ಕರ್ನಾಟಕ

karnataka

ETV Bharat / bharat

ಹೆಚ್ಚುತ್ತಿರುವ ಹವಾಮಾನ ವೈಪರೀತ್ಯ.. ಭಾರತದ ಬಗ್ಗೆ ಆಘಾತಕಾರಿ ಅಂಕಿ-ಅಂಶ ಬಿಡುಗಡೆ.. - ಭಾರತದ ಬಗ್ಗೆ ಆಘಾತಕಾರಿ ಅಂಕಿ ಅಂಶ ಬಿಡುಗಡೆ

2050ರ ವೇಳೆಗೆ ಉಪ-ಸಹಾರನ್ ಆಫ್ರಿಕಾ, ದಕ್ಷಿಣ ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಮಾತ್ರ 14 ಕೋಟಿ ಹವಾಮಾನ ನಿರಾಶ್ರಿತರು ಇರುತ್ತಾರೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ. ಏರುತ್ತಿರುವ ಇಂಗಾಲದ ಹೊರಸೂಸುವಿಕೆ ಈಗಾಗಲೇ ನೀರಿನ ಮಾಲಿನ್ಯ, ಸಾಂಕ್ರಾಮಿಕ ರೋಗಗಳು, ಆಹಾರದ ಕೊರತೆ ಮತ್ತು ಅಭೂತಪೂರ್ವ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗಿದೆ.

EFFECTS OF CLIMATE CHANGE
ಹೆಚ್ಚುತ್ತಿರುವ ಹವಾಮಾನ ವೈಪರಿತ್ಯ

By

Published : Jun 8, 2020, 9:46 PM IST

ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ಭಾರತದ ಹವಾಮಾನ ವೈಪರಿತ್ಯದ ಬಗ್ಗೆ ಆಘಾತಕಾರಿ ಅಂಕಿ ಅಂಶಗಳನ್ನು ಬಹಿರಂಗಪಡಿಸಿದೆ. ಪ್ರವಾಹ, ಚಂಡಮಾರುತಗಳು ಅಥವಾ ಬರಗಾಲದಿಂದ ಉಂಟಾಗುವ ಪ್ರತಿ ಐದು ಪರಿಸರ ವಿಕೋಪಗಳಲ್ಲಿ ಒಂದು ಭಾರತದಲ್ಲಿ ಸಂಭವಿಸಿದೆ. ಭಾರತದಲ್ಲಿ ಈವರೆಗೆ 50 ಲಕ್ಷ ಹವಾಮಾನ ವೈಪರಿತ್ಯದ ಪ್ರಕರಣ ದಾಖಲಾಗಿವೆ. 2019 ರಲ್ಲಿ ನೈಸರ್ಗಿಕ ವಿಕೋಪದಲ್ಲಿ 1,357 ಜನ ಸಾವನ್ನಪ್ಪಿದ್ದಾರೆ. ನಿಸರ್ಗ ಚಂಡಮಾರುತವು ಭಾರತದ ಪಶ್ಚಿಮ ಕರಾವಳಿಯನ್ನು ಸಂಕಷ್ಟಕ್ಕೆ ದೂಡಿದೆ. ಆದರೆ, ಸೂಪರ್ ಸೈಕ್ಲೋನಿಕ್ ಸ್ಟಾರ್ಮ್ ಅಂಫಾನ್ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಅಪಾರ ಹಾನಿಯುಂಟು ಮಾಡಿದೆ.

1990 ಮತ್ತು 2016ರ ನಡುವೆ ಭಾರತವು ಕಡಲ ಕೊರೆತಕ್ಕೆ 235 ಚದರ ಕಿಲೋಮೀಟರ್ ಭೂಮಿ ಕಳೆದುಕೊಂಡಿತು. ಸಿಎಸ್ಇ ನಡೆಸಿದ ಅಧ್ಯಯನವು ಭಾರತದ ಹವಾಮಾನ ದುರಂತಗಳಿಗೆ ಕಾರಣ, ಜಾಗತಿಕ ತಾಪಮಾನ ಏರಿಕೆ ಮತ್ತು ಆವಾಸ ಸ್ಥಾನಗಳ ನಾಶ ಎಂದು ಹೇಳಿದೆ. ಅಧ್ಯಯನವು ದೇಶದಲ್ಲಿ ಅರಣ್ಯನಾಶದ ಅಪಾಯಕಾರಿ ದರಗಳನ್ನು ಸಹ ಉಲ್ಲೇಖಿಸಿದೆ. ದೇಶಾದ್ಯಂತ 280 ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶಗಳ ನಾಶ ಮತ್ತು 5 ಪ್ರಮುಖ ನದಿ ಜಲಾನಯನ ಪ್ರದೇಶಗಳಲ್ಲಿ ತೀವ್ರ ನೀರಿನ ಬಿಕ್ಕಟ್ಟು ಎಚ್ಚರಿಕೆಯ ಗಂಟೆಗಳು ಎಂದು ತಿಳಿಸಿದೆ.

