ರತ್ಲಂ: ಮಧ್ಯಪ್ರದೇಶದ ರತ್ಲಂ ನಗರದ ಇಂಜಿನಿಯರ್, ಸ್ವದೇಶಿ ವೆಂಟಿಲೇಟರ್ನನ್ನು ರೂಪಿಸಿದ್ದಾರೆ. ಇದು ಇತರ ಯಾವುದೇ ದುಬಾರಿ ಆಮದು ವೆಂಟಿಲೇಟರ್‌ನಂತೆಯೇ ಗಂಭೀರವಾಗಿ ಅನಾರೋಗ್ಯ ಪೀಡಿತ ರೋಗಿಗಳ ಜೀವ ಉಳಿಸಲು ನೆರವಾಗಲಿದೆ.
ಪಿಎನ್‌ಟಿ ಕಾಲೋನಿಯ ನಿವಾಸಿ ಅನ್ಸಾರ್ ಅಹ್ಮದ್ ಅಬ್ಬಾಸಿ ಕೇವಲ 7000 ರೂಪಾಯಿ ವೆಚ್ಚದಲ್ಲಿ ಪೋರ್ಟಬಲ್ ವೆಂಟಿಲೇಟರ್ ತಯಾರಿಸಿದ್ದಾರೆ. ಇದನ್ನು ಮೊಬೈಲ್ ಮತ್ತು ಲ್ಯಾಪ್‌ಟಾಪ್ ಮೂಲಕವೂ ನಿರ್ವಹಿಸಬಹುದಾಗಿದೆ.
ದೇಶದಲ್ಲಿ ಸಾಮಾನ್ಯವಾಗಿ ಬಳಸುವ ಹೆಚ್ಚಿನ ವೆಂಟಿಲೇಟರ್‌ಗಳನ್ನು ಚೀನಾದಿಂದ ತಯಾರಿಸ್ಪಟ್ಟದ್ದಾಗಿವೆ. ಅನ್ಸಾರ್ ಅಹ್ಮದ್ ಅವರು ತರಬೇತುದಾರ ನಜೀಬ್ ಅವರೊಂದಿಗೆ ಸೇರಿ ಒಂದು ತಿಂಗಳ ಅವಧಿಯಲ್ಲಿ ಈ ವೆಂಟಿಲೇಟರ್ ಅನ್ನು ಭಾರತೀಯ ಭಾಗಗಳನ್ನು ಬಳಸಿ ತಯಾರಿಸಿದ್ದಾರೆ. ಆದ್ದರಿಂದ ಇದನ್ನು "ಇಂಡಿಯನ್ ವೆಂಟಿಲೇಟರ್" ಎಂದು ಹೆಸರಿಸಿದ್ದಾರೆ.
ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ, ಅನ್ಸಾರ್ ಅಹ್ಮದ್ ಮತ್ತು ಅವರ ಅಪ್ರೆಂಟಿಸ್ ನಜೀಬ್ ಅವರು ವೆಂಟಿಲೇಟರ್‌ಗಳ ಕೊರತೆಯ ಸಾಧ್ಯತೆಯಿಂದಾಗಿ ದೇಶಕ್ಕೆ ಸ್ಥಳೀಯ ವೆಂಟಿಲೇಟರ್‌ಗಳನ್ನು ತಯಾರಿಸುವ ಯೋಚನೆಯನ್ನು ಮಾಡಿದ್ದರು. ಕೊರೊನಾ ವೈರಸ್ ರೋಗದೊಂದಿಗೆ ನಡೆಯುತ್ತಿರುವ ಯುದ್ಧದಲ್ಲಿ ಅಹ್ಮದ್ ಅವರ ವೆಂಟಿಲೇಟರ್ ಗಳು ತುಂಬಾ ಸಹಕಾರಿಯಾಗಿವೆ.