ನವದೆಹಲಿ:ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಇದರ ಮಧ್ಯೆ ಮುಂಬರುವ ಕೆಲವೊಂದು ಎಲೆಕ್ಷನ್ಗಳಿಗಾಗಿ ಕೇಂದ್ರ ಚುನಾವಣಾ ಆಯೋಗ ಮಾರ್ಗಸೂಚಿ ರಿಲೀಸ್ ಮಾಡಿದೆ.
ಕೊರೊನಾ ವೈರಸ್ ಸಮಯದಲ್ಲೇ ಬಿಹಾರ ಚುನಾವಣೆ, ಕೆಲ ರಾಜ್ಯಗಳಲ್ಲಿ ಉಪಚುನಾವಣೆ ನಡೆಯುತ್ತಿರುವ ಕಾರಣ ಚುನಾವಣಾ ಆಯೋಗ ಸ್ಟಾರ್ ಪ್ರಚಾರಕರಕ್ಕಾಗಿ ಕೆಲವೊಂದು ಮಾನದಂಡ ರಿಲೀಸ್ ಮಾಡಿದೆ.
ಮಾನ್ಯತೆ ಪಡೆದುಕೊಂಡಿರುವ ರಾಷ್ಟ್ರೀಯ / ರಾಜ್ಯ ಪಕ್ಷಗಳಿಗೆ ಗರಿಷ್ಠ 30 ಸ್ಟಾರ್ ಪ್ರಚಾರಕರು ಹಾಗೂ ಗುರುತಿಸಲಾಗದ ನೋಂದಾಯಿತ ರಾಜಕೀಯ ಪಕ್ಷಗಳಿಗೆ 15 ಸ್ಟಾರ್ ಪ್ರಚಾರಕರ ಬಳಕೆಗೆ ಅನುಮತಿ ನೀಡಿದೆ. ಇದರ ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನ್, ಕೈಗವಸು ಮುಂತಾದ ಅಗತ್ಯ ಸಲಕರಣೆಗಳನ್ನು ಆಯೋಗವೇ ಮತದಾರರಿಗೆ ಮತ್ತು ಸಿಬ್ಬಂದಿಗೆ ನೀಡಲಿದೆ.
ಈ ಮೊದಲು ಮಾನ್ಯತೆ ಪಡೆದ ರಾಷ್ಟ್ರೀಯ / ರಾಜ್ಯ ರಾಜಕೀಯ ಪಕ್ಷಗಳಿಗೆ 40 ಸ್ಟಾರ್ ಪ್ರಚಾರಕರಿಗೆ ಅವಕಾಶ ನೀಡಿದ್ದರೆ, 20 ಮಂದಿಯನ್ನು ಗುರುತಿಸಲಾಗದ ನೋಂದಾಯಿತ ರಾಜಕೀಯ ಪಕ್ಷಗಳಿಗೆ ಅನುಮತಿಸಲಾಗಿತ್ತು.