ಕರ್ನಾಟಕ

karnataka

ETV Bharat / bharat

ಶೈಕ್ಷಣಿಕ ಸ್ನೇಹಿಯಾದ ಫೇಸ್​ಬುಕ್... ಆನ್​ಲೈನ್​ ಶಿಕ್ಷಣಕ್ಕೆ 'ಎಜುಕೇಟರ್ ಹಬ್' ಪ್ರಾರಂಭ - ಫೇಸ್​ಬುಕ್ ಎಜುಕೇಟರ್ ಹಬ್

ಶಿಕ್ಷಕರನ್ನು ಬೆಂಬಲಿಸಲು ಹಾಗೂ ಪಠ್ಯ ಸಂಬಂಧಿ ಸಂಪನ್ಮೂಲಗಳನ್ನು ಒದಗಿಸಲು ಎಜುಕೇಟರ್ ಹಬ್ ಅಪ್ಲಿಕೇಶನ್‌ಅನ್ನು ಪ್ರಾರಂಭಿಸಲಾಗುತ್ತಿದೆ. ನೂತನ ಶೈಕ್ಷಣಿಕ ವರ್ಷವನ್ನು ನ್ಯಾವಿಗೇಟ್ ಮಾಡಲು ಇದು ಜನರಿಗೂ ಸಹಾಯ ಮಾಡುತ್ತದೆ ಎಂದು ಫೇಸ್​ಬುಕ್​ ಹೇಳಿದೆ.

Facebook
ಫೇಸ್​ಬುಕ್

By

Published : Aug 18, 2020, 6:52 PM IST

ಹೈದರಾಬಾದ್: ಆನ್​ಲೈನ್ ಶಿಕ್ಷಣಕ್ಕೆ ಪೂರಕವಾಗುವಂತೆ ಶಿಕ್ಷಕರನ್ನು ಬೆಂಬಲಿಸಲು ಹಾಗೂ ಆನ್‌ಲೈನ್ ಸಮುದಾಯವನ್ನು ನಿರ್ಮಿಸಲು ಫೇಸ್‌ಬುಕ್ ಎಜುಕೇಟರ್ ಹಬ್ ಅನ್ನು ಪ್ರಾರಂಭಿಸಿದೆ.

ಶಾಲೆಗಳು ಶೀಘ್ರದಲ್ಲೇ ಮತ್ತೆ ತೆರೆಯಲು ಸಜ್ಜಾಗಿರುವುದರಿಂದ ಶಿಕ್ಷಕರು ತಮ್ಮ ಆನ್‌ಲೈನ್ ಸಮುದಾಯವನ್ನು ನಿರ್ಮಿಸಲು ಹಾಗೂ ಆಯಾ ತರಗತಿಗಳಿಗೆ ಬೇಕಾಗುವಂತಹ ಸಂಪನ್ಮೂಲಗಳನ್ನು ಕಂಡುಹಿಡಿಯಲು ಫೇಸ್‌ಬುಕ್ ಎಜುಕೇಟರ್ ಹಬ್ ಅನ್ನು ಪ್ರಾರಂಭಿಸಿದೆ.

ಕೆಲಸ ಮತ್ತು ಮನೆಯ ಜವಾಬ್ದಾರಿಗಳನ್ನು ಸಮತೋಲನಗೊಳಿಸುವುದರ ಜೊತೆಗೆ ಆನ್​ಲೈನ್​ ಬೋಧನೆ ಮತ್ತು ಕಲಿಕೆಯಿಂದ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಿಭಿನ್ನ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕೋವಿಡ್​-19ನ ಲಾಕ್​ಡೌನ್​ ಸಮಯದಲ್ಲಿ ಶೈಕ್ಷಣಿಕ ಅಸ್ತವ್ಯಸ್ತತೆಯನ್ನು ಸರಿದೂಗಿಸಲು ಅಧಿಕಾರಿಗಳು ಈ ವರ್ಷದ ಶೈಕ್ಷಣಿಕ ಕ್ರಮದಲ್ಲಿ ಬದಲಾವಣೆಯನ್ನು ತರಲು ನಿರೀಕ್ಷಿಸುತ್ತಿದ್ದಾರೆ. ಇದಕ್ಕೆ ಎಜುಕೇಟರ್ ಹಬ್ ಸಹಾಯಕವಾಗಿದೆ.

ಶಿಕ್ಷಕರಿಗೆ ಬೆಂಬಲವಾಗಲಿದೆ ಎಜುಕೇಟರ್ ಹಬ್..

