ನವದೆಹಲಿ:ಕಾಂಗ್ರೆಸ್ ನಾಯಕರಿಬ್ಬರು ಈಗಾಗಲೇ ಜಾರಿ ನಿರ್ದೇಶನಾಲಯದ ಸುಳಿಯಲ್ಲಿ ಸಿಲುಕಿ ಜೈಲು ಪಾಲಾಗಿದ್ದು, ಇದೀಗ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಪತಿ ರಾಬರ್ಟ್ ವಾದ್ರಾಗೂ ಇಡಿ ಬಿಸಿ ತಟ್ಟಿದೆ.
ಇಂದು ದೆಹಲಿ ಹೈಕೋರ್ಟ್ನಲ್ಲಿ ರಾಬರ್ಟ್ ವಾದ್ರಾ ಜಾಮೀನು ಅರ್ಜಿ ವಿಚಾರಣೆ ವೇಳೆ ವಿರೋಧ ವ್ಯಕ್ತಪಡಿಸಿದ ಇಡಿ, ಕೆಲ ವ್ಯವಹಾರಗಳ ಬಗ್ಗೆ ವಾದ್ರಾರನ್ನು ವಿಚಾರಣೆ ನಡೆಸಬೇಕಿದ್ದು ಹೀಗಾಗಿ ಅವರನ್ನು ಇಡಿ ವಶಕ್ಕೊಪ್ಪಿಸುವಂತೆ ಕೇಳಿದೆ.
ಅಕ್ರಮ ಹಣ ವ್ಯವಹಾರದ ಬಗ್ಗೆ ವಿಚಾರಣೆಗೆ ವಾದ್ರಾ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎನ್ನುವ ವಿಚಾರವನ್ನೂ ಇಡಿ ಕೋರ್ಟ್ಗೆ ತಿಳಿಸಿದೆ. ಆದರೆ ಈ ವಾದವನ್ನು ವಾದ್ರಾ ಪರ ವಕೀಲರು ತಳ್ಳಿಹಾಕಿದ್ದಾರೆ. ಸದ್ಯ ವಾದ-ಪ್ರತಿವಾದವನ್ನು ಆಲಿಸಿದ ದೆಹಲಿ ಹೈಕೋರ್ಟ್ ನವೆಂಬರ್ 5ಕ್ಕೆ ವಿಚಾರಣೆ ಮುಂದೂಡಿದೆ.
'ಕೈ' ನಾಯಕರಿಂದ ಡಿಕೆಶಿ ಭೇಟಿ: ನ್ಯಾಯದ ವಿಶ್ವಾಸದಲ್ಲಿ ಕಾಂಗ್ರೆಸ್
ಲಂಡನ್ ಮೂಲದ ಆಸ್ತಿಯನ್ನು 17 ಕೋಟಿ ರೂಗೆ ಪಡೆದಿರುವ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂದು ಜಾರಿ ನಿರ್ದೇಶನಾಲಯ ವಾದ್ರಾರನ್ನು ವಿಚಾರಣೆ ನಡೆಸುತ್ತಿದೆ.