ಕರ್ನಾಟಕ

karnataka

ETV Bharat / bharat

ಅಂಚೆ ಮತಪತ್ರ ಪ್ರಕ್ರಿಯೆಗೆ ಹೊಸ ಸೂಚನೆಗಳನ್ನು ನೀಡಿದ ಚುನಾವಣಾ ಆಯೋಗ - ಭಾರತೀಯ ಚುನಾವಣಾ ಆಯೋಗ

ಕಳೆದ ವಾರ ಚುನಾವಣಾ ಆಯೋಗ ಬಿಹಾರಕ್ಕೆ ಭೇಟಿ ನೀಡಿದಾಗ ನಾಗರಿಕ ಸಮಾಜ ಮತ್ತು ಮಾಧ್ಯಮಗಳಿಂದ ಪಡೆದ ಸಮೀಕ್ಷಾ ಸಮಿತಿಯ ಪ್ರತಿಕ್ರಿಯೆಯ ಆಧಾರದ ಮೇಲೆ ಅಂಚೆ ಮತದಾನ ಪ್ರಕ್ರಿಯೆಗೆ ಭಾರತದ ಚುನಾವಣಾ ಆಯೋಗ ಹೊಸ ಸೂಚನೆಗಳನ್ನು ನೀಡಿದೆ.

election commission
election commission

By

Published : Oct 6, 2020, 1:16 PM IST

ನವದೆಹಲಿ:ವಿಶೇಷ ಚೇತನರಿಗೆ ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಂಚೆ ಮತಪತ್ರವನ್ನು ಹೆಚ್ಚು ಅನುಕೂಲಕರವಾಗಿಸುವಂತಹ ಹೊಸ ಸೂಚನೆಗಳನ್ನು ಭಾರತದ ಚುನಾವಣಾ ಆಯೋಗ ಹೊರಡಿಸಿದೆ.

"ಅವರು ಅಂಚೆ ಮತಪತ್ರವನ್ನು ಆರಿಸಿದರೆ, ಭರ್ತಿ ಮಾಡಿದ 12-ಡಿ ಫಾರ್ಮನ್ನು ಅಧಿಸೂಚನೆಯ ಐದು ದಿನಗಳಲ್ಲಿ ಬಿಎಲ್‌ಒ ಮತದಾರರ ಮನೆಯಿಂದ ಸಂಗ್ರಹಿಸಿ ಅದನ್ನು ಜಮಾ ಮಾಡುತ್ತಾರೆ" ಎಂದು ಎಲ್ಲಾ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಚುನಾವಣಾ ಆಯೋಗ ಪತ್ರ ಕಳುಹಿಸಿದೆ.

ಕಳೆದ ವಾರ ಚುನಾವಣಾ ಆಯೋಗ ಬಿಹಾರಕ್ಕೆ ಭೇಟಿ ನೀಡಿದಾಗ ನಾಗರಿಕ ಸಮಾಜ ಮತ್ತು ಮಾಧ್ಯಮಗಳಿಂದ ಪಡೆದ ಸಮೀಕ್ಷಾ ಸಮಿತಿಯ ಪ್ರತಿಕ್ರಿಯೆಯ ಆಧಾರದ ಮೇಲೆ ಈ ಸೂಚನೆಗಳನ್ನು ನೀಡಲಾಗಿದೆ.

"ಮತದಾರನು 12-ಡಿ ಫಾರ್ಮ್‌ನೊಂದಿಗೆ ಲಗತ್ತಿಸಲಾದ ಸ್ವೀಕೃತಿಯಲ್ಲಿ ಅಂಚೆ ಮತಪತ್ರವನ್ನು ಆರಿಸಿಕೊಳ್ಳಬಹುದು ಅಥವಾ ಆಯ್ಕೆ ಮಾಡದಿರಬಹುದು. ಒಂದು ವೇಳೆ ಮತದಾರನು ಅಂಚೆ ಮತಪತ್ರ ಆಯ್ಕೆ ಮಾಡಿದರೆ, ಭರ್ತಿ ಮಾಡಿದ ಫಾರ್ಮ್ 12-ಡಿ ಅನ್ನು ಅಧಿಸೂಚನೆಯ ಐದು ದಿನಗಳ ಒಳಗೆ ಬಿಎಲ್‌ಒ ಮತದಾರರಿಂದ ಸಂಗ್ರಹಿಸುತ್ತದೆ ಮತ್ತು ಅದನ್ನು ರಿಟರ್ನಿಂಗ್ ಆಫೀಸರ್​ಗೆ (ಆರ್‌ಒ) ಜಮಾ ಮಾಡಲಾಗುತ್ತದೆ. ಹೀಗಾಗಿ ರಿಟರ್ನಿಂಗ್ ಆಫೀಸರ್ ತಂಡವನ್ನು ನಿಯೋಜಿಸಲಿದ್ದು, ತಂಡದವರು ಅಂಚೆ ಮತಪತ್ರವನ್ನು ಸಂಗ್ರಹಿಸಿ ಅದನ್ನು ಆರ್‌ಒಗೆ ಜಮಾ ಮಾಡುತ್ತಾರೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಹೊಸ ವ್ಯವಸ್ಥೆಯಡಿಯಲ್ಲಿ ಈ ಸೌಲಭ್ಯವನ್ನು ಬಳಸಲು ಇಚ್ಛಿಸುವವರು ಒಂದು ಫಾರ್ಮ್ ಭರ್ತಿ ಮಾಡಬೇಕು. ಬಳಿಕ ಅಧಿಕಾರಿಗಳು ಮತಪತ್ರವನ್ನು ಅಂತಹ ಮತದಾರರ ನಿವಾಸಕ್ಕೆ ಕೊಂಡೊಯ್ಯುತ್ತಾರೆ ಮತ್ತು ಪಾರದರ್ಶಕತೆಗಾಗಿ ಮತದಾನದ ವಿಡಿಯೋ ಮಾಡುತ್ತಾರೆ.

ABOUT THE AUTHOR

...view details