ಕರ್ನಾಟಕ

karnataka

ETV Bharat / bharat

ತಾರ್ನಕಾದ ಇಫ್ಲೂ ಸಹಾಯಕ ಪ್ರಾಧ್ಯಾಪಕ ನೇಣಿಗೆ ಶರಣು! - HYDERABAD

ಕಳೆದ ಎರಡು ದಿನಗಳಿಂದ ಪ್ರಾಧ್ಯಾಪಕರು ಯಾರ ಕಣ್ಣಿಗೂ ಬಿದ್ದಿಲ್ಲ, ಅಲ್ಲದೇ ಅವರ ಫ್ಲ್ಯಾಟ್‌ನಿಂದ ದುರ್ವಾಸನೆ ಬರುತ್ತಿದೆ, ಎಂದು ಸಹಾಯಕ ಪ್ರಾಧ್ಯಾಪಕರ ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.

EFLU PROFESSOR
ಇಫ್ಲೂ ಸಹಾಯಕ ಪ್ರಾಧ್ಯಾಪಕ

By

Published : Jul 23, 2020, 8:41 AM IST

ಹೈದರಾಬಾದ್(ತೆಲಂಗಾಣ):​ ತಾರ್ನಕಾದ ಇಫ್ಲೂ (EFLU )(ಇಂಗ್ಲಿಷ್ ಮತ್ತು ವಿದೇಶಿ ಭಾಷಾ ವಿಶ್ವವಿದ್ಯಾಲಯ)ದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ತಾರ್ನಕಾದಲ್ಲಿರುವ ಅವರ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಹುಲ್ ಬಲುಸು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಾಧ್ಯಾಪಕ. ಕಳೆದ ಎರಡು ದಿನಗಳಿಂದ ಪ್ರಾಧ್ಯಾಪಕರು ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಅಲ್ಲದೇ ಅವರ ಫ್ಲ್ಯಾಟ್‌ನಿಂದ ದುರ್ವಾಸನೆ ಬರುತ್ತಿತ್ತು ಎಂದು ಸಹಾಯಕ ಪ್ರಾಧ್ಯಾಪಕರ ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾಗಿ ಉಸ್ಮಾನಿಯಾ ವಿಶ್ವವಿದ್ಯಾಲಯದ ಪೊಲೀಸರು ತಿಳಿಸಿದ್ದಾರೆ.

ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಒಳಗಿನಿಂದ ಬೀಗ ಹಾಕಲಾಗಿದ್ದ ಬಾಗಿಲನ್ನು ಮುರಿದಾಗ ರಾಹುಲ್ ಸೀಲಿಂಗ್ ಫ್ಯಾನ್‌ಗೆ ಕಟ್ಟಿದ ಹಗ್ಗದಿಂದ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು.

ಪ್ರಾಥಮಿಕ ವಿಚಾರಣೆ ಪ್ರಕಾರ ಮೃತ ಪ್ರಾಧ್ಯಾಪಕ ಬಲುಸು ವಿಜಯವಾಡ ಮೂಲದವರಾಗಿದ್ದು, ಅವರು 2003 ರಲ್ಲಿ ಪ್ರೇಮ ವಿವಾಹ ಆಗಿದ್ದರು. ಆದರೆ, 2008 ರಲ್ಲಿ ತಮ್ಮ ಹೆಂಡತಿಯಿಂದ ಬೇರ್ಪಟ್ಟು ಪ್ರಸ್ತುತ ಏಕಾಂಗಿ ಜೀವನ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಕಾಗದದ ಮೇಲೆ ಎರಡು ಫೋನ್ ನಂಬರ್​ಗಳನ್ನು ಬರೆದಿಟ್ಟಿದ್ದಾರೆ. ಖಿನ್ನತೆಯು ಅವರನ್ನು ಆತ್ಮಹತ್ಯೆಗೆ ದೂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ABOUT THE AUTHOR

...view details