ನವದೆಹಲಿ: ರಾಜೀವ್ ಗಾಂಧಿ ಭವನದಲ್ಲಿರುವ ನಾಗರಿಕ ವಿಮಾನಯಾನ ಸಚಿವಾಲಯ (ಬಿ) ವಿಭಾಗವನ್ನು ಸೀಲ್ ಮಾಡಲಾಗಿದೆ. ನೌಕರನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಆವರಣವನ್ನು ಸ್ವಚ್ಛಗೊಳಿಸಲು ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಗೆ ಸೂಚಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಏಪ್ರಿಲ್ 15 ರಂದು ಕಚೇರಿಗೆ ಹಾಜರಾಗಿದ್ದ ಸಚಿವಾಲಯದ ಉದ್ಯೋಗಿಯೊಬ್ಬರ ಮಾದರಿ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಅವರೊಂದಿಗೆ ಸಂಪರ್ಕಕ್ಕೆ ಬಂದ ಸಹೋದ್ಯೋಗಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸೆಲ್ಫ್ ಐಸೊಲೇಷನ್ಗೆ ಒಳಗಾಗುವಂತೆ ಸಚಿವಾಲಯ ಸೂಚಿಸಿದೆ.