ತಿನ್ಸುಕಿಯಾ, ಅಸ್ಸಾಂ: ವಿಷಯುಕ್ತ ದನದ ಮಾಂಸ ತಿಂದು ಅಪಾಯದಂಚಿನಲ್ಲಿರುವ ಸುಮಾರು 11 ರಣಹದ್ದುಗಳು ಸಾವನ್ನಪ್ಪಿರುವ ಘಟನೆ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿರುವ ಧೋಲಾ ಪ್ರದೇಶದಲ್ಲಿ ನಡೆದಿದೆ.
ಅಳಿವಿನಂಚಿನ 11 ರಣಹದ್ದುಗಳು ಸಾವು ತಲಾಪ್ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ರಣಹದ್ದುಗಳ ಕಳೇಬರಗಳು ಪತ್ತೆಯಾಗಿದ್ದು, ಇನ್ನೂ 12 ರಣಹದ್ದುಗಳು ಅಸ್ವಸ್ಥಗೊಂಡಿದ್ದು, ಅರಣ್ಯಾಧಿಕಾರಿಗಳು ರಕ್ಷಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಸಾರಿಗೆ ಬಸ್-ಕಾರ್ ನಡುವೆ ಭೀಕರ ಅಪಘಾತ: ಓರ್ವ ಸಾವು, ಮೂವರು ಗಂಭೀರ
ಎರಡು ದನಗಳ ಕಳೇಬರಗಳಲ್ಲಿ ವಿಷವಿಡಲಾಗಿತ್ತು ಎಂದು ಹೇಳಲಾಗಿದ್ದು, ಆ ವಿಷ ಎಷ್ಟು ಪರಿಣಾಮ ಬೀರಿದೆ ಎಂಬುದರ ಬಗ್ಗೆ ನಮಗೆ ಖಚಿತತೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸತ್ತ ರಣಹದ್ದುಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
1990ರ ದಶಕದಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಮತ್ತು ಇತರ ಸಂಸ್ಥೆಗಳು ನಡೆಸಿದ ಅಧ್ಯಯನದ ಪ್ರಕಾರ ಹಿಮಾಲಯನ್ ಗ್ರಿಫನ್, ವೈಟ್ ಬ್ಯಾಕ್ಡ್ ಮತ್ತು ಸ್ಲೆಂಡರ್ ಬಿಲ್ ರಣಹದ್ದುಗಳು ಭಾರತ ಮತ್ತು ನೇಪಾಳದಲ್ಲಿದ್ದು, ಅವುಗಳ ಸಂಖ್ಯೆ ಎರಡು ದಶಕಗಳಲ್ಲಿ ಶೇಕಡಾ 99.9ರಷ್ಟು ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ.