ಬೆಂಗಳೂರು: ಕುಟುಂಬ ಸದಸ್ಯರಲ್ಲಿ ಯಾರಾದ್ರೂ ಅಗಲಿದ್ರೆ ಸಂಬಂಧಿಗಳು ಯಾವ ರೀತಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುತ್ತಾರೆಯೋ, ಅದೇ ರೀತಿ ಮೂಕ ಪ್ರಾಣಿಗಳು ಸಹ ಭಾಗಿಯಾಗುತ್ತವೆ.
ಹೌದು... ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆನೆ ತನ್ನ ಮಗುವನ್ನು ಕಳೆದುಕೊಂಡಿದೆ. ಅದರ ರೋಧನೆ ಮುಗಿಲು ಮುಟ್ಟಿತ್ತು. ತಾಯಿ ಆನೆ ತನ್ನ ಮೃತ ಮಗುವನ್ನು ತನ್ನ ಸೊಂಡಲಿಯಿಂದ ಹಿಡಿದು ರಸ್ತೆ ದಾಟುತ್ತಿದ್ದ ದೃಶ್ಯ ಅಲ್ಲಿ ನೆರೆದಿದ್ದ ಜನರಲ್ಲಿ ಕಣ್ಣೀರು ತರಿಸಿತ್ತು.
ಇನ್ನು ಮೃತ ಮಗುವನ್ನು ಹೊತ್ತು ಸಾಗುತ್ತಿರುವ ತಾಯಿ ಆನೆ ಜೊತೆ ಹತ್ತಾರು ಆನೆಗಳು ಹಿಂಡು ಜೊತೆ ಸಾಗಿದವು. ಮರಿ ಆನೆಯ ಅಂತ್ಯಕ್ರಿಯೆಯಲ್ಲಿ ಆನೆಗಳ ಹಿಂಡು ಭಾಗಿಯಾಗುತ್ತಿದ್ದಂತೆ ಅಲ್ಲಿನ ದೃಶ್ಯ ಬಾಸವಾಯ್ತು . ಇನ್ನು ಆ ಮೃತ ಮರಿಯನ್ನ ತಾಯಿ ಆನೆ ಕಾಡಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಅದರ ಹಿಂದೆ ಆನೆಗಳ ಹಿಂಡು ಸಹ ಹೆಜ್ಜೆ ಹಾಕುತ್ತಲೇ ಸಾಗಿದವು.
ಇನ್ನು ಈ ಸನ್ನಿವೇಶದ ವಿಡಿಯೋ ಭಾರತೀಯ ಅರಣ್ಯ ಅಧಿಕಾರಿ ಪರ್ವಿನ್ ಕಸ್ವಾನ್ ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದರು. ಮೂರು ದಿನಗಳಲ್ಲಿ 14,000ಕ್ಕೂ ಹೆಚ್ಚು ಲೈಕ್ಸ್, 6,700ಕ್ಕೂ ಹೆಚ್ಚು ರಿಟ್ವೀಟ್ ಆಗಿದೆ. ಅಷ್ಟೇ ಏಕೆ ಈ ಟ್ವೀಟ್ಗೆ ನೂರಾರು ಭಾವನಾತ್ಮಕ ಸಂದೇಶಗಳು ಬಂದಿವೆ. ಈ ವಿಡಿಯೋ ನೋಡಿದ ನೆಟ್ಟಿಗರೆಲ್ಲ ಒಂದು ಕ್ಷಣ ಮರುಗಿದ್ದಾರೆ.