ಕರ್ನಾಟಕ

karnataka

ETV Bharat / bharat

ಝಣ ಝಣ ಕಾಂಚಾಣ: ಲೋಕ ಸಮರದಲ್ಲಿ ಬರೋಬ್ಬರಿ 399.505 ಕೋಟಿ ರೂ ಸೇರಿ ಏನೆಲ್ಲ ವಶಕ್ಕೆ!? - ಹಣ

ದೇಶಾದ್ಯಂತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿದೆ. ಇಲ್ಲಿಯವರೆಗೆ ಚುನಾವಣಾ ಆಯೋಗ ಬರೋಬ್ಬರಿ 399.505 ಕೋಟಿ ರೂ. ನಗದು ವಶಕ್ಕೆ ಪಡೆದುಕೊಂಡಿದ್ದಾಗಿ ಹೇಳಿದೆ

ಸಂಗ್ರಹ ಚಿತ್ರ

By

Published : Apr 4, 2019, 7:48 PM IST

ನವದೆಹಲಿ:ಲೋಕಸಭಾ ಚುನಾವಣೆ ರಂಗೇರಿದೆ. ಈಗಾಗಲೇ ಎಲ್ಲ ಪಕ್ಷ ಅಬ್ಬರದ ಪ್ರಚಾರ ನಡೆಸುತ್ತಿದ್ದು, ಹೇಗಾದರೂ ಮಾಡಿ ಗೆಲುವು ಸಾಧಿಸಿಕೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿವೆ. ಅದಕ್ಕಾಗಿ ತಮ್ಮ ಕೈಲಾದಷ್ಟು ಹಣದ ಹೊಳೆ ಕೂಡ ಹರಿಸುತ್ತಿವೆ.

ಇನ್ನು ದೇಶದಲ್ಲಿ ನಿಷ್ಪಕ್ಷಪಾತ ವೋಟಿಂಗ್ ನಡೆಸಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ. ತಮಗೆ ಸಂಶಯ ವ್ಯಕ್ತವಾಗುವ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಇಲ್ಲಿಯವರೆ ಬರೋಬ್ಬರಿ 399.505 ಕೋಟಿ ನಗದು ವಶಕ್ಕೆ ಪಡೆದುಕೊಂಡಿದೆ. ಇದರ ಜತೆಗೆ 162.892 ಕೋಟಿ ಮೌಲ್ಯದ ಮದ್ಯ, 708.549 ಕೋಟಿ ಮೌಲ್ಯದ ಡ್ರಗ್ಸ್​ ಹಾಗೂ 318.495 ಕೋಟಿ ಮೌಲ್ಯದ ಲೋಹದ ವಸ್ತು, ಜತೆಗೆ 29.342 ಕೋಟಿ ರೂ ಮೌಲ್ಯದ ಇತರೆ ವಸ್ತುಗಳನ್ನ ವಶಕ್ಕೆ ಪಡೆದುಕೊಂಡಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

ಪ್ರಮುಖವಾಗಿ ತಮಿಳುನಾಡಿನಲ್ಲಿ ಕಳೆದೆರಡು ದಿನಗಳ ಹಿಂದೆ ಚುನಾವಣಾ ಆಯೋಗ ಒಂದೇ ವೇಳೆಗೆ 10 ಕೋಟಿ ರೂ. ತದನಂತರ 4ಕೋಟಿ ರೂ ವಶಪಡಿಸಿಕೊಂಡಿದೆ.

ABOUT THE AUTHOR

...view details