ಕರ್ನಾಟಕ

karnataka

ETV Bharat / bharat

ರಾಜಸ್ಥಾನ ಸಿಎಂ ಸಹೋದರನ ಆಸ್ತಿಪಾಸ್ತಿಯ ಮೇಲೆ ’ಇ.ಡಿ’ ಈಟಿ..! - ರಾಜಸ್ತಾನ ಸಿಎಂ

ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯ ರಾಜಸ್ತಾನ ಸಿಎಂ ಅಶೋಕ್​ ಗೆಹ್ಲೋಟ್ ಸಹೋದರ ಅಗ್ರಸೇನ್​ ಗೆಹ್ಲೋಟ್ ಆಸ್ತಿ- ಪಾಸ್ತಿಗಳ ಮೇಲೆ ದಾಳಿ ಮಾಡಿದೆ

ED raids
ಜಾರಿ ನಿರ್ದೇಶನಾಲಯ ದಾಳಿ

By

Published : Jul 22, 2020, 1:43 PM IST

ನವದೆಹಲಿ:ರಸಗೊಬ್ಬರ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯ ರಾಜಸ್ತಾನ ಸಿಎಂ ಅಶೋಕ್​ ಗೆಹ್ಲೋಟ್ ಸಹೋದರ ಅಗ್ರಸೇನ್​ ಗೆಹ್ಲೋಟ್ ಆಸ್ತಿ-ಪಾಸ್ತಿಗಳ ಮೇಲೆ ದಾಳಿ ಮಾಡಿದೆ.

ರಾಜಸ್ಥಾನ ಮಾತ್ರವಲ್ಲದೇ ಪಶ್ಚಿಮ ಬಂಗಾಳ, ಗುಜರಾತ್​, ದೆಹಲಿಗಳಲ್ಲಿ ಸುಮಾರು 13 ಪ್ರದೇಶಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಇದರ ಜೊತೆಗೆ ರಸಗೊಬ್ಬರ ಹಗರಣದಲ್ಲಿ 7 ಕೋಟಿ ರೂಪಾಯಿ ತೆರಿಗೆ ದಂಡದ ಆರೋಪದಲ್ಲಿ ಜೋಧಪುರದಲ್ಲಿರುವ ಅಗ್ರಸೇನ್​ ಗೆಹ್ಲೋಟ್​ರ ಮನೆ ಮೇಲೆಯೂ ದಾಳಿ ಮಾಡಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇದಕ್ಕೂ ಮೊದಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ತೆರಿಗೆ ಇಲಾಖೆ ದಾಖಲಿಸಿದ್ದ ದೂರು ಹಾಗೂ ಚಾರ್ಜ್​ಶೀಟ್​ ಆಧಾರದಲ್ಲಿ ಅಗ್ರಸೇನ್​ ಗೆಹ್ಲೋಟ್​ ಮೇಲೆ ದೂರನ್ನು ದಾಖಲಿಸಿಕೊಂಡಿದ್ದರು.

ಈಗ ರಾಜಸ್ಥಾನದಲ್ಲಿ 6 ಸ್ಥಳಗಳಲ್ಲಿ, ಗುಜರಾತ್​ನಲ್ಲಿ 4, ಪಶ್ಚಿಮ ಬಂಗಾಳ ಹಾಗೂ ದೆಹಲಿಯಲ್ಲಿ ತಲಾ ಸ್ಥಳದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ, ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details