ಬಿಜಾಪೂರ: ಮಾವೋವಾದಿಗಳು ಮತ್ತು ಸೈನಿಕರ ಮಧ್ಯೆ ಗುಂಡಿನ ಕಾಳಗ ನಡೆದಿದ್ದು, ಸಿಆರ್ಪಿಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಮಾವೋವಾದಿಗಳು -ಸೈನಿಕರ ಮಧ್ಯೆ ಗುಂಡಿನ ಚಕಮಕಿ... ಬಿಜಾಪೂರ್ದಲ್ಲಿ ಯೋಧ ಹುತಾತ್ಮ! - ಬಿಜಾಪೂರ್ದಲ್ಲಿ ಮಾವೋವಾದಿಗಳ ಜೊತೆ ಗುಂಡಿನ ದಾಳಿ
ಮಾವೋವಾದಿ ಮತ್ತು ಸೈನಿಕರ ಮಧ್ಯೆ ಗುಂಡಿನ ಚಕಮಕಿ ನಡೆದಿದ್ದು, ಯೋಧನೊಬ್ಬ ಹುತಾತ್ಮನಾಗಿರುವ ಘಟನೆ ಛತ್ತಿಸ್ಗಢದಲ್ಲಿ ನಡೆದಿದೆ.
![ಮಾವೋವಾದಿಗಳು -ಸೈನಿಕರ ಮಧ್ಯೆ ಗುಂಡಿನ ಚಕಮಕಿ... ಬಿಜಾಪೂರ್ದಲ್ಲಿ ಯೋಧ ಹುತಾತ್ಮ!](https://etvbharatimages.akamaized.net/etvbharat/prod-images/768-512-4986551-530-4986551-1573103113301.jpg)
ಸಾಂದರ್ಭಿಕ ಚಿತ್ರ
ಬಿಜಾಪೂರ ಜಿಲ್ಲೆಯ ತಂಗುದಾ-ಪಮೇದ್ ಪ್ರದೇಶದಲ್ಲಿ ಇಂದು ಬೆಳಗ್ಗೆ ಕಮಾಂಡರ್, ಕೋಬ್ರಾ, ಸಿಆರ್ಪಿಎಫ್ 151 ಬೆಟಾಲಿಯನ್ ಯೋಧರು, ಛತ್ತಿಸ್ಗಢ ಪೊಲೀಸರು ಸೇರಿ ಜಂಟಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಎದುರಾದ ಮಾವೋವಾದಿಗಳು ಸೇನೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಇನ್ನು ಈ ಗುಂಡಿನ ಕಾಳಗದಲ್ಲಿ ಸಿಆರ್ಪಿಎಫ್ ನ 151 ಬೆಟಾಲಿಯನ್ಗೆ ಸೇರಿರುವ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಕೆಲ ಮಾವೋವಾದಿಗಳು ಸಹ ಸಾವನ್ನಪ್ಪಿದ್ದು, ಕೂಂಬಿಂಗ್ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.