ಲಖನೌ (ಉತ್ತರಪ್ರದೇಶ): ರಾಮಜನ್ಮಭೂಮಿ ವಿವಾದ ಬಗೆಹರಿದ ನಂತರ ಮೊದಲ ರಾಮನವಮಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ ಕೊರೊನಾ ಮಹಾಮಾರಿಯ ಕಾರಣದಿಂದ ಶ್ರೀರಾಮನವಮಿಯಾದ ಇಂದು ಅಯೋಧ್ಯೆಯಲ್ಲಿ ಖಾಲಿ ರಸ್ತೆಗಳು, ನಿರ್ಜನ ದೇವಾಲಯಗಳಷ್ಟೇ ಉಳಿದುಕೊಂಡಿವೆ.
ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ನಾಂದಿ ಹಾಡಿ, ಸ್ಪಷ್ಟವಾದ ಮಾರ್ಗವನ್ನು ಸೂಚಿಸಿ, ಟ್ರಸ್ಟ್ ನಿರ್ಮಾಣವನ್ನು ಕೂಡಾ ಮಾಡಿತ್ತು. ಶಿಶುರಾಮನ ಪ್ರತಿಮೆಯನ್ನು ಕೂಡಾ ರಾಮಮಂದಿರ ನಿರ್ಮಾಣದ ಸ್ಥಳವಾದ ಮಾನಸ ಭವನಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇಲ್ಲಿ ಅದ್ಧೂರಿಯಾಗಿ ಶ್ರೀರಾಮನವಮಿ ಆಚರಿಸಲು ಹಿಂದೂಪರ ಸಂಘಟನೆಗಳು ತೀರ್ಮಾನ ತೆಗೆದುಕೊಂಡಿದ್ದವು. ಈಗ ಕೊರೊನಾ ವ್ಯಾಪಿಸುತ್ತಿರುವ ಕಾರಣಕ್ಕೆ ಎಲ್ಲ ಆಚರಣೆಗಳನ್ನು ಮುಂದೂಡಲಾಗಿದೆ.
ಲಾಕ್ಡೌನ್ ಅನ್ನು ಉತ್ತರಪ್ರದೇಶದಲ್ಲಿ ತುಂಬಾ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಪ್ರತಿವರ್ಷ ನವರಾತ್ರಿ ವೇಳೆ ಆಚರಿಸಿಕೊಂಡು ಬರುತ್ತಿದ್ದ ಕನ್ಯಾ ಪೂಜೆಯನ್ನು ಕೂಡಾ ಆಚರಿಸಬಾರದೆಂದು ನಿರ್ಬಂಧ ಹೇರಲಾಗಿದೆ. ಕೊರೊನಾ ಬಾಲಕಿಯರಿಗೆ ಹೊರಗೆ ಬಂದು ಕೊರೊನಾ ಹರಡದಂತೆ ಜಾಗ್ರತೆ ವಹಿಸಬೇಕೆಂದು ಅಯೋಧ್ಯೆಯಲ್ಲಿ ಸುಮಾರು ಏಳು ದಶಕಗಳಿಂದ ಇರುವ 78 ವರ್ಷದ ರಾಮ್ ಚರಣ್ ಶ್ರೀವತ್ಸ ಹೇಳುವ ಮಾತು.