ಆರ್ಥಿಕ ಕಾರ್ಯಪಡೆ (ಎಫ್ಎಟಿಎಫ್)ಪಾಕಿಸ್ತಾನವನ್ನು ಜೂನ್ 2020 ರ ತನಕ ಇತರ ಮೇಲ್ವಿಚಾರಣೆ ನ್ಯಾಯವ್ಯಾಪ್ತಿ ಪಟ್ಟಿಗೆ ಸೇರಿಸಲು ನಿರ್ಧಾರ ಕ್ಯೆಗೊಂಡಿತ್ತು. ಇದನ್ನು ಸಾಮಾನ್ಯವಾಗಿ ಗ್ರೇ ಪಟ್ಟಿ ಎಂದು ಕರೆಯಾಗುತ್ತದೆ. ಆರ್ಥಿಕ ಕಾರ್ಯಪಡೆಯ ಪ್ರಾಥಮಿಕ ಸಭೆ ಜೂನ್ ನಲ್ಲಿ ಅದರ ಮುಖ್ಯ ಕಚೇರಿ ಪ್ಯಾರಿಸ್ ನಲ್ಲಿ ನಡೆಯಲಿದೆ. ಈ ಮೊದಲು ಅಂದರೆ ಜೂನ್ 2018 ರಂದು ಪಾಕಿಸ್ತಾನವನ್ನು ಗ್ರೇ ಪಟ್ಟಿಗೆ ಸೇರಿಸಿ , ಆರ್ಥಿಕ ಕಾರ್ಯಪಡೆ ಮಾರ್ಗಸೂಚಿಗಳಿಗೆ ಅನುಸಾರವಾಗಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುವುದರಲ್ಲಿ ಸ್ಪಷ್ಟ ಪ್ರಗತಿಯನ್ನು ಸಾಬೀತುಪಡಿಸಲು 2019 ರ ಅಕ್ಟೋಬರ್ ವರೆಗೆ ಸಮಯವನ್ನು ನೀಡಲಾಗಿತ್ತು.
ಪಾಕಿಸ್ತಾನದ ಮೇಲೆ ಇತ್ತೀಚಿನ ನಿರ್ಧಾರದ ಪ್ರಭಾವವನ್ನು ಅರ್ಥಮಾಡಿಕೊಳ್ಳಲು, ನಾವು ಆರ್ಥಿಕ ಕಾರ್ಯಪಡೆ, ಅದರ ಸದಸ್ಯತ್ವ, ಕೆಲಸ ಮತ್ತು ಕಾರ್ಯವಿಧಾನಗಳ ಬಗ್ಗೆ ಒಂದು ಕಲ್ಪನೆಯನ್ನು ಹೊಂದಿರಬೇಕಾಗುತ್ತದೆ. ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಸಮಗ್ರತೆಗೆ ಧಕ್ಕೆ ತರುವ ಹಣ ವರ್ಗಾವಣೆ, ಭಯೋತ್ಪಾದಕ ಕೃತ್ಯಕ್ಕೆ ಹಣಕಾಸು ಪೂರೈಕೆ ಮತ್ತು ಇತರ ಸಂಬಂಧಿತ ಬೆದರಿಕೆಗಳನ್ನು ಹತ್ತಿಕ್ಕಲು, ಪರಿಣಾಮಕಾರಿ ಕಾನೂನು, ನಿಯಂತ್ರಕ ವ್ಯವಸ್ಥೆ ಅನುಷ್ಠಾನ ಗೊಳಿಸುವ ಉದ್ದೇಶದಿಂದ 1989 ರಲ್ಲಿ ಆರ್ಥಿಕ ಕಾರ್ಯಪಡೆಯನ್ನು ಸ್ಥಾಪಿಸಲಾಯಿತು. ಇದರ ಮುಖ್ಯ ಉದ್ದೇಶ, ಅಕ್ರಮ ಹಣಕಾಸು