ಶ್ರೀನಗರ(ಜಮ್ಮು ಕಾಶ್ಮೀರ) : ಕಣಿವೆ ನಾಡಿನ ಪೂಂಚ್ ಸೆಕ್ಟರ್ ಬಳಿಯ ಸುರನ್ಕೋಟ್ ಸಮೀಪ ಮೂವರು ಭಯೋತ್ಪಾದಕರು ಹಾಗೂ ಭದ್ರತಾಪಡೆಯ ನಡುವೆ ಗುಂಡಿನ ಚಕಮಕಿ ನಡೆದಿದೆ. ಭಯೋತ್ಪಾದಕರಲ್ಲಿ ಓರ್ವ ಸ್ಥಳೀಯನಾಗಿದ್ದು, ಮತ್ತಿಬ್ಬರು ಪಾಕ್ಗೆ ಸೇರಿದವರಾಗಿದ್ದಾರೆ.
ಶರಣಾಗಲು ಭಯೋತ್ಪಾದಕರ ನಿರಾಕರಣೆ: ಪೂಂಚ್ನಲ್ಲಿ ಸೇನೆಯಿಂದ ಎನ್ಕೌಂಟರ್ - ಚಟ್ಟಪಾನಿ- ದುಗ್ರಾನ್ ಗ್ರಾಮ ಬಳಿ ಕಾರ್ಯಾಚರಣೆ
16:56 December 13
ಜಮ್ಮು ಕಾಶ್ಮೀರದ ಪೂಂಚ್ ಸೆಕ್ಟರ್ನಲ್ಲಿ ಉಗ್ರರ ಹೆಡೆಮುರಿ ಕಟ್ಟಲು ಯೋಧರು ಎನ್ಕೌಂಟರ್ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ನಿಖರ ಮಾಹಿತಿಯನ್ನು ಆಧರಿಸಿ ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಭಾರತೀಯ ಸೇನೆ ಜಂಟಿ ಕಾರ್ಯಾಚರಣೆ ಚಟ್ಟಪಾನಿ- ದುಗ್ರಾನ್ ಗ್ರಾಮದಲ್ಲಿ ನಡೆದಿತ್ತು. ಈ ವೇಳೆ ಭಯೋತ್ಪಾದಕರಿಗೆ ಶರಣಾಗುವಂತೆ ಸೂಚನೆ ನೀಡಲಾಗಿತ್ತು.
ಇದನ್ನೂ ಓದಿ:ಕಾಶ್ಮೀರದಲ್ಲಿ ಉಗ್ರರ ಅಡಗುತಾಣಗಳು ಪತ್ತೆ: ಮುಂದುವರಿದ ಶೋಧಕಾರ್ಯ
ಸೂಚನೆಯನ್ನು ತಿರಸ್ಕರಿಸಿದ ಭಯೋತ್ಪಾದಕರು ಸೇನೆಯ ಮೇಲೆ ಗುಂಡಿನ ದಾಳಿಗೆ ಮುಂದಾದಾಗ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಜಮ್ಮು ಕಾಶ್ಮೀರ ಪೊಲೀಸರು ಸ್ಪಷ್ಟನೆ ನೀಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.