ಮಾಧ್ಯಮ ವರದಿಗಳ ಪ್ರಕಾರ, ಶಿಕ್ಷಕರನ್ನು ಬೆಂಬಲಿಸಲು ಹಾಗೂ ಪಠ್ಯ ಸಂಬಂಧಿ ಸಂಪನ್ಮೂಲಗಳನ್ನು ಒದಗಿಸಲು ಎಜುಕೇಟರ್ ಹಬ್ ಅಪ್ಲಿಕೇಶನ್‌ಅನ್ನು ಪ್ರಾರಂಭಿಸಲಾಗುತ್ತಿದೆ. ನೂತನ ಶೈಕ್ಷಣಿಕ ವರ್ಷವನ್ನು ನ್ಯಾವಿಗೇಟ್ ಮಾಡಲು ಇದು ಜನರಿಗೂ ಸಹಾಯ ಮಾಡುತ್ತದೆ. ಅಲ್ಲದೆ ಪ್ರತಿಯೊಬ್ಬರು ಸಂಪರ್ಕದಲ್ಲಿರಲು ಹಾಗೂ ಪ್ರತಿಯೊಬ್ಬರನ್ನು ನೋಡಿಕೊಳ್ಳುವುದರೊಂದಿಗೆ ಇತರ ಅಂತರ್ಗತ ವಾತಾವರಣವನ್ನು ಸೃಷ್ಟಿಸುತ್ತದೆ. ವಿದ್ಯಾರ್ಥಿಗಳೊಂದಿಗೆ ಸಂಭಾಷಣೆ ನಡೆಸಲು ಶಿಕ್ಷಕರಿಗೆ ಸಹಾಯ ಮಾಡುವುದರ ಜೊತೆಗೆ ಸಂಬಂಧಿತ ಸಂಸ್ಥೆಗಳ ಮಾಹಿತಿ ಮತ್ತು ಮಾರ್ಗದರ್ಶಿಗಳನ್ನು ಸಹ ಈ ಎಜುಕೇಟರ್ ಹಬ್ ಒಳಗೊಂಡಿರುತ್ತದೆ.

ಇಂದಿನ ಡಿಜಿಟಲ್ ಜಗತ್ತಿನಲ್ಲಿ ನ್ಯಾವಿಗೇಟ್ ಮಾಡಲು ಹಾಗೂ ಅಭಿವೃದ್ಧಿ ಹೊಂದಲು ಅಗತ್ಯವಾದ ಕೌಶಲಗಳನ್ನು ಅಭಿವೃದ್ಧಿಪಡಿಸಲು ಯುವಜನರಿಗೆ ಸಹಾಯ ಮಾಡುವ ಚಟುವಟಿಕೆಗಳು, ಪಾಠ ಯೋಜನೆಗಳು, ಸಂಭಾಷಣೆ, ವಿಡಿಯೋಗಳು ಮತ್ತು ಇತರೆ ಸಾಧನಗಳನ್ನು ಸಹ ಎಜುಕೇಟರ್​ ಹಬ್ ಒಳಗೊಂಡಿರುತ್ತದೆ. ಇದು ಇತರೆ ಶಿಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಆನ್‌ಲೈನ್ ಸಮುದಾಯದಿಂದ ಬೆಂಬಲವನ್ನು ಪಡೆಯಲು ಶಿಕ್ಷಕರಿಗೆ ಸಹಾಯ ಮಾಡುತ್ತದೆ.

ಇನ್‌ಸ್ಟಾಗ್ರಾಮ್‌ನಲ್ಲಿರುವಾಗ ಎಜುಕೇಟರ್​ ಹಬ್ ಸೆಲ್ಫ್​-ಕೇರ್​ನ ತಂತ್ರಗಳನ್ನು, ಮಾನಸಿಕ ಆರೋಗ್ಯದ ಸಲಹೆಗಳನ್ನು ಹಾಗೂ ಇತರ ಸಂಪನ್ಮೂಲಗಳನ್ನು ನುರಿತ ತಜ್ಞರು ನೀಡುತ್ತಾರೆ ಎಂದು ಫೇಸ್‌ಬುಕ್ ಉಲ್ಲೇಖಿಸಿದೆ. ಅಷ್ಟೇ ಅಲ್ಲದೆ ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಮಾನಸಿಕ ಆರೋಗ್ಯವನ್ನು ಕಾಪಾಡುವಂತಹ ಮಾರ್ಗಸೂಚಿಗಳನ್ನು ನೀಡಿ ಈ ಶೈಕ್ಷಣಿಕ ವರ್ಷದಲ್ಲಿ ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳುವಂತೆ ಫೇಸ್‌ಬುಕ್ ಯೋಜಿಸುತ್ತಿದೆ.

ABOUT THE AUTHOR

...view details