ವರ್ಗಾವಣೆ (ಎಎಮ್ ಎಲ್ ) ಮತ್ತು ಭಯೋತ್ಪಾದನೆಗೆ ಹಣಕಾಸು ಪೂರೈಕೆ ನಿಷೇಧಕ್ಕೆ (ಸಿಎಫ್ ಟಿ ) ಸದಸ್ಯ ರಾಷ್ಟ್ರಗಳು ಕೈಗೊಂಡ ಪರಿಣಾಮಕಾರಿ ಕ್ರಮಗಳ ಬಗ್ಗೆ ಮೇಲ್ವಿಚಾರಣೆ ಮಾಡುವುದಾಗಿರುತ್ತದೆ. ಹಾಗೆಯೇ ಇದು ವಿಶ್ವ ಸಮುದಾಯಕ್ಕೆ ಬಲವಾದ ಶಿಫಾರಸುಗಳನ್ನು ಮಾಡುವ ನೀತಿ ರೂಪಿಸುವ ಸಂಸ್ಥೆಯಾಗಿದೆ. ಪ್ರಸ್ತುತ, ಇದು 39 ಸದಸ್ಯರನ್ನು ಹೊಂದಿದೆ (37 ದೇಶಗಳು ಮತ್ತು ಎರಡು ಪ್ರಾದೇಶಿಕ ಸಂಸ್ಥೆಗಳು- ಐರೋಪ್ಯ ಆಯೋಗ ಮತ್ತು ಗಲ್ಫ್ ಸಮನ್ವಯ ಸಮಿತಿ) . ಎಲ್ಲಾ ಪ್ರಮುಖ ಆರ್ಥಿಕವಾಗಿ ಪ್ರಗತಿ ಹೊಂದಿರುವ ರಾಷ್ಟ್ರಗಳು ಇದರ ಸದಸ್ಯರಾಗಿದ್ದಾರೆ.
ಪಾಕಿಸ್ತಾನ ಹೊರತು ಪಡಿಸಿ ಏಷ್ಯಾದಿಂದ ಜಪಾನ್, ಭಾರತ ಮತ್ತು ಮಲೇಷ್ಯಾ ಮಾತ್ರ ಆರ್ಥಿಕ ಕಾರ್ಯಪಡೆಯ ಸದಸ್ಯರಾಗಿವೆ. ಆರ್ಥಿಕ ಕಾರ್ಯಪಡೆ ಎಂಟು ಸಹ ಸದಸ್ಯರನ್ನು ಹೊಂದಿದ್ದು, ಅವುಗಳು ಅಕ್ರಮ ಹಣಕಾಸು ವರ್ಗಾವಣೆ ಮತ್ತು ಭಯೋತ್ಪಾದಕ ನಿಧಿಯ ಪೂರೈಕೆ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರ ಪಡೆದ ಪ್ರಾದೇಶಿಕ ಸಂಸ್ಥೆಗಳಾಗಿವೆ. ಭಾರತ ಮತ್ತು ಪಾಕಿಸ್ತಾನ ಕೂಡ ಇದರ ಸಹ ಸದಸ್ಯ ರಾಷ್ಟ್ರ ಗಳಾಗಿವೆ. ಏಷ್ಯಾ ಪೆಸಿಫಿಕ್ ಗ್ರೂಪ್ (ಎಪಿ ಜಿ). ಇದರ ಜತೆಗೆ ಆರ್ಥಿಕ ಕಾರ್ಯಪಡೆ ಹತ್ತು ವೀಕ್ಷಕ ಸಂಸ್ಥೆಗಳನ್ನು ಹೊಂದಿದೆ. ಅವುಗಳಲ್ಲಿ ಹೆಚ್ಚಿನವು ಪ್ರಾದೇಶಿಕ ಬ್ಯಾಂಕಿಂಗ್ ಅಥವಾ ವಿಶ್ವ ಬ್ಯಾಂಕ್ ಸೇರಿದಂತೆ ಆರ್ಥಿಕ ಸಂಸ್ಥೆಗಳು. ಇದರ ಅಧ್ಯಕ್ಷ ರಾಗಿ ಒಂದು ವರ್ಷ ಅವಧಿಗೆ ಆಯ್ಕೆ ಮಾಡಲಾಗುತ್ತದೆ. ನಂತರ ಇನ್ನೊಂದು ದೇಶ ಅಧ್ಯಕ್ಷೀಯ ಜವಾಬ್ಧಾರಿಯನ್ನು ನಿರ್ವಹಿಸುತ್ತದೆ. ಸದ್ಯ ಜುಲೈನಿಂದ ಜೂನ್ ವರೆಗೆ ಚೀನಾ ಅಧ್ಯಕ್ಷ ರಾಷ್ಟ್ರವಾಗಿ ಆಯ್ಕೆಯಾಗಿದೆ. ಸದಸ್ಯ ರಾಷ್ಟ್ರ ಗಳು ಆದೇಶವನ್ನು ಪಾಲಿಸಿರುವ ಬಗ್ಗೆ ಚರ್ಚಿಸಲು ಮತ್ತು ನಿರ್ಧಾರ ಕ್ಯೆಗೊಳ್ಳಲು ಪ್ರತಿ ವರ್ಷ, ಆರ್ಥಿಕ ಕಾರ್ಯ ಪಡೆ ಮೂರು ಸರ್ವ ಸದಸ್ಯರ ಸಭೆಗಳನ್ನು ಫೆಬ್ರವರಿ, ಜೂನ್ ಮತ್ತು ಅಕ್ಟೋಬರ್‌ನಲ್ಲಿ ನಡೆಸುತ್ತದೆ. ಅಕ್ರಮ ಹಣಕಾಸು ವರ್ಗಾವಣೆ ಮತ್ತು ಭಯೋತ್ಪಾದಕ ನಿಧಿಯ ಪೂರೈಕೆ ಮಾಡಿತ್ತಿದೆ ಎಂಬ ಕಾರಣಕ್ಕಾಗಿ (ಎಎಂಎಲ್ / ಸಿಟಿಎಫ್ ) ದೇಶಗಳನ್ನು ಮೇಲ್ವಿಚಾರಣೆ ಮಾಡುವ ಸಲುವಾಗಿ ನಲವತ್ತು "ಅಗತ್ಯ ಮಾನದಂಡಗಳು" ಮತ್ತು ಒಂಬತ್ತು "ಹೆಚ್ಚುವರಿ ಮಾನದಂಡಗಳು" ರೂಪಿಸಲಾಗಿದೆ. ಸದಸ್ಯ ರಾಷ್ಟ್ರ ಗಳು ಅಗತ್ಯ ಮಾನದಂಡಗಳನ್ನು ಪೂರೈಸುವುದು ಕಡ್ಡಾಯವಾಗಿದ್ದು, ಹೆಚ್ಚುವರಿ ಮಾನದಂಡಗಳು ಐಚ್ಚಿಕ ವಾಗಿದೆ ಮತ್ತು ಇದು ಅಗತ್ಯ ನಿರ್ಧಾರ ಕೈಗೊಳ್ಳಲು ಆರ್ಥಿಕ ಕಾರ್ಯ ಪಡೆ ಮಾತ್ರ ಸಹಾಯ ಮಾಡುತ್ತದೆ. ಎಂಎಲ್ / ಎಫ್ ಟಿ ಅಪರಾಧಗಳಾದ ಗ್ರಾಹಕನ ಶ್ರದ್ಧೆ, ಹಣಕಾಸಿನ ವಹಿವಾಟಿನ ಪಾರದರ್ಶಕತೆ, ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳುವುದು ಮತ್ತು ಆರ್ಥಿಕ ಅಪರಾಧಗಳ ತನಿಖೆ ನಡೆಸುವ ರಾಷ್ಟ್ರೀಯ ಅಧಿಕಾರಿಗಳಿಗೆ ಸಂಶಯಾಸ್ಪದ ವಹಿವಾಟುಗಳನ್ನು ವರದಿ ಮಾಡುವುದು ಸಾಮಾನ್ಯವಾಗಿ ಅಗತ್ಯ ಮಾನದಂಡಗಳಾಗಿರುತ್ತವೆ.