ಕರ್ನಾಟಕ

karnataka

ETV Bharat / bharat

ಕುಸಿಯುತ್ತಿರುವ ಆರ್ಥಿಕತೆ... ಕಠೋರ ಪರಿಸ್ಥಿತಿ ಬಗ್ಗೆ ಸೋನಿಯಾ ವಾರ್ನಿಂಗ್​ - ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸುದ್ದಿ

ಪಕ್ಷದ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ದೇಶದ ಮುಂದೆ ದೊಡ್ಡ ಸವಾಲಿದೆ. ಆರ್ಥಿಕ ಪರಿಸ್ಥಿತಿ ಕಠೋರವಾಗಿದೆ ಎಂದಿದ್ದು, ನಷ್ಟದ ಪ್ರಮಾಣ ದಿನ ದಿನಕ್ಕೂ ಹೆಚ್ಚುತ್ತಲೇ ಸಾಗಿದೆ.

ಸೋನಿಯಾ

By

Published : Sep 12, 2019, 2:51 PM IST

ನವದೆಹಲಿ: ದೇಶದ ಆರ್ಥಿಕತೆ ಕುಸಿತದ ಹಾದಿ ಹಿಡಿದಿರುವ ಬಗ್ಗೆ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಸೋನಿಯಾ ಗಾಂಧಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಅವರು ಪಕ್ಷದ ಸಭೆಯಲ್ಲಿ ಮಾತನಾಡಿದ್ದು, ದೇಶದ ಮುಂದೆ ದೊಡ್ಡ ಸವಾಲಿದೆ. ಆರ್ಥಿಕ ಪರಿಸ್ಥಿತಿ ಕಠೋರವಾಗಿದೆ ಎಂದಿದ್ದು, ನಷ್ಟದ ಪ್ರಮಾಣ ದಿನ ದಿನಕ್ಕೂ ಹೆಚ್ಚುತ್ತಲೇ ಸಾಗಿದೆ.

ಸರ್ಕಾರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಬದಲು ರಾಜಕೀಯ ಆಟ ಆಡುತ್ತಿದೆ. ಕಾಶ್ಮೀರ ಸಮಸ್ಯೆ ಹಾಗೂ ಇನ್ನಿತರ ವಿಷಯಗಳನ್ನ ಮುನ್ನೆಲೆಗೆ ತರುವ ಮೂಲಕ ಆರ್ಥಿಕ ಸಮಸ್ಯೆ ಹಾಗೂ ನಷ್ಟದ ಹೆಚ್ಚಳವನ್ನು ಮುಚ್ಚಿ ಹಾಕುವ ಪ್ರಯತ್ನ ನಿರಂತರವಾಗಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ ಎಂದು ಕಾಂಗ್ರೆಸ್​​ ಮೂಲಗಳು ತಿಳಿಸಿವೆ ಎಂದು ರಾಷ್ಟ್ರೀಯ ಸುದ್ದಿಸಂಸ್ಥೆಯೊಂದು ಹೇಳಿದೆ.

ABOUT THE AUTHOR

...view details