ಭೋಪಾಲ್(ಮಧ್ಯಪ್ರದೇಶ):ಕಾಂಗ್ರೆಸ್ ಹಿರಿಯ ನಾಯಕ ಕಮಲ್ನಾಥ್ ಬಿಜೆಪಿ ಮಹಿಳಾ ಮುಖಂಡೆ ಕುರಿತು ಅವಾಚ್ಯ ಪದ ಬಳಕೆ ಮಾಡಿದ್ದು, ಇದೇ ವಿಚಾರವಾಗಿ ಇದೀಗ ಚುನಾವಣಾ ಆಯೋಗ ಇದೀಗ ನೋಟಿಸ್ ಜಾರಿ ಮಾಡಿದೆ.
ಕಳೆದ ಭಾನುವಾರ ಗ್ವಾಲಿಯರ್ನ ದಾಬ್ರಾದಲ್ಲಿ ನಡೆದ ಪಕ್ಷದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ್ದ ಕಮಲ್ನಾಥ್, ಬಿಜೆಪಿ ಸಚಿವೆ ಇಮಾರ್ತಿ ದೇವಿ ವಿರುದ್ಧ ಅವಾಚ್ಯವಾಗಿ ಪದ ಬಳಿಕೆ ಮಾಡಿದ್ದರು. ಈ ಮೂಲಕ ತಮ್ಮ ಮೇಲೆ ವಿವಾದ ಎಳೆದುಕೊಂಡಿದ್ದರು. ಈ ಹೇಳಿಕೆಗೆ ಮಧ್ಯಪ್ರದೇಶ ಮಾಜಿ ಸಿಎಂ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ನಾಲಿಗೆ ಹರಿಬಿಟ್ಟಿದ್ದಕ್ಕೆ ಭಾರಿ ವಿರೋಧ.. ಇಕ್ಕಟ್ಟಿಗೆ ಸಿಲುಕಿದ ಮಧ್ಯಪ್ರದೇಶದ ಮಾಜಿ ಸಿಎಂ
ಇದೀಗ ಕೇಂದ್ರ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದ್ದು, ಮುಂದಿನ 48 ಗಂಟೆಯಲ್ಲಿ ತಾವು ನೀಡಿರುವ ಹೇಳಿಕೆಗೆ ತಮ್ಮ ನಿಲುವನ್ನ ತಿಳಿಸುವಂತೆ ಸೂಚನೆ ನೀಡಿದೆ.
ಇದೇ ವಿಚಾರವಾಗಿ ಮಾತನಾಡಿದ್ದ ರಾಹುಲ್ ಗಾಂಧಿ ಕೂಡ ಕಮಲ್ನಾಥ್ ವಿರುದ್ಧ ವಾಗ್ದಾಳಿ ನಡೆಸಿತ್ತು. ಇದಾದ ಬಳಿಕ ಸ್ಪಷ್ಟನೆ ನೀಡಿದ್ದ ಕಮಲ್ನಾಥ್ ನಾನು ಯಾವ ಸಂದರ್ಭದಲ್ಲಿ ಆ ಪದ ಬಳಕೆ ಮಾಡಿದ್ದೇನೆ ಎಂಬುದನ್ನ ಸ್ಪಷ್ಟಪಡಿಸಿದ್ದೇನೆ. ಯಾವುದೇ ಕಾರಣಕ್ಕೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದಿದೆ.