ನವದೆಹಲಿ: ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪುಲ್ವಾಮಾ ದಾಳಿ ಕುರಿತಾಗಿ ಮಾತನಾಡಬಾರದು ಎಂದು ಹೇಳಿರುವ ಚುನಾವಣಾ ಆಯುಕ್ತರನ್ನು ಜೈಲಿಗೆ ದೂಡುತ್ತೇನೆ ಎಂದು ಅಂಬೇಡ್ಕರ್ ಮೊಮ್ಮಗ, ವಂಚಿತ್ ಬಹುಜನ್ ಅಘಾದಿ ಪಕ್ಷದ ನಾಯಕ ಪ್ರಕಾಶ್ ಅಂಬೇಡ್ಕರ್ ಘೇರಾವ್ ಹಾಕಿದ ಘಟನೆ ನಡೆದಿದೆ.
ಮಹಾರಾಷ್ಟ್ರದ ಯವತ್ಮಲ್ನಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗ ನಮ್ಮೊಂದಿಗೆ ತಮಾಷೆ ಮಾಡುತ್ತಿದೆ. ನಾವು ಪುಲ್ವಾಮ ದಾಳಿ ಕುರಿತಾಗಿ ಮಾತನಾಡುತ್ತೇನೆ ಎಂದು ಹೇಳಿದರು.
ಚುನಾವಣಾ ಆಯೋಗ ಪುಲ್ವಾಮ ಕುರಿತಾಗಿ ಮಾತನಾಡಬಾರದು ಎಂದು ಹೇಳುತ್ತೆ. ಏಕೆ ಮಾತನಾಡಬಾರದು? ಅದು ನನ್ನ ಹಕ್ಕು. ನಾನೇನು ಬಿಜೆಪಿಯವನಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಚುನಾವಣಾ ಆಯುಕ್ತರನ್ನು ಎರಡು ದಿನಗಳ ಕಾಲ ಜೈಲಿಗೆ ದೂಡುತ್ತೇನೆ ಎಂದು ಹೇಳಿದ್ದಾರೆ.