ಕರ್ನಾಟಕ

karnataka

ETV Bharat / bharat

ಕುಲ್ಗಂ ಎನ್​ಕೌಂಟರ್​: ಬೆಳ್ಳಂಬೆಳಗ್ಗೆ ಇಬ್ಬರು ಉಗ್ರರನ್ನು ಬೇಟೆಯಾಡಿದ ಸೇನೆ - ಚಿಂಗಂ ಎನ್​ಕೌಂಟರ್

ಜಮ್ಮು-ಕಾಶ್ಮೀರದ ಕುಲ್ಗಂ ಜಿಲ್ಲೆಯ ಚಿಂಗಂ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್​ಕೌಂಟರ್​ ಮುಂದುವರಿದಿದ್ದು, ಇಬ್ಬರು ಉಗ್ರರನ್ನು ಭದ್ರತಾ ಪಡೆ ಸದೆಬಡೆದಿದೆ.

encounter-breaks-out-between-terrorists-and-security-forces-in-j-k
ಎನ್​ಕೌಂಟರ್

By

Published : Oct 10, 2020, 5:56 AM IST

Updated : Oct 10, 2020, 8:08 AM IST

ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಂ ಜಿಲ್ಲೆಯ ಚಿಂಗಂ ಪ್ರದೇಶದಲ್ಲಿ ಇಂದು ಮುಂಜಾನೆ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ.

ಕುಲ್ಗಂನ ಚಿಂಗಂ ಪ್ರದೇಶದಲ್ಲಿ ಎನ್​ಕೌಂಟರ್​ ನಡೆಯುತ್ತಿದ್ದು, ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರನ್ನು ಸೇನೆ ಹೊಡೆದುರುಳಿಸಿದೆ. ಇನ್ನು ಎನ್​ಕೌಂಟರ್​ ಮುಂದುವರಿದಿದ್ದು, ಉಗ್ರರು ಸಾವನ್ನಪ್ಪಿರುವ ಬಗ್ಗೆ ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದೆ.

ಭಯೋತ್ಪಾದಕರು ಇರುವ ಬಗ್ಗೆ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯ ನಡೆಸಿದ ಬಳಿಕ ಗುಂಡಿನ ಚಕಮಕಿ ನಡೆಯುತ್ತಿದೆ. ಎನ್​ಕೌಂಟರ್​ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Last Updated : Oct 10, 2020, 8:08 AM IST

ABOUT THE AUTHOR

...view details