ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ₹13 ಸಾವಿರ ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾದ ವಜ್ರಾಭರಣ ಉದ್ಯಮಿ/ ಆರ್ಥಿಕ ಅಪರಾಧಿ ಮೆಹುಲ್ ಚೋಕ್ಸಿಯನ್ನ ಭಾರತಕ್ಕೆ ಏರ್ ಆಂಬುಲೆನ್ಸ್ ಮೂಲಕ ಕರೆತರಲು ಅನುಮತಿ ನೀಡಬೇಕು ಎಂದು ಜಾರಿ ನಿರ್ದೇಶನಾಲಯ ಮುಂಬೈ ಕೋರ್ಟ್ಗೆ ಮನವಿ ಮಾಡಿದೆ.
ವಂಚನೆ ಆರೋಪ ಎದುರಿಸುತ್ತಿರುವ ಮೆಹುಲ್ ಚೋಕ್ಸಿ, ಬಾಂಬೆ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. 'ವೈದ್ಯಕೀಯ ಕಾರಣಗಳಿಂದಾಗಿ ತಾವು ಎಲ್ಲೂ ಪ್ರವಾಸ ಮಾಡಲು ಸಾಧ್ಯವಿಲ್ಲ ಎಂದು ಮನವಿ ಮಾಡಿಕೊಂಡರೂ, ಇಡಿ ಪರಿಗಣಿಸುತ್ತಿಲ್ಲ' ಎಂದು ಪ್ರತಿಪಾದಿಸಿದ್ದರು ಚೋಕ್ಸಿ ಪರ ವಕೀಲರು. ಅಷ್ಟೇ ಅಲ್ಲ ಇದಕ್ಕೆ ಸಂಬಂಧಪಟ್ಟ ವೈದ್ಯಕೀಯ ದಾಖಲೆಗಳನ್ನು ಹಾಜರಿಪಡಿಸಿದ್ದು, ಪ್ರವಾಸ ಮಾಡುವಂತಿಲ್ಲ ಎಂದು ಶಿಫಾರಸು ಮಾಡಿ ಅವರಿಗೆ ಬರೆದುಕೊಟ್ಟಿರುವ ಔಷಧ ಚೀಟಿಗಳನ್ನು ಕೋರ್ಟ್ಗೆ ಲಗತ್ತಿಸಿದ್ದರು.