ಅನಂತ್ನಾಗ್: ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರನೋರ್ವನನ್ನು ಹೊಡೆದುರುಳಿಸಲಾಗಿದೆ.
ಅನಂತ್ನಾಗ್ ಎನ್ಕೌಂಟರ್: ಓರ್ವ ಉಗ್ರನ ಸದೆಬಡಿದ ಭದ್ರತಾ ಪಡೆ - Jammu and Kashmir Encounter
ಅನಂತ್ನಾಗ್ ಜಿಲ್ಲೆಯ ಲರ್ನೂ ಪ್ರದೇಶದಲ್ಲಿ ಇಂದು ಬೆಳಗ್ಗೆ ಪೊಲೀಸರು ಹಾಗೂ ಭದ್ರತಾ ಪಡೆ ಜಂಟಿಯಾಗಿ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ನಡೆದ ಎನ್ಕೌಂಟರ್ನಲ್ಲಿ ಉಗ್ರನೊಬ್ಬ ಹತನಾಗಿದ್ದಾನೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.
![ಅನಂತ್ನಾಗ್ ಎನ್ಕೌಂಟರ್: ಓರ್ವ ಉಗ್ರನ ಸದೆಬಡಿದ ಭದ್ರತಾ ಪಡೆ Anantnag Encounter](https://etvbharatimages.akamaized.net/etvbharat/prod-images/768-512-9206027-thumbnail-3x2-megha.jpg)
ಅನಂತ್ನಾಗ್ ಎನ್ಕೌಂಟರ್
ಉಗ್ರರು ಇರುವ ಖಚಿತ ಮಾಹಿತಿ ಮೇರೆಗೆ ಅನಂತ್ನಾಗ್ ಜಿಲ್ಲೆಯ ಲರ್ನೂ ಪ್ರದೇಶದಲ್ಲಿ ಇಂದು ಬೆಳಗ್ಗೆ ಪೊಲೀಸರು ಹಾಗೂ ಭದ್ರತಾ ಪಡೆ ಜಂಟಿಯಾಗಿ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಈ ವೇಳೆ ನಡೆದ ಎನ್ಕೌಂಟರ್ನಲ್ಲಿ ಉಗ್ರ ಹತನಾಗಿದ್ದಾನೆ ಎಂದು ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 10,12 ಹಾಗೂ 14 ರಂದು ಪುಲ್ವಾಮಾ, ಶ್ರೀನಗರ ಮತ್ತು ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ಗಳಲ್ಲಿ ಲಷ್ಕರ್- ಇ -ತೊಯ್ಬಾ (ಎಲ್‌ಇಟಿ) ಸಂಘಟನೆಯ ಉಗ್ರರು ಸೇರಿದಂತೆ ಒಟ್ಟು ಆರು ಉಗ್ರರನ್ನು ಸೆದೆಬಡಿಯಲಾಗಿತ್ತು.
Last Updated : Oct 17, 2020, 10:53 AM IST