ನವದೆಹಲಿ:ಉದ್ಯೋಗಿಯೊಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಭವನದಲ್ಲಿರುವ ನಾಗರಿಕ ವಿಮಾನಯಾನ ಸಚಿವಾಲಯ (ಬಿ) ವಿಭಾಗವನ್ನು ಮುಚ್ಚಲಾಗಿದೆ. ಕಚೇರಿ ಆವರಣವನ್ನು ಸ್ವಚ್ಛಗೊಳಿಸಲು ನವದೆಹಲಿ ಮುನ್ಸಿಪಲ್ ಕೌನ್ಸಿಲ್ಗೆ ಸೂಚಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಉದ್ಯೋಗಿಗೆ ಕೊರೊನಾ ಸೋಂಕು.... ನಾಗರಿಕ ವಿಮಾನಯಾನ ಸಚಿವಾಲಯದ ಒಂದು ವಿಭಾಗ ಕ್ಲೋಸ್! - ಕಚೇರಿಗೆ ಹಾಜರಾಗಿದ್ದ ಉದ್ಯೋಗಿಯಲ್ಲಿ ಕೊರೊನಾ
ಕಚೇರಿಗೆ ಹಾಜರಾಗಿದ್ದ ಉದ್ಯೋಗಿಯಲ್ಲಿ ಕೊರೊನಾ ಸೋಂಕು ಕಣಿಸಿಕೊಂಡ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ ಒಂದು ವಿಭಾಗ ಮುಚ್ಚಲಾಗಿದೆ.
ಏಪ್ರಿಲ್ 15, ರಂದು ಕಚೇರಿಗೆ ಹಾಜರಾಗಿದ್ದ ಸಚಿವಾಲಯದ ಉದ್ಯೋಗಿಯೊಬ್ಬರಲ್ಲಿ ಸೋಂಕು ಇರುವುದು ಏಪ್ರಿಲ್ 21 ರಂದು ತಿಳಿದು ಬಂದಿದೆ. ಅಗತ್ಯವಿರುವ ಎಲ್ಲ ಕ್ರಮಗಳನ್ನು ಆವರಣದಲ್ಲಿ ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಂಪರ್ಕಕ್ಕೆ ಬಂದ ಎಲ್ಲ ಸಹೋದ್ಯೋಗಿಗಳನ್ನು ಸೆಲ್ಫ್ - ಕ್ವಾರಂಟೈನ್ಗೆ ಹೋಗಲು ಕೇಳಿಕೊಳ್ಳಲಾಗುತ್ತಿದೆ ಎಂದು ಸಚಿವಾಲಯ ಟ್ವೀಟ್ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ, ಸಚಿವಾಲಯವು ಆತನಿಗೆ ಸಾಧ್ಯವಿರುವ ಎಲ್ಲ ವೈದ್ಯಕೀಯ ಸಹಾಯ ಮತ್ತು ಬೆಂಬಲ ನೀಡಿದೆ ಎಂದಿದ್ದಾರೆ.