ಮುಂಬೈ:ಮುಂಬೈ ಪೊಲೀಸರು ತನಿಖೆ ನಡೆಸುತ್ತಿರುವ ಟಿಆರ್‌ಪಿ ರೇಟಿಂಗ್ ಹಗರಣದಲ್ಲಿ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇಡಿ) ಮನಿ ಲಾಂಡರಿಂಗ್ ದೂರು ದಾಖಲಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಟಿಆರ್‌ಪಿ ರೇಟಿಂಗ್ ಹಗರಣ: ಮನಿ ಲಾಂಡರಿಂಗ್ ದೂರು ದಾಖಲಿಸಿದ ಇಡಿ - TRP scam probed by Mumbai police
ಟಿಆರ್‌ಪಿ ರೇಟಿಂಗ್ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮನಿ ಲಾಂಡರಿಂಗ್ ದೂರು ದಾಖಲಿಸಿದೆ. ಮುಂಬೈ ಪೊಲೀಸ್ ಎಫ್‌ಐಆರ್ ಅಧ್ಯಯನ ಮಾಡಿದ ನಂತರ ಇಡಿ ದೂರು ದಾಖಲಿಸಿದೆ.
ಟಿಆರ್‌ಪಿ ರೇಟಿಂಗ್ ಹಗರಣದಲ್ಲಿ ಮನಿ ಲಾಂಡರಿಂಗ್ ದೂರು ದಾಖಲಿಸಿದ ಇಡಿ
ಕೇಂದ್ರ ತನಿಖಾ ಸಂಸ್ಥೆ ಪೊಲೀಸ್ ಎಫ್‌ಐಆರ್‌ಗೆ ಸಮನಾದ ಜಾರಿ ಪ್ರಕರಣ ಮಾಹಿತಿ ವರದಿಯನ್ನು (ಇಸಿಐಆರ್) ಸಲ್ಲಿಸಿದೆ. ಅಕ್ಟೋಬರ್‌ನಲ್ಲಿ ದಾಖಲಾದ ಮುಂಬೈ ಪೊಲೀಸ್ ಎಫ್‌ಐಆರ್ ಅಧ್ಯಯನ ಮಾಡಿದ ನಂತರ ಇಡಿಈ ದೂರು ದಾಖಲಿಸಿದೆ