ನವದೆಹಲಿ :ವಿದೇಶಿ ವಿನಿಮಯ ಕಾಯ್ದೆ (ಎಫ್ಇಎಂಎ)ಉಲ್ಲಂಘಿಸಿ ಅಕ್ರಮವಾಗಿ ₹ 6 ಲಕ್ಷ (10 ಸಾವಿರ ಡಾಲರ್) ಹೊಂದಿದ್ದಕ್ಕಾಗಿ ಹುರಿಯತ್ ಕಾನ್ಫೆರೆನ್ಸ್ ನಾಯಕ ಸೈಯದ್ ಅಲಿ ಷಾ ಗಿಲಾನಿಗೆ ಜಾರಿ ನಿರ್ದೇಶನಾಲಯ 14 ಲಕ್ಷ ರೂ. ದಂಡ ವಿಧಿಸಿದೆ.
ಹುರಿಯತ್ ಲೀಡರ್ ಮನೆಯಲ್ಲಿ ಅಕ್ರಮ ವಿದೇಶಿ ಹಣ : ಇಡಿಯಿಂದ 14 ಲಕ್ಷ ರೂ. ದಂಡ - undefined
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ಹೊರಡಿಸಲಾದ ಆದೇಶದ ಭಾಗವಾಗಿ ಗಿಲಾನಿ ಹೊಂದಿದ್ದ ವಿದೇಶಿ ಕರೆನ್ಸಿಯನ್ನು ಮುಟ್ಟುಗೋಲನ್ನು ಇಡಿ ಹಾಕಿಕೊಂಡಿದೆ.
ಸೈಯದ್ ಅಲಿ ಷಾ ಗಿಜಾನಿ
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ಹೊರಡಿಸಲಾದ ಆದೇಶದ ಭಾಗವಾಗಿ ವಿದೇಶಿ ಕರೆನ್ಸಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಶ್ರೀನಗರದ ಹೈದೆರ್ ಪೊರಾ ಪ್ರದೇಶದಲ್ಲಿರುವ ಗಿಲಾನಿ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ವಿದೇಶಿ ಕರೆನ್ಸಿ ವಶಪಡಿಸಿಕೊಳ್ಳಲಾಗಿತ್ತು.