ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಭಾರತದ ಆರ್ಥಿಕತೆಗೆ ಹೊಡೆತ ಬಿದ್ದಿದೆ ಎಂಬ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ವಿರೋಧ ವ್ಯಕ್ತಪಡಿಸಿದ್ದಾರೆ. ಆರ್ಥಿಕತೆಗೆ ನಾಶವಾಗಲು 3 ಮುಖ್ಯ ಕಾರಣಗಳಿವೆ. ಅವು ನೋಟು ಅಮಾನ್ಯೀಕರಣ, ದೋಷಪೂರಿತ ಜಿಎಸ್‌ಟಿ ಮತ್ತು ವಿಫಲವಾದ ಲಾಕ್‌ಡೌನ್ ಎಂದಿದ್ದಾರೆ.
ನೋಟು ರದ್ದತಿ, ದೋಷಪೂರಿತ ಜಿಎಸ್‌ಟಿ, ವಿಫಲ ಲಾಕ್ಡೌನ್ನಿಂದ ಆರ್ಥಿಕತೆ ನೆಲಕಚ್ಚಿದೆ: ರಾಹುಲ್ - ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಭಾರತದ ಆರ್ಥಿಕತೆಗೆ ಹೊಡೆತ ಬಿದ್ದಿದೆ ಎಂಬ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಆರ್ಥಿಕತೆ ನೆಲಕಚ್ಚಿದ್ದು ನೋಟು ಅಮಾನ್ಯೀಕರಣ, ದೋಷಪೂರಿತ ಜಿಎಸ್‌ಟಿ, ವಿಫಲ ಲಾಕ್‌ಡೌನ್ ನಿಂದ ಆಕ್ಟ್ ಆಫ್ ಗಾಡ್ ನಿಂದಲ್ಲ: ರಾಹುಲ್
'ಆಕ್ಟ್ ಆಫ್ ಗಾಡ್' ಅಂದರೆ ದೇವರ ಕೃತ್ಯದಡಿಯಲ್ಲಿ ಬರುವ ಕೋವಿಡ್ ಸಾಂಕ್ರಾಮಿಕ ರೋಗದಿಂದ ಆರ್ಥಿಕತೆಗೆ ತೊಂದರೆಯಾಗಿದೆ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಇನ್ನೂ ಸಂಕುಚನ ಕಾಣಲಿದೆ ಎಂದು ಸೀತಾರಾಮನ್ ಹೇಳಿದ್ದರು.
ಸೀತಾರಾಮನ್ ಹೇಳಿಕೆಗೆ ಸಂಬಂಧಿಸಿದಂತೆ ಒಂದು ಸುದ್ದಿಯನ್ನು ಟ್ಯಾಗ್ ಮಾಡಿರುವ ರಾಹುಲ್ ಗಾಂಧಿ, "ಭಾರತದ ಆರ್ಥಿಕತೆಯು ಮೂರು ಕ್ರಿಯೆಗಳಿಂದ ನಾಶವಾಗಿದೆ. ಅವು ನೋಟು ಅಮಾನ್ಯೀಕರಣ, ದೋಷಪೂರಿತ ಜಿಎಸ್‌ಟಿ ಹಾಗೂ ವಿಫಲವಾದ ಲಾಕ್‌ಡೌನ್. ಉಳಿದದ್ದೇನಾದರೂ ಕಾರಣವೆಂದು ನೀಡಿದರೆ ಅದು ಸುಳ್ಳು" ಎಂದು ಟ್ವೀಟ್ ಮಾಡಿದ್ದಾರೆ.
Last Updated : Aug 29, 2020, 12:55 PM IST