ಶ್ರೀನಗರ:ಕಳೆದ ಆಗಸ್ಟ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಂತರ ಗೃಹ ಬಂಧನಕ್ಕೆ ಒಳಗಾಗಿದ್ದ ಜಮ್ಮು ಭಾಗದ ರಾಜಕೀಯ ನಾಯಕರಿಗೆ ಬಂಧನದಿಂದ ಮುಕ್ತಿ ಸಿಕ್ಕಿದೆ.
2 ತಿಂಗಳ ನಂತರ ಜಮ್ಮು ನಾಯಕರಿಗೆ ಬಿಡುಗಡೆ ಭಾಗ್ಯ.. ಕಾಶ್ಮೀರಿಗರಿಗೆ ಯಾವಾಗ? - ಗೃಹ ಬಂಧನ
ಕಳೆದ 2 ತಿಂಗಳಿನಿಂದ ಗೃಹ ಬಂಧನದಲ್ಲಿದ್ದ ಜಮ್ಮು ಭಾಗದ ರಾಜಕೀಯ ನಾಯಕರನ್ನ ಬಂಧನದಿಂದ ಬಿಡುಗಡೆ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಭಾಗದ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆ ಮಾಡಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಜಮ್ಮು ಭಾಗದ ರಾಜಕೀಯ ನಾಯಕರನ್ನ ಬಿಡುಗಡೆ ಮಾಡಿದೆ. ಆದ್ರೆ, ಕಾಶ್ಮೀರ ಭಾಗದಲ್ಲಿನ ನಾಯಕರು ಮಾತ್ರ ಇನ್ನೂ ಗೃಹ ಬಂಧನದಲ್ಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಜ್ಯಪಾಲ ಸತ್ಯಪಾಲ್ ಅವರ ಆಪ್ತ ಸಲಹೆಗಾರ ಫಾರೂಖ್ ಖಾನ್, ಕಾಶ್ಮೀರ ಭಾಗದ ನಾಯಕರ ಬಗ್ಗೆ ಪರಿಶೀಲನೆ ನಡೆಸಿ ಒಬ್ಬೊಬ್ಬರನ್ನೇ ಗೃಹ ಬಂಧನದಿಂದ ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಂಖ್ಯಮಂತ್ರಿಗಳಾದ ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಕೂಡ ಕಳೆದ 2 ತಿಂಗಳಿನಿಂದ ಗೃಹ ಬಂಧನದಲ್ಲಿದ್ದಾರೆ.