ದೆಹಲಿ: ಶಿಕ್ಷಣ ಸಚಿವಾಲಯವು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) ಉಪಕ್ರಮದಡಿ ಏಕಲವ್ಯ ಎಂಬ ಆನ್ಲೈನ್ ಕೋರ್ಸ್ ಪ್ರಾರಂಭಿಸಿದೆ. ಈ ಮೂಲಕ ದ್ವಿತೀಯ ಮತ್ತು ಸೀನಿಯರ್ ಸೆಕೆಂಡರಿ ವಿದ್ಯಾರ್ಥಿಗಳಿಗೆ ಓಪನ್ ಆನ್ಲೈನ್ ಕೋರ್ಸ್ಗಳತ್ತ ಉತ್ತೇಜಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಡಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ 1989 ರ ನವೆಂಬರ್ನಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಅನ್ನು ಆರಂಭಿಸಿತು.
ಏಕಲವ್ಯ ದ್ವಿತೀಯ ಮತ್ತು ಹಿರಿಯ ಮಾಧ್ಯಮಿಕ ಮಟ್ಟದಲ್ಲಿ ಸಾಮಾನ್ಯ ಮತ್ತು ಶೈಕ್ಷಣಿಕ ಕೋರ್ಸ್‌ಗಳಲ್ಲದೆ ಸಮುದಾಯ ಆಧಾರಿತ ಮತ್ತು ವೃತ್ತಿಪರ ಶಿಕ್ಷಣವನ್ನು ನೀಡಲಿದೆ. ‘ಏಕಲವ್ಯ’ ತನ್ನ ಮೂಲ ಶಿಕ್ಷಣ ಕಾರ್ಯಕ್ರಮಗಳ (ಒಬಿಇ) ಮೂಲಕ ಪ್ರಾಥಮಿಕ ಹಂತದ ಕೋರ್ಸ್‌ಗಳನ್ನು ಸಹ ನೀಡುತ್ತದೆ.