ನು ನಿರ್ಧರಿಸಲು ಅಲ್ಲಿ ಎರಡನೇ ಬಾರಿಗೆ ಜನಾಭಿಪ್ರಾಯ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಎರಡನೇ ಜನಾಭಿಪ್ರಾಯ ಸಂಗ್ರಹಕ್ಕೆ ದೊಡ್ಡ ಗೆಲುವು ದೊರೆಯಲಿದೆ ಎಂದು ಸ್ಟರ್ಜನ್ ಸ್ಪಷ್ಟವಾಗಿ ಹೇಳಿದ್ದಾರೆ. 2016 ರ ಜನಮತ ಸಂಗ್ರಹದ ವೇಳೆ ಐರೋಪ್ಯ ಒಕ್ಕೂಟದಿಂದ ಹೊರಬರುವುದರ ವಿರುದ್ಧವಾಗಿ ಸ್ಕಾಟ್ಲೆಂಡ್ ಮತ ಚಲಾಯಿಸಿತ್ತು. ಬ್ರಿಟನ್ ಬರುವ ಜನವರಿ ಅಂತ್ಯದ ವೇಳೆಗೆ ಐರೋಪ್ಯ ಒಕ್ಕೂಟ ತೊರೆದದ್ದೇ ಆದಲ್ಲಿ ಸ್ಕಾಟ್ಲೆಂಡ್ ನಿಲುವು ವಿಚಿತ್ರ ಎನಿಸುತ್ತದೆ.

ಸ್ಕಾಟ್ಲೆಂಡಿನಲ್ಲಿ ಸ್ವಾತಂತ್ರ್ಯದ ಪರವಾಗಿ ಬಲವಾದ ಅಲೆ ಇದೆ ಎಂಬುದನ್ನು ಈಗಾಗಲೇ ಬಲ್ಲ ಇಂಗ್ಲೆಂಡಿನ ನೂತನ ಪ್ರಧಾನಿ ಜಾನ್ಸನ್, ರಾಷ್ಟ್ರೀಯ ಐಕ್ಯತೆಗಾಗಿ 'ಬ್ರಿಟನ್ ಒಂದು' ಎಂಬ ಹುಕುಂ ಹೊರಡಿಸಿದ್ದಾರೆ. ಹೀಗಾಗಿ, ಬರುವ ಜನವರಿ 31ರಂದು ಐರೋಪ್ಯ ಒಕ್ಕೂಟ ತೊರೆದ ನಂತರ ಬ್ರಿಟನ್ ಎದುರಿನ ಹಾದಿ ಸರಳವಾಗಿ ಇರುವುದಿಲ್ಲ. 27 ಸದಸ್ಯರ ಒಕ್ಕೂಟದಲ್ಲಿ ಮೂಗು ತೂರಿಸಿದ ಬ್ರಿಟನ್ನಿಗೆ ಐರೋಪ್ಯ ಒಕ್ಕೂಟ ನ್ಯಾಯಯುತ ವ್ಯಾಪಾರ ಒಪ್ಪಂದ ನೀಡುತ್ತದೆಯೇ ಎಂಬ ಪ್ರಶ್ನೆ ಇದೆ. ಯಾವುದೇ ಸಂದರ್ಭದಲ್ಲಿ, ವ್ಯಾಪಾರ ಒಪ್ಪಂದ ಏರ್ಪಡಲು ಅನೇಕ ವರ್ಷಗಳಷ್ಟು ದೀರ್ಘಕಾಲ ಹಿಡಿಯಲಿದ್ದು ಜಾನ್ಸನ್ನರ ನಿಗದಿತ ಗಡುವಿನ ಒಳಗೆ ಒಮ್ಮತ ಮೂಡುವುದು ಅಸಾಧ್ಯದ ಸಂಗತಿ. ವಿಶ್ವಾಸಾರ್ಹತೆಯ ಕೊರತೆ ಎದುರಿಸುತ್ತಿರುವ ಕಾರಣಕ್ಕಾಗಿ ಜಾನ್ಸನ್ ಅವರು ಅಮೆರಿಕ, ಭಾರತ ಮತ್ತಿತರ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳಿಗೆ ಹಿಂದೆ ಮುಂದೆ ಎಣಿಸದೆ ಸಹಿ ಹಾಕುವ ಸಾಧ್ಯತೆಗಳು ಇಲ್ಲದೆ ಇಲ್ಲ.

ಕನ್ಸರ್ವೇಟಿವ್ ಪಕ್ಷದ ದೊಡ್ಡ ಗೆಲುವು ಪೌಂಡ್ ಮೌಲ್ಯವನ್ನು ಬಲಗೊಳಿಸುವುದರಲ್ಲಿ ಅನುಮಾನ ಇಲ್ಲ. ಆದರೆ ಬ್ರೆಕ್ಸಿಟ್ ಅವ್ಯವಸ್ಥೆ ಬ್ರಿಟನ್ನಿನ ವ್ಯಾಪಾರ ಮತ್ತು ಉದ್ಯಮದ ಬಹುಪಾಲನ್ನು ಅಸ್ಥಿರಗೊಳಿಸುವ ಸಾಧ್ಯತೆ ಇದೆ. ಈಗ ಬ್ರಿಟನ್ ಶಕ್ತಿ ಕೂಡ ಕ್ಷೀಣಿಸುತ್ತಿದ್ದು, ಆರ್ಥಿಕ ಪ್ರಗತಿ ಹೆಚ್ಚಿಸಲು ಬಲವಾದ ವ್ಯಾಪಾರಿ ಪಾಲುದಾರರ ಅಗತ್ಯ ಇದೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ ಅದರ ಬೆಳವಣಿಗೆಯ ದರ ಶೂನ್ಯಕ್ಕೆ ಕುಸಿದಿತ್ತು. ಜಾನ್ಸನ್ ಇನ್ನು ಮುಂದೆ ನಿರ್ಭಿಡೆಯಿಂದ, ಉತ್ಸಾಹದ ಅಲೆಯಲ್ಲಿ ತೇಲುತ್ತ ‍ಬ್ರಿಟನ್ನನ್ನು ಮುನ್ನಡೆಸಲು ಸಾಧ್ಯ ಇಲ್ಲ. ಕಠಿಣ ಶ್ರಮದ ಮೂಲಕ ತಾವು ಸಮರ್ಥ ಎಂಬುದನ್ನು ಸಾರಬೇಕಿದೆ. ಅಲ್ಲದೆ ಬರಲಿರುವ ತಿಂಗಳು ಅಥವಾ ವರ್ಷಗಳಲ್ಲಿ ಅಮೆರಿಕ, ಭಾರತ ರೀತಿಯ ದೇಶಗಳೊಂದಿಗೆ ಯುಕ್ತ ಮತ್ತು ಉತ್ಪಾದನಾಶೀಲ ವ್ಯಾಪಾರ ಒಪ್ಪಂದಕ್ಕೆ ಅವರು ಮುಂದಾಗಬೇಕಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಒಳಗೆ ಮತ್ತು ಹೊರಗೆ ಇರುವ ಎಲ್ಲ ವಲಯಗಳನ್ನು ತಮ್ಮೊಟ್ಟಿಗೆ ಜಾನ್ಸನ್ ಅವರು ಕೊಂಡೊಯ್ಯಬೇಕಿದೆ.

- ವೀರೇಂ

ದ್ರ ಕಪೂರ್

ABOUT THE AUTHOR

...view details