ಬೆಮೆತಾರಾ(ಛತ್ತೀಸ್ಗಢ):ಭೀಕರ ರಸ್ತೆ ಅಪಘಾತವೊಂದರಲ್ಲಿ ಒಂದೇ ಕುಟುಂಬದ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದ ಬೆಮೆತಾರಾದಲ್ಲಿ ನಡೆದಿದೆ. ಇದರಲ್ಲಿ ನಾಲ್ವರು ಮಹಿಳೆಯರು ಸೇರಿದ್ದಾರೆ.
ಭೀಕರ ರಸ್ತೆ ಅಪಘಾತ: ನಾಲ್ವರು ಮಹಿಳೆಯರು, ಓರ್ವ ಮಗು ಸೇರಿ ಒಂದೇ ಕುಟುಂಬದ ಎಂಟು ಮಂದಿ ಸಾವು - ಛತ್ತೀಸ್ಗಢದಲ್ಲಿ ಎಂಟು ಮಂದಿ ಸಾವು
ಭೀಕರ ರಸ್ತೆ ಅಪಘಾತವೊಂದರಲ್ಲಿ ಒಂದೇ ಕುಟುಂಬದ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದ ಬೆಮೆತಾರಾದಲ್ಲಿ ನಡೆದಿದೆ.
ಗುರುವಾರ ತಡರಾತ್ರಿ ಬೆಮೆತಾರಾ ರೋಡ್ನಲ್ಲಿ ಚಲಿಸುತ್ತಿದ್ದ ಕಾರು ಏಕಾಎಕಿಯಾಗಿ ನಿಯಂತ್ರಣ ಕಳೆದುಕೊಂಡು ನೀರಿನ ಕೊಳಕ್ಕೆ ಬಿದ್ದಿದೆ. ಪರಿಣಾಮ ಸ್ಥಳದಲ್ಲೇ ಎಂಟು ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಆರು ತಿಂಗಳ ಬಾಲಕಿ ಸಹ ಸೇರಿಕೊಂಡಿದ್ದಾಳೆ.
ಪ್ರತ್ಯಕ್ಷದರ್ಶಿಗಳು ತಿಳಿಸಿರುವ ಪ್ರಕಾರ, ಕಾರು ಬಾಬಾ ಮಹ್ತ್ರಾದಿಂದ ಬೆಮೆತಾರಾ ಕಡೆ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡು ಏಕಾಏಕಿಯಾಗಿ ನೀರಿನ ಕೊಳಕ್ಕೆ ಬಿದ್ದಿದೆ. ಎಲ್ಲರೂ ಅದರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಜೆಸಿಬಿ ಸಹಾಯದಿಂದ ಕಾರು ಹೊರತೆಗೆಯಲಾಗಿದ್ದು, ಎಲ್ಲರ ಮೃತದೇಹ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.