ಪುಣೆ:ಟೀಂ ಇಂಡಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ದಕ್ಷಿಣ ಆಫ್ರಿಕಾದ ಅಗ್ರ ಕ್ರಮಾಂಕದ ಬ್ಯಾಟ್ಸಮನ್ಗಳು ವೈಫಲ್ಯ ಅನುಭವಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹರಿಣಗಳ ತಂಡದ ಬ್ಯಾಟ್ಸ್ಮನ್ ಮಾತನಾಡಿದ್ದಾರೆ.
ಟೀಂ ಇಂಡಿಯಾದ 601ರನ್ಗಳಿಗೆ ಉತ್ತರ ನೀಡಲು ಮುಂದಾದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ನಲ್ಲಿ 168ರನ್ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ 8ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇನ್ನೇನು ಉಳಿದೆರಡು ವಿಕೆಟ್ಗಳನ್ನ 200ರ ಗಡಿಯೊಳಗೆ ಟೀಂ ಇಂಡಿಯಾ ಆಲೌಟ್ ಮಾಡಲಿದೆ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಆದರೆ ಈ ವೇಳೆ 9ನೇ ವಿಕೆಟ್ಗೆ ಒಂದಾದ ಫಿಲ್ಯಾಂಡರ್ ಹಾಗೂ ಕೇಶವ್ ಮಹಾರಾಜ್ ತಂಡಕ್ಕೆ ಯಾರೋ ಊಹೆ ಮಾಡದ ರೀತಿಯಲ್ಲಿ ಚೇತರಿಕೆ ನೀಡಿದ್ರು. ಈ ಜೋಡಿ ಬರೋಬ್ಬರಿ 109 ರನ್ಗಳ ಜೊತೆಯಾಟ ನೀಡಿದರು. ಫಿಲ್ಯಾಂಡರ್ 44ರನ್ಗಳಿಕೆ ಮಾಡಿದರೆ, ಮಹಾರಾಜ್ 72ರನ್ಗಳಿಕೆ ಮಾಡಿದರು. ಹೀಗಾಗಿ ತಂಡ 275ರನ್ಗಳಿಕೆ ಮಾಡುತ್ತದೆ. ಈ ಜೋಡಿ ವಿಕೆಟ್ ಪಡೆದುಕೊಳ್ಳಲು ಟೀಂ ಇಂಡಿಯಾ ಬೌಲರ್ಗಳು ಹರಸಾಹಸ ಪಡುತ್ತಾರೆ. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹರಿಣಗಳ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ತೆಂಬಾ ಬಾವುಮಾ ಮಾತನಾಡಿದ್ದಾರೆ.