ರಾಯಗಢ(ಛತ್ತೀಸ್ಗಢ):ರಾಜ್ಯದಲ್ಲಿ ಆನೆಗಳ ಸಾವು ಮುಂದುವರೆದಿದ್ದು, ರಾಯ್ಗಢ ನಂತರ, ಈಗ ಧಮ್ತರಿಯಲ್ಲಿ ಮರಿ ಆನೆಯೊಂದು ಮರಣ ಹೊಂದಿರುವುದು ಬೆಳಕಿಗೆ ಬಂದಿದೆ.
ಮುಂದುವರಿದ ಆನೆಗಳ ಸಾವಿನ ಸರಣಿ: ಧಮ್ತರಿಯಲ್ಲಿ ಮರಿ ಆನೆ ಸಾವು - ಜೌಗು ಪ್ರದೇಶದಲ್ಲಿ ಸಿಲುಕಿ ಆನೆ ಸಾವು ನ್ಯೂಸ್
ಛತ್ತೀಸ್ಗಢದ ಧಮ್ತರಿ ಅರಣ್ಯ ವ್ಯಾಪ್ತಿಯಲ್ಲಿ ಜೌಗು ಪ್ರದೇಶದಲ್ಲಿ ಸಿಲುಕಿಕೊಂಡು ಮೇಲೇಳಲಾಗದೇ ಆನೆಮರಿಯೊಂದು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಮರಿ ಆನೆ ಸಾವು
ಜೌಗು ಪ್ರದೇಶದಲ್ಲಿ ಸಿಲುಕಿಕೊಂಡು ಮೇಲೇಳಲಾಗದೇ ಆನೆಮರಿಯೊಂದು ಸಾವನ್ನಪ್ಪಿದೆ. ಉರರ್ಪುಟ್ಟಿ ಗ್ರಾಮದ ಅರಣ್ಯದಲ್ಲಿ ಈ ಘಟನೆ ನಡೆದಿದೆ. ಘಟನೆ ಕುರಿತು ಮಾಹಿತಿ ಪಡೆದ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ.
ಸುಮಾರು 21 ಆನೆಗಳ ತಂಡವು ಗರಿಯಾಬಂದ್ ಜಿಲ್ಲೆಯಿಂದ ಧಮ್ತಾರಿವರೆಗೆ ಸಂಚಾರ ನಡೆಸುತ್ತಿದ್ದು, ಒಂದು ವಾರದಿಂದ ಈ ಆನೆಗಳ ಗುಂಪು ಧಮ್ತರಿ ಕಾಡುಗಳಲ್ಲಿ ಓಡಾಡುತ್ತಿದೆ. ಈ ಗುಂಪಿನಲ್ಲಿದ್ದ ಮರಿ ಆನೆಯೊಂದು ಈಗ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.