ಉನ್ನಾವೊ(ಉತ್ತರ ಪ್ರದೇಶ):ಕುಡಿದು ಗ್ರಾಮಸ್ಥರು ಮತ್ತು ಕುಟುಂಕ್ಕೆ ತೊಂದರೆ ಕೊಡುತ್ತಾನೆ ಎಂದು ಪೊಲೀಸರಿಗೆ ತಿಳಿಸಿದ್ದಕ್ಕೆ ರೊಚ್ಚಿಗೆದ್ದ ತಮ್ಮ ಅಣ್ಣನನ್ನೇ ಕೊಲೆ ಮಾಡಿರುವ ಘಟನೆ ಉನ್ನಾವೋ ಜಿಲ್ಲೆಯ ಜವಾನ್ ಗ್ರಾಮದಲ್ಲಿ ನಡೆದಿದೆ.
ದಲ್ಗಂಜನ್ ಸಿಂಗ್ ಮೃತ ವ್ಯಕ್ತಿ. ಕಿರಿಯ ಸಹೋದರ ರಾಕೇಶ್ ಸಿಂಗ್ ಕುಡಿದು ಬಂದು ಗ್ರಾಮಸ್ಥರನ್ನೆಲ್ಲ ನಿಂದಿಸುತ್ತಿದ್ದ. ಅಲ್ಲದೆ ದಲ್ಗಂಜನ್ ಸಿಂಗ್ ಕುಟುಂಬಕ್ಕೂ ಸಾಕಷ್ಟು ತೊಂದರೆ ನೀಡಿದ್ದಾನೆ. ಇದರಿಂದ ಬೇಸತ್ತ ಅಣ್ಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಎಚ್ಚರಿಕೆ ನೀಡಿದ ನಂತರ ರಾಕೇಶ್ ಸಿಂಗ್ನನ್ನು ಬಿಟ್ಟು ಕಳುಹಿಸಿದ್ದಾರೆ.