ಕರ್ನಾಟಕ

karnataka

ETV Bharat / bharat

ಮೋದಿಗೆ ಸವಾಲು: ಇಳಿದ ಕೌಟುಂಬಿಕ ಉಳಿತಾಯ, ಬ್ಯಾಂಕುಗಳ ವಿಳಂಬ ನೀತಿ! - undefined

ಭಾರತೀಯರ ಕೌಟುಂಬಿಕ ಉಳಿತಾಯದಲ್ಲಿ ಇಳಿಕೆ ಕಂಡುಬರುತ್ತಿದೆ. ಬ್ಯಾಂಕ್​ಗಳು ಕೂಡ ಬಡ್ಡಿದರ ಕಡಿತದ ಲಾಭವನ್ನು ತಮ್ಮ ಗ್ರಾಹಕರಿಗೆ ವರ್ಗಾಯಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದು ಈ ಅಂಶಗಳ ಹಿನ್ನೆಲೆಯಲ್ಲಿ ನೂತನ ಸರ್ಕಾರಕ್ಕೆ ಆರ್ಥಿಕ ಪ್ರಗತಿ ಸಾಧನೆ ಸುಲಭವಲ್ಲ ಎಂದು ಇಂಡಿಯಾ ರೇಟಿಂಗ್ಸ್‌ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಸಾಂದರ್ಭಿಕ ಚಿತ್ರ

By

Published : May 29, 2019, 7:54 AM IST

ನವದೆಹಲಿ:ಪ್ರಸಕ್ತ ವಿತ್ತೀಯ ವರ್ಷದಲ್ಲಿ ನೂತನ ಸರ್ಕಾರಕ್ಕೆ ಆರ್ಥಿಕ ಪ್ರಗತಿ ಸಾಧಿಸುವುದು ಸುಲಭವಾಗಿಲ್ಲ ಎಂದು ಇಂಡಿಯಾ ರೇಟಿಂಗ್ಸ್ ಸಂಸ್ಥೆ ಹೇಳಿದೆ.

ಭಾರತೀಯರ ಕೌಟುಂಬಿಕ ಉಳಿತಾಯದಲ್ಲಿ ಇಳಿಕೆ ಕಂಡುಬರುತ್ತಿದೆ. ಬ್ಯಾಂಕ್​ಗಳು ಕೂಡ ಬಡ್ಡಿದರ ಕಡಿತದ ಲಾಭವನ್ನು ತಮ್ಮ ಗ್ರಾಹಕರಿಗೆ ವರ್ಗಾಯಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿವೆ. ಹೀಗಾಗಿ, ಹಣಕಾಸು ನೀತಿಗಳ ಮೂಲಕ ಆರ್ಥಿಕ ಬೆಳವಣಿಗೆ ಸಾಧಿಸುವುದು ಅನುಮಾನ ಎಂದು ತಿಳಿಸಿದೆ.

2017-18ರಲ್ಲಿ ಕುಟುಂಬದ ಉಳಿತಾಯವು ಜಿಡಿಪಿಯ ಶೇ 17.2ಕ್ಕೆ ಇಳಿಕೆಯಾಗಿದೆ. ಇದು 1997-98ರ ನಂತರದ ಕನಿಷ್ಠ ಮಟ್ಟವಾಗಿದೆ. 2009-10ರಲ್ಲಿ ಕುಟುಂಬದ ಉಳಿತಾಯ ಪ್ರಮಾಣದ ಶೇ 25.2ರಷ್ಟು ಗರಿಷ್ಠ ಮಟ್ಟದಲ್ಲಿ ಇತ್ತು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿತ್ತು.

ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳು ವಸೂಲಿಯಾಗದ ಸಾಲದ (ಎನ್​ಪಿಎ) ಪ್ರಮಾಣದಿಂದ ಬಳಲುತ್ತಿವೆ. ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ನಗದು ಕೊರತೆಯ ಸಂಕಷ್ಟದಲ್ಲಿವೆ. ಈ ಅಂಶಗಳು ಆರ್ಥಿಕ ವೃದ್ಧಿ ಸಾಧಿಸಲು ಹೊಸ ಸರ್ಕಾರಕ್ಕೆ ಸವಾಲಾಗಲಿವೆ ಎಂದು ವಿಶ್ಲೇಷಿಸಿದೆ.

For All Latest Updates

TAGGED:

ABOUT THE AUTHOR

...view details