ರಿಷಿಕೇಶ (ಉತ್ತರಾಖಾಂಡ್): ರಾಜಾಜಿ ಹುಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಎಂಟು ಕ್ಯಾಮೆರಾಗಳು ಕಳ್ಳತನವಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜಾಜಿ ಹುಲಿ ಮೀಸಲು ಅರಣ್ಯ ಪ್ರದೇಶದಲ್ಲಿ 8 ಕ್ಯಾಮೆರಾ ಕಳವು - camera
ಮೇ ಮೊದಲ ವಾರದಲ್ಲಿ ರಾಜಾಜಿ ಹುಲಿ ಮೀಸಲು ಅರಣ್ಯ ಪ್ರದೇಶದಲ್ಲಿ 8 ಕ್ಯಾಮೆರಾಗಳು ಕಳ್ಳತನವಾಗಿವೆ.
![ರಾಜಾಜಿ ಹುಲಿ ಮೀಸಲು ಅರಣ್ಯ ಪ್ರದೇಶದಲ್ಲಿ 8 ಕ್ಯಾಮೆರಾ ಕಳವು Eight cameras stolen from Rajaji Tiger Reserve: Official](https://etvbharatimages.akamaized.net/etvbharat/prod-images/768-512-7333845-435-7333845-1590344090561.jpg)
ರಾಜಾಜಿ ಹುಲಿ ಮೀಸಲು ಪ್ರದೇಶ
ಬರಿವಾಡ, ಸುಸ್ವ, ರಾಮಗಡ್ ಶ್ರೇಣಿ, ಗಂಗಾ ಮಜ್ಹಾರ, ಮೋತಿಚೋರ್ ಶ್ರೇಣಿ ಮತ್ತು ಹರಿದ್ವಾರ ಶ್ರೇಣಿ ಪ್ರದೇಶದಲ್ಲಿ ಕಳವು ಮಾಡಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಆರ್‌ಟಿಆರ್ ವಾರ್ಡನ್ ಕೋಮಲ್ ಸಿಂಗ್ ಹೇಳಿದ್ದಾರೆ.
ಮೇ ಮೊದಲ ವಾರದಲ್ಲಿ ಮೀಸಲು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕಳ್ಳರು ಕಾನೂನುಬಾಹಿರ ಚಟುವಟಿಕೆ ನಡೆಸಲು ಈ ಕೃತ್ಯ ನಡೆಸಿದ್ದಾರೆ ಎಂದು ಅವರು ಶಂಕಿಸಿದ್ದಾರೆ.