2050ರ ವೇಳೆಗೆ ಉಪ-ಸಹಾರನ್ ಆಫ್ರಿಕಾ, ದಕ್ಷಿಣ ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಮಾತ್ರ 14 ಕೋಟಿ ಹವಾಮಾನ ನಿರಾಶ್ರಿತರು ಇರುತ್ತಾರೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ. ಏರುತ್ತಿರುವ ಇಂಗಾಲದ ಹೊರಸೂಸುವಿಕೆ ಈಗಾಗಲೇ ನೀರಿನ ಮಾಲಿನ್ಯ, ಸಾಂಕ್ರಾಮಿಕ ರೋಗಗಳು, ಆಹಾರದ ಕೊರತೆ ಮತ್ತು ಅಭೂತಪೂರ್ವ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗಿದೆ. ಪ್ರವಾಹ ಅಥವಾ ಚಂಡಮಾರುತದ ಪ್ರತಿ ಘಟನೆಯಲ್ಲೂ ಭಾರತದ ಕರಾವಳಿ ಮತ್ತು ಹಿನ್ನೀರಿನ ಪ್ರದೇಶಗಳಲ್ಲಿ ವಾಸಿಸುವ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿ ವರ್ಷ 17 ಕೋಟಿ ಭಾರತೀಯರು ನೈಸರ್ಗಿಕ ವಿಕೋಪ ಎದುರಿಸುತ್ತಾರೆ. ಅಧಿಕೃತ ಅಧ್ಯಯನಗಳು ಸಹ ಭಾರತೀಯ ರಾಜ್ಯಗಳ ಬಹುಪಾಲು ನೈಸರ್ಗಿಕ ವಿಪತ್ತುಗಳಿಂದ ಸುರಕ್ಷಿತವಾಗಿಲ್ಲ ಎಂದು ಬಹಿರಂಗಪಡಿಸಿದೆ.

ವಿಪತ್ತು ಸನ್ನದ್ಧತೆಯು ಅತ್ಯಂತ ಮಹತ್ವದ್ದಾಗಿದ್ದರೂ ಪರಿಸರ ನಾಶವನ್ನು ಕಡಿಮೆ ಮಾಡುವುದು ಅಷ್ಟೇ ಮುಖ್ಯ. ಈ ದಶಕಗಳ ಪ್ರಕೃತಿಯ ವಿನಾಶವು ಇನ್ನೂ ಮುಂದುವರಿದರೆ ಮಾನವ ಕುಲ ನಿರ್ನಾಮವಾಗಬಹುದು. ಅರೇಬಿಯನ್ ಸಮುದ್ರದ ಮೇಲೆ ಚಂಡಮಾರುತಗಳು ಕಳೆದ ಕೆಲವು ವರ್ಷಗಳಿಂದ ಹೆಚ್ಚುತ್ತಿವೆ. ಉಷ್ಣ ಬಿರುಗಾಳಿಗಳು, ಅಮೆಜಾನ್ ಕಾಡು ಬೆಂಕಿ, ಬೆಳೆ ವಿನಾಶಕಾರಿ ಮಿಡತೆ ಹಿಂಡುಗಳು ಹೆಚ್ಚಾಗುವುದು ಹವಾಮಾನ ಬದಲಾವಣೆಯ ಪರಿಣಾಮಗಳು. ನೀರು ಮತ್ತು ಕಾಡುಗಳು ಮಾತ್ರವಲ್ಲ, ಪ್ರತಿ ನೈಸರ್ಗಿಕ ಸಂಪನ್ಮೂಲವನ್ನು ವಿವೇಕದಿಂದ ಬಳಸಬೇಕು. ಪರಿಸರವನ್ನು ಸಂರಕ್ಷಿಸುವಲ್ಲಿ ಸರ್ಕಾರಗಳು ಮತ್ತು ನಾಗರಿಕರಿಗೆ ದೂರದೃಷ್ಟಿಯ ಕೊರತೆಯಿದ್ದರೆ, ಭವಿಷ್ಯದ ಪೀಳಿಗೆಗೆ ವಾಸಿಸಲು ಜಗತ್ತು ಇಲ್ಲದಿರಬಹುದು ಎಂದು ಅಧ್ಯಯನ ಎಚ್ಚರಿಸಿದೆ.

ABOUT THE AUTHOR

